ಕಲಿಕಾ ಗುಣಮಟ್ಟವನ್ನು ಹೆಚ್ಚಿಸಲು ಪ್ರೌಢಶಾಲೆಗಳಿಗೆ ಸಂಪನ್ಮೂಲಗಳ ವಿತರಣೆ

  ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ಪ್ರೌಢಶಾಲಾ ಪಠ್ಯಕ್ಕನುಗುಣವಾಗಿ ವಿಜ್ಞಾನಕ್ಕೆ ಸಂಬಂಧಿಸಿದ ಕಲಿಕೆ ಮತ್ತು ಬೋಧನಾ ಸಂಪನ್ಮೂಲಗಳನ್ನು ಪ್ರೌಢಶಾಲೆಗಳಿಗೆ ಒದಗಿಸಲು ತರಬೇತಿ ನೀಡಿ ಅನುಷ್ಠಾನಗೊಳಿಸಲು ಉದ್ದೇಶಿಸಿದ್ದು, ಆಸಕ್ತ ಮತ್ತು ಅರ್ಹ ಪ್ರೌಢಶಾಲೆಗಳು ತಮ್ಮ ಕೋರಿಕೆ ಪತ್ರವನ್ನು ಸಲ್ಲಿಸಬಹುದಾಗಿದೆ.
  ವಿಜ್ಞಾನ ಮತ್ತು ಗಣಿತ ಪಠ್ಯ ವಿಷಯಗಳಿಗೆ ದೃಶ್ಯ ಮತ್ತು ಚಿತ್ರಗಳ ಮೂಲಕ ಸುಲಭವಾಗಿ ಯಶಸ್ವಿಯಾಗಿ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಸುವ ಉದ್ದೇಶದಿಂದ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ಕಳೆದ ಸಾಲಿನಲ್ಲಿ ಮಾನವ ದೇಹ ಎಂಬ ಅನಿಮೇಶನ್ ಸಿನಿಮಾವನ್ನು ಹೊರತಂದು ಆಯ್ದ ೩೯೦೦ ಪ್ರೌಢಶಾಲೆಗಳಿಗೆ ಉಚಿತವಾಗಿ ವಿತರಿಸಿದೆ.  ಈ ವರ್ಷವೂ ಸಹ ವಿಜ್ಞಾನ ಮತ್ತು ಗಣಿತ ಪಠ್ಯ ವಿಷಯಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ಸುಲಭವಾಗಿ ಮನದಟ್ಟು ಮಾಡಿಸಬಹುದಾದ ಬೋಧನಾ ಸಂನ್ಮೂಲವನ್ನು ವಿತರಿಸಲು ಉದ್ದೇಶಿಸಲಾಗಿದ್ದು, ಸ್ವಾಮಿ ವಿವೇಕಾನಂದ ಯೂಥ್ ಮೂವ್‌ಮೆಂಟ್ (ಪ್ರಾಜೆಕ್ಟ್ ೧೯೪೭) ಅವರು ಎಸ್.ಎಸ್.ಎಲ್.ಸಿ. ಪಠ್ಯಕ್ಕನುಗುಣವಾಗಿ ತಯಾರಿಸಿರುವ ಕಲಿಕೆ ಮತ್ತು ಬೋಧನಾ ಸಂಪನ್ಮೂಲಗಳನ್ನು ಅಕಾಡೆಮಿಯು ಪರಿಣಿತ ಸಮಿತಿಯ ಮೂಲಕ ಪರಿಷ್ಕರಿಸಲಾಗಿದ್ದು, ರಾಜ್ಯದ ಆಯ್ದ ಪ್ರೌಢಶಾಲೆಗಳಿಗೆ ಉಚಿತವಾಗಿ ವಿತರಿಸಲು ಯೋಜಿಸಲಾಗಿದೆ.
        ಪ್ರೌಢಶಾಲೆ ಪಠ್ಯಕ್ಕನುಗುಣವಾಗಿ ವಿಜ್ಞಾನ ಮತ್ತು ಗಣಿತ ವಿಷಯಗಳಲ್ಲಿ ಒಟ್ಟು ೩೨ ಡಿವಿಡಿ ಗಳಿದ್ದು, ಈ ಕಾರ್ಯಕ್ರಮಕ್ಕೆ ಒಳಪಡುವ ಆಸಕ್ತ ಶಾಲೆಗಳು ಈ ಮುಂದೆ ತೊರಿಸಿದ ವಿವರವನ್ನು ಪಾಲಿಸುವಂತೆ ನಿರ್ದೇಶಕರು ಕೋರಿದ್ದಾರೆ. ಟಿ.ವಿ. ಮತ್ತು ಡಿವಿಡಿ ಪ್ಲೇಯರ್ ಅಥವಾ ಎಲ್.ಸಿ.ಡಿ. ಪ್ರೊಜೆಕ್ಟರ್/ಡಿವಿಡಿ ಪ್ಲೇಯರ್ ಮತ್ತು ಕಂಪ್ಯೂಟರ್ ಹೊಂದಿರಬೇಕು. ಶಿಕ್ಷಕರು ಒಂದು ದಿನದ ತರಬೇತಿಗೆ ಹಾಜರಾಗಬೇಕು. ಶಿಕ್ಷಕರ ತರಬೇತಿಯನ್ನು ಆಯಾ ತಾಲೂಕಿನ ಬಿ.ಇ.ಓ./ ಬಿ.ಆರ್.ಸಿ. ಅವರು ಆಯೋಜಿಸಬೇಕು. ಈ ಎಲ್ಲ ವಿವರವನ್ನು ಹೊಂದಿರುವ ಶಾಲೆಗಳು ಸದರಿ ಸೌಲಭ್ಯಗಳನ್ನು ಪಡೆಯಲು ಸದಸ್ಯ ಕಾರ್ಯದರ್ಶಿ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ವಿಜ್ಞಾನ ಭವನ, ನಂ. ೨೪/೨ (ಬಿ.ಡಿ.ಎ. ಕಾಂಪ್ಲೆಕ್ಸ್ ಹತ್ತಿರ), ೨೧ನೇ ಮುಖ್ಯರಸ್ತೆ, ಬನಶಂಕರಿ ೨ನೇ ಹಂತ ಬೆಂಗಳೂರು-೫೬೦ ೦೭೦. ದೂರವಾಣಿ ಸಂ. ೦೮೦-೨೬೭೧೧೧೬೦. ವಿಳಾಸಕ್ಕೆ ಸಂಪರ್ಕಿಸಿ ಕೋರಬಹುದಾಗಿದೆ.

Please follow and like us:
error