ಬ್ಯಾಂಕಿನ ಉಳಿತಾಯ ಖಾತೆದಾರರಿಗೆ ೨ಲಕ್ಷ ರೂ ವಿಮೆ-ಎಂ.ಅಶೋಕ

ಕೊಪ್ಪಳ: ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ ಹಾಗೂ ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆಯಡಿ ಬ್ಯಾಂಕಿನ ಉಳಿತಾಯ ಖಾತೆದಾರರಿಗೆ ೨ಲಕ್ಷ ರೂ ವಿಮೆ ಲಭ್ಯವಿರುತ್ತದೆ ಎಂದು ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕಿನ ಕ್ಷೇತ್ರ ಪ್ರಭಂಧಕ ಎಂ.ಅಶೋಕ ಹೇಳಿದರು.
ಅವರು ಶನಿವಾರದಂದು ಬ್ಯಾಂಕಿನ ವತಿಯಿಂದ ಭಾಗ್ಯನಗರ ಗ್ರಾ.ಪಂ ಆವರಣದಲ್ಲಿ ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ ಹಾಗೂ ಜೀವನ ಜ್ಯೋತಿ ವಿಮಾ ಯೋಜನೆಯ ಉದ್ಘಾಟನೆ ನೇರವೇರಿಸಿ ಮಾತನಾಡಿದ ಅವರು ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆಯು ವಾರ್ಷಿಕ ಪ್ರೀಮಿಯಮ್ ಕೇವಲ ೧೨ರೂಪಾಯಿಯಲ್ಲಿ ೨ಲಕ್ಷರೂ ದುರ್ಘಟನಾ ವಿಮೆಯಿರುತ್ತದೆ, ಇದು ೧೮ರಿಂದ ೭೦ವರ್ಷದವರೆಗಿನ ಬ್ಯಾಂಕಿನ ಎಲ್ಲಾ ಸೇವಿಂಗ್ ಖಾತೆದಾರರಿಗೆ ಹಾಗೂ ಪ್ರಧಾನಮಂತ್ರಿ ಜೀವನಜ್ಯೋತಿ ವಿಮಾಯೋಜನೆ ವಾರ್ಷಿಕ ಪ್ರೀಮಿಯಮ್ ೩೩೦ ರೂಪಾಯಿ ೨ಲಕ್ಷ ರೂ ಜೀವ ವಿಮೆಯಿರುತ್ತದೆ, ಇದು ೧೮ರಿಂದ ೫೦ ವರ್ಷದ ಎಲ್ಲಾ ಸೇವಿಂಗ್ ಬ್ಯಾಂಕ್ ಖಾತೆದಾರರಿಗೆ ಇರುತ್ತದೆ ಎಂದು ತಿಳಿಸಿದರು.
ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷ ಹೊನ್ನೂರುಸಾಬ ಭೈರಾಪೂರು ವಹಿಸಿ ಮಾತನಾಡಿ ಈ ಯೋಜನೆಯ ಸೌಲಭ್ಯವನ್ನು ಬ್ಯಾಂಕಿನ ಗ್ರಾಹಕರು ಪಡೆದುಕೊಳ್ಳುವಂತೆ ತಿಳಿಸಿದರು.
ವೇದಿಕೆಯ ಮೇಲೆ ತಾ.ಪಂ ಸದಸ್ಯ ಶ್ರೀನಿವಾಸ ಹ್ಯಾಟಿ,ಲೀಡ್ ಬ್ಯಾಂಕಿನ ವ್ಯವಸ್ಥಾಪಕ ಆರ್.ವಿ.ಶಿರೂರು, ಭಾಗ್ಯನಗರ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕ ಬೊಮ್ಮಣ್ಣ ಅಕ್ಕಸಾಲಿ, ಕೊಪ್ಪಳ ಬ್ಯಾಂಕಿನ ವ್ಯವಸ್ಥಾಪಕ ವೀರಣ್ಣ ಕೆ. ಉಪಸ್ಥಿತರಿದ್ದರು
Please follow and like us:
error