ಶ್ರೀಗವಿಸಿದ್ದೇಶ್ವರ ಕಾಲೇಜಿಗೆ ೯ ನೆಯ ರ್‍ಯಾಂಕ್ ತಂದುಕೊಟ್ಟ ಕು.ಪೂನಂ

ಕೊಪ್ಪಳ: ನಗರದ ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಕಳೆದ ಸಾಲಿನ ೨೦೧೨ ರಲ್ಲಿ ನಡೆದ ಗುಲಬುರ್ಗಾ ವಿಶ್ವವಿದ್ಯಾಲಯದ ಬಿ.ಕಾಂ ೬ ನೇಯ ಸೆಮಿಸ್ಟರ್ ಪರೀಕ್ಷೆಯಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿನಿಯಾದ ಕು.ಪೂನಂ ಜೈನ್ ೯ ನೆಯ ರ್‍ಯಾಂಕ್ ಪಡೆದಿರುತ್ತಾಳೆ. ಪೂನಂಳ ಈ ಸಾಧನೆಗಾಗಿ ಎಸ್.ಜಿ.ಸೋಲ್ ಟ್ಟಸ್ಟಿಗಳು ಶ್ರೀಮಠದ ಪೀಠಾಧಿಪತಿಗಳು ಆದ ಶ್ರೀ.ಮ.ನಿ.ಪ್ರ.ಜ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಆಶಿರ್ವದಿಸಿದ್ದಾರೆ.
   ಪ್ರಾಚಾರ್ಯ ಪ್ರೊ.ಎಸ್.ಎಲ್.ಮಾಲಿಪಾಟೀಲ ಹಾಗೂ ಶಿಕ್ಷಕ ಮತ್ತು ಸಿಬ್ಬಂಧಿ ವರ್ಗ ಮತ್ತು ಎಸ್.ಜಿ. ಟ್ಟಸ್ಟ ಸದಸ್ಯರುಗಳೆಲ್ಲರೂ ಅಭಿನಂಧಿಸಿದ್ದಾರೆ. 
Please follow and like us:
error