ಏಪ್ರೀಲ್ ೨೬ರಂದು ಗೋವಾದಲ್ಲಿ ೭ನೇ ಹೊರನಾಡ ಕನ್ನಡ ಸಾಂಸ್ಕೃತಿಕ ಸಮ್ಮೇಳನ

ಕೊಪ್ಪಳ,ಏ೦೭: ಕರ್ಮಭೂಮಿ ಕನ್ನಡ ಸಂಘ ಗೋವಾ ಮತ್ತು ಕರ್ನಾಟಕ ಜಾಗೃತ ವೇದಿಕೆ ಬೆಂಗಳೂರು ಇವರುಗಳ ಜಂಟಿಆಶ್ರಯದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಹ ೭ನೇ ಹೊರನಾಡ ಕನ್ನಡ ಸಾಂಸ್ಕೃತಿಕ ಸಮಾವೇಶ ಮತ್ತು ಸಮ್ಮೇಳನಏಪ್ರೀಲ್ ೨೬ರ ರವಿವಾರ ಗೋವಾದ ಬಿಚ್ಚೋಲಿಯಂನ ಈರಾಬಾಯಿ ಹಾಲ್ ನಲ್ಲಿ ನಡೆಯಲಿದೆ.
  ಈ ಸಾಂಸ್ಕೃತಿಕ ಸಮ್ಮೇಳನದ ಅಧ್ಯಕ್ಷರಾಗಿ ಬೆಳಗಾವಿ ಜಿಲ್ಲೆಯ ಅಥಣಿಯ ಹಿರಿಯ ಸಾಹಿತಿ ನ್ಯಾಯವಾದಿ ಕೆ.ಎಲ್.ಕುಂದರಗಿ ಅವರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಗಿದೆ. ಇವರ ಸಮ್ಮೇಳನಾಧ್ಯಕ್ಷತೆಯಲ್ಲಿ ಗೋವಾದ ಬಿಚ್ಚೋಲಿಯಂದಲ್ಲಿ ಏಪ್ರೀಲ್ ೨೬ ರಂದು ೭ನೇ ಹೊರನಾಡ ಕನ್ನಡ ಸಾಂಸ್ಕೃತಿಕ ಸಮಾವೇಶ ಮತ್ತು ಸಮ್ಮೇಳನ ಅದ್ಧೂರಿಯಾಗಿ ಜರಗುವುದು.
 ಈ ಸಮ್ಮೇಳನದಲ್ಲಿ ಕವಿಗೋಷ್ಠಿ, ಮಹಿಳಾಗೊಷ್ಠಿ, ಮಕ್ಕಳ ಗೋಷ್ಠಿ, ವಿಚಾರ ಸಂಕೀರಣ, ಸಂವಾದ ಹಾಗೂ ಸಾಂಸ್ಕೃತಿಕ ಕಲಾ ಪ್ರದರ್ಶನ ನಡೆಯುವವು. ಕಾರ್ಯಕ್ರಮಕ್ಕೂ ಮುನ್ನ ಬಿಚ್ಚೋಲಿಯಂ ನಗರದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ಹಾಗೂ ಸಮ್ಮೇಳನಾಧ್ಯಕ್ಷರ ಮೆರವಣಿಗೆ ವಾದ್ಯ ಕಲಾ ತಂಡಗಳೊಂದಿಗೆ ಜರುಗಲಿದೆ.
    ಈ  ಹೊರನಾಡ ಕನ್ನಡ ಸಾಂಸ್ಕೃತಿಕ ಸಮಾವೇಶ ಮತ್ತು ಸಮ್ಮೇಳನಕ್ಕೆ  ಗೋವಾ ಹಾಗೂ ಕರ್ನಾಟಕರಾಜ್ಯದ ವಿವಿಧ ಜಿಲ್ಲೆಗಳಿಂದ ಕನ್ನಡಪರ ಸಂಘಟನೆಯ ಪದಾಧಿಕಾರಿಗಳು, ಸಾಂಸ್ಕೃತಿಕ ಕಲಾ ತಂಡಗಳು, ಸಾಹಿತಿಗಳು, ಬುದ್ಧಿಜೀವಿಗಳು, ಪ್ರಗತಿಪರ ಚಿಂತಕರು ಹಾಗೂ ಧಾರ್ಮಿಕ ಗುರುಗಳು ಪಾಲ್ಗೊಳ್ಳಲಿದ್ದಾರೆಂದು ಸಂಚಾಲಕ ಮಹೇಶ್ ಬಾಬು ಸುರ್ವೆ, ಅಖಿಲ ಗೋವಾ ಕನ್ನಡ ಮಹಾ ಸಂಘದ ಅಧ್ಯಕ್ಷ ಸಿದ್ದಣ್ಣ ಮೇಟಿ, ಕರ್ಮಭೂಮಿ ಸಂಘದ ಅಧ್ಯಕ್ಷ ಹನುಮಂತ ಶಿರೂರು ಜಂಟಿಯಾಗಿ ತಿಳಿಸಿ ಸರ್ವರನ್ನು ಸ್ವಾಗತಿಸಿದ್ದಾರೆ.  ಕಾರ್ಯಕ್ರಮದಲ್ಲಿ ಭಾಗವಹಿಸಲು ಬಯಸುವ ಸಾಂಸ್ಕೃತಿಕ ಕಲಾ ತಂಡಗಳು, ಕಲಾವಿದರುಗಳು ಹೆಚ್ಚಿನ ಮಾಹಿತಿಗಾಗಿ ಕಾರ್ಯಕ್ರಮ ಸಂಚಾಲಕ ಮಹೇಶಬಾಬು ಸುರ್ವೆ. ಮೋ. ೯೦೬೦೦೩೨೮೦೮ ರವರನ್ನು ಸಂಪರ್ಕಿಸಬಹುದು.

Related posts

Leave a Comment