fbpx

ಹೋಳಿ ಹಬ್ಬ : ಬನಾಯೇಂಗೆ ಮಂದಿರ್ ಹಾಡು ನಿಷೇಧ

 : ಹೋಳಿ ಹಬ್ಬ ಆಚರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿಪಾಲನೆಯ ಸಲುವಾಗಿ ಗಂಗಾವತಿ ನಗರದಲ್ಲಿ ಮಾ. ೦೫ ರಿಂದ ೦೬ ರವರೆಗೆ ಎರಡು ದಿನಗಳ ಕಾಲ ’ಬನಾಯೇಂಗೆ ಮಂದಿರ್’ ಎಂಬ ಹಾಡನ್ನು ಸಾರ್ವಜನಿಕವಾಗಿ ಹಾಡದಂತೆ ಮತ್ತು ಆಡಿಯೋ ರೂಪದಲ್ಲಿ ಬಿತ್ತರಿಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಆದೇಶ ಹೊರಡಿಸಿದ್ದಾರೆ.
  ಹೋಳಿ ಹಬ್ಬ ಆಚರಣೆ ಸಂದರ್ಭದಲ್ಲಿ ಗಂಗಾವತಿ ನಗರದಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಕಾನೂನು ಸುವ್ಯವಸ್ಥೆ, ಶಾಂತಿಪಾಲನೆ, ಸಾರ್ವಜನಿಕ ಹಿತಾಸಕ್ತಿ ಹಾಗೂ ಕೋಮು ಸೌಹಾರ್ದತೆಯನ್ನು ಕಾಪಾಡುವ ದೃಷ್ಠಿಯಿಂದ ಕರ್ನಾಟಕ ಪೊಲೀಸ್ ಕಾಯ್ದೆ ೧೯೬೩ ಕಲಂ ೩೫ (೧)(ಇ) ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಗಂಗಾವತಿ ನಗರದಾದ್ಯಂತ ಮಾ. ೦೫ ರಂದು ಬೆಳಿಗ್ಗೆ ೦೬ ಗಂಟೆಯಿಂದ ಮಾ. ೦೬ ರಂದು ರಾತ್ರಿ ೧೦ ಗಂಟೆಯವರೆಗೆ ’ಬನಾಯೇಂಗೆ ಮಂದಿರ್’ ಎಂಬ ಹಾಡನ್ನು ಸಾರ್ವಜನಿಕವಾಗಿ ಹಾಡದಂತೆ ಮತ್ತು ಆಡಿಯೋ ರೂಪದಲ್ಲಿ ಬಿತ್ತರಿಸುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.
Please follow and like us:
error

Leave a Reply

error: Content is protected !!