ಆಪ್ ಮುಂದಿನ ದಾರಿ ಯಾವುದು?

ಕಳೆದ ಲೋಕಸಭಾ ಚುನಾವಣೆಯಲ್ಲಿ ಅರವಿಂದ ಕೇಜ್ರಿವಾಲರಿಗೆ ಹೆದರಿದ್ದ ಬಿಜೆಪಿ ಅವರ ತೇಜೋವಧೆ ನಡೆಸಿತ್ತು. ವಾರಣಾಸಿಯಿಂದ ನರೇಂದ್ರ ಮೋದಿ ವಿರುದ್ಧ ಸ್ಪರ್ಸಿದಾಗಲೇ ಅವರ ಮೇಲೆ ಹಲ್ಲೆ ನಡೆಸಿ ಹಿಂದೆ ಸರಿಸಲು ಯತ್ನಿಸಲಾಗಿತ್ತು. ಕೆಲವೆಡೆ ದೈಹಿಕ ದಾಳಿಯೂ ನಡೆದಿತ್ತು. ಕಳೆದ ವಾರ ನಡೆದ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲೂ ಕೇಜ್ರಿವಾಲರ ಮೇಲೆ ಪ್ರಧಾನಿ ಮೋದಿ ಸ್ವತಃ ದಾಳಿ ಆರಂಭಿಸಿದ್ದರು. ಕೇಜ್ರಿವಾಲರನ್ನು ‘ನಕ್ಸಲೀಯ’ ಎಂದು ಬಹಿರಂಗ ಸಭೆಯಲಿ ಕರೆದು (ಹೀಯಾಳಿಸಿ) ಈತನನ್ನು ಕಾಡಿಗೆ ಅಟ್ಟಲು ಪ್ರಚೋದಿಸಿದ್ದರು. ಕೇಜ್ರಿವಾಲ್ ಹುಟ್ಟಿದ ಜಾತಿಯನ್ನೂ ಟೀಕಿಸಿ ಆತನದು ಉಪದ್ವಾಪಿ ಗೋತ್ರ ಎಂದು ಕೆಲ ಬಿಜೆಪಿ ನಾಯಕರು ಟೀಕಿಸಿದ್ದರು
.
ಈ ಎಲ್ಲ ವಿಘ್ನಗಳನ್ನು ಎದುರಿಸಿ ಕೇಜ್ರಿವಾಲ್ ಅಕಾರ ವಹಿಸಿಕೊಂಡಿದ್ದಾರೆ. ಒಂಬತ್ತು ತಿಂಗಳ ಹಿಂದೆ ಕೇಂದ್ರದಲ್ಲಿ ತಾವೇ ಗೆಲ್ಲಿಸಿ ಅಕಾರ ನೀಡಿದ್ದ ಬಿಜೆಪಿಯನ್ನು ಜನ ಒಮ್ಮೆಲೆ ಯಾಕೆ ತಿರಸ್ಕರಿಸಿದರು. ಜನ ತಿರಸ್ಕರಿಸಿದ್ದು ಬರೀ ಬಿಜೆಪಿಯನ್ನಾ? ಮೋದಿ ನಾಯಕತ್ವವನ್ನಾ? ಅಮಿತ್ ಶಾ ಸರ್ವಾಕಾರಿ ವರ್ತನೆಯನ್ನಾ? ಕೋಮು ವಾದಿ ಅಜೆಂಡಾವನ್ನಾ? ಹೀಗೆ ಮಾಧ್ಯಮಗಳಲ್ಲಿ ನಾನಾ ವಿಶ್ಲೇಷಣೆಗಳು ಇನ್ನೂ ನಡೆದಿವೆ. ಕಳೆದ ಒಂಬತ್ತು ತಿಂಗಳ ಬಿಜೆಪಿ ಆಡಳಿತವನ್ನು ವಿಶ್ಲೇಷಿಸಿದರೆ ಸೋಲಿನ ಕೆಲ ಕಾರಣಗಳು ಗೋಚರಿ ಸುತ್ತವೆ.
ಕೇಂದ್ರದಲ್ಲಿ ಅಕಾರಕ್ಕೆ ಬಂದ ನಂತರ ಜನತೆಗೆ ನೀಡಿದ್ದ ಭರವಸೆಗಳನ್ನೆಲ್ಲ ಮರೆತ ಬಿಜೆಪಿ ಸರಕಾರ ಕಾರ್ಪೊರೇಟ್ ಧಣಿಗಳ ಸೇವೆಗೆ ತನ್ನನ್ನು ಅರ್ಪಿಸಿಕೊಂಡಿತು. ಅದರಲ್ಲೂ ರೈತರ ಒಪ್ಪಿಗೆ ಇಲ್ಲದೆ ಅವರ ಭೂಮಿಯನ್ನು ಕಿತ್ತುಕೊಂಡು ಬಂಡವಾಳಶಾಹಿ ಉದ್ಯಮಿ ಗಳ ಮಡಿಲಿಗೆ ಹಾಕುವ ಭೂ ಸ್ವಾೀನ ಕಾಯ್ದೆಗೆ ತಿದ್ದುಪಡಿ ತಂದುದು, ಈ ಸರಕಾರದ ನಿಜಸ್ವರೂಪವನ್ನು ತೋರಿಸಿಕೊಟ್ಟಿತು. ಅಮೆರಿಕ ಜೊತೆ ಮಾಡಿಕೊಂಡ ಅಣು ಒಪ್ಪಂದ ಇನ್ನೂ ಅಪಾಯಕಾರಿಯಾಗಿದೆ. ಭೋಪಾಲನಂಥ ದುರಂತಗಳು ಸಂಭವಿಸಿದರೆ ಅಮೆರಿಕನ್ ಕಂಪೆನಿಗಳು ಪರಿಹಾರ ಕೊಡಬೇಕಿಲ್ಲ ಎಂಬುದು ಈ ಒಪ್ಪಂದದಲ್ಲಿ ಅಡಕವಾದ ಅಂಶ.
 ಈ ಎಲ್ಲ ದೇಶದ್ರೋಹಿ, ಜನದ್ರೋಹಿ ಕೃತ್ಯಗಳನ್ನು ಮರೆಮಾಚಲು ಆರೆಸ್ಸೆಸ್ ‘ಘರ್‌ವಾಪಸಿ’ ಎಂದು ಅಲ್ಪಸಂಖ್ಯಾತರನ್ನು ಹೆದರಿಸಿ ಮರುಮತಾಂತರ ಮಾಡಲು ಮುಂದಾಯಿತು. ಇನ್ನೊಂದು ಕಡೆ ವಿಶ್ವಹಿಂದೂ ಪರಿಷತ್‌ನ ಸಾಕ್ಷಿಮಹಾರಾಜ, ಸಾ್ವ ಪ್ರಾಚಿ ಮುಂತಾದವರು ಹಿಂದೂ ಮಹಿಳೆಯರು ನಾಲ್ಕು ಮಕ್ಕಳನ್ನು ಹಡೆಯ ಬೇಕು, ಐದು ಮಕ್ಕಳನ್ನು ಹಡೆಯಬೇಕು, ಹತ್ತು ಮಕ್ಕಳನ್ನು ಹಡೆಯಬೇಕೆಂದು ತಲೆಗೊಬ್ಬರು ಅವಿವೇಕಿಗಳಂತೆ ಮಾತಾಡ ತೊಡಗಿದರು. ಇನ್ನೊಂದೆಡೆ ಗಾಂ ಹಂತಕ ಗೋಡ್ಸೆ ಪ್ರತಿಮೆ, ಗೋಡ್ಸೆ ಗುಡಿ ನಿರ್ಮಿಸುವ ಬಹಿರಂಗ ಹೇಳಿಕೆಗಳು ಸಂಘಪರಿವಾರದಿಂದ ಬರತೊಡಗಿದವು.
ಬರೀ ಹೇಳಿಕೆಗಳಷ್ಟೇ ಅಲ್ಲ, ದಿಲ್ಲಿ ವಿಧಾನಸಭಾ ಚುನಾವಣೆ ನಡೆದಾಗಲೆ ಒಂದೆರಡು ಬಾರಿ ಚರ್ಚುಗಳ ಮೇಲೆ ಸಂಘಪರಿವಾರದವರು ದಾಳಿ ನಡೆಸಿದರು. ಈ ಎಲ್ಲ ಹಿಂಸಾಚಾರ ನಡೆದಾಗಲೂ ಈ ದೇಶದ ಪ್ರಧಾನಿ ಬಾಯಿ ಬಿಡಲಿಲ್ಲ. ಇದರಿಂದ ಅಲ್ಪಸಂಖ್ಯಾತರು ಮಾತ್ರವಲ್ಲ ದಿಲ್ಲಿಯ ಮಧ್ಯಮ ವರ್ಗದ ಪ್ರಜ್ಞಾವಂತರು ಬಿಜೆಪಿ ವಿರುದ್ಧ ತಿರುಗಿ ಬಿದ್ದರು. ಬರೀ ಬಿಜೆಪಿ ವಿರುದ್ಧ ಮಾತ್ರವಲ್ಲ ಸಂಘ ಪರಿವಾರದ ಹಿಂದೂರಾಷ್ಟ್ರದಂಥ ಕೋಮು ವಾದಿ ಕಾರ್ಯಸೂಚಿಯನ್ನು ತಾವು ಒಪ್ಪಿಕೊಳ್ಳುವುದಿಲ್ಲ ಎಂದು ದಿಲ್ಲಿಯ ಜನತೆ ಒಕ್ಕೊರಲಿನಿಂದ ಹೇಳಿದರು. ದಿಲ್ಲಿ ಚುನಾವಣೆಯ ಲಿತಾಂಶದ ವಿಶ್ಲೇಷಣೆ ಏನೇ ಇರಲಿ ಈ ಚುನಾವಣೆಯಿಂದ ರಾಷ್ಟ್ರ ರಾಜಕಾರಣ ಹೊಸದಿಕ್ಕಿನತ್ತ ಚಲಿಸಲು ಆರಂಭಿಸಿದೆ. ಕಾಂಗ್ರೆಸ್-ಬಿಜೆಪಿ ನಡುವಿನ ದ್ವಿಪಕ್ಷೀಯ ರಾಜಕಾರಣಕ್ಕೆ ಬದಲಾಗಿ ವಿಭಿನ್ನ ವಾದ ಇನ್ನೊಂದು ಪರ್ಯಾಯಕ್ಕೆ ಜನತೆ ತಹತಹಿಸುತ್ತಿದ್ದಾರೆಯೇ? ಹೌದು ಬಿಜೆಪಿಯಂಥ ಕೋಮುವಾದಿ ಪಕ್ಷಕ್ಕೆ ಬದಲಾಗಿ ಸೆಕ್ಯುಲರ್ ಆದ ಎಡ ಮಧ್ಯಗಾಮಿ ಪಕ್ಷವೊಂದು ಜನರಿಗೆ ಬೇಕಾದಂತೆ ಕಾಣುತ್ತದೆ. ಅಂತಲೇ ಜಾತಿ ಧರ್ಮಗಳನ್ನು ಬದಿಗೊತ್ತಿ ಜನರ ಸಮಸ್ಯೆಗಳ ಬಗ್ಗೆ ಮಾತಾಡಿದ ಆಮ್ ಆದ್ಮಿ ಅವರಿಗೆ ಇಷ್ಟವಾಯಿತು. ಕಾಂಗ್ರೆಸ್‌ಗೆ ಬದಲಾಗಿ ಮುಂಚೆ ಜನತಾ ಪರಿವಾರವನ್ನು ಜನ ಚುನಾಯಿಸುತ್ತಿದ್ದರು. ಆರೆಸ್ಸೆಸ್ ಹಂತಕ ಪಡೆ ಈ ಜನತಾ ಪರಿವಾರವನ್ನು ನಾಶ ಮಾಡಿತು. ಲಾಲೂ ಪ್ರಸಾದ್ ಯಾದವ್, ಮುಲಾಯಂ ಸಿಂಗ್‌ರಂಥ ಸೋಷಲಿಸ್ಟರು ಕಾಂಗ್ರೆಸ್ಸಿಗೆ ಭಿನ್ನವಾದ ರಾಜಕಾರಣ ಆರಂಭಿಸಲಿಲ್ಲ. ರಾಮವಿಲಾಸ ಪಾಸ್ವಾನ್, ಉದಿತ್ ರಾಜ್, ರಾಮದಾಸ್ ಅಠಾವಳೆ ಅವರಂಥ ದಲಿತ ರಾಜಕಾರಣಿಗಳು ಅಕಾರಕ್ಕಾಗಿ ಸಂಘಪರಿವಾರಕ್ಕೆ ಶರಣಾಗತ ರಾದರು. ಕಮ್ಯುನಿಸ್ಟ್ ಪಕ್ಷಗಳು ಹೊಸ ಸನ್ನಿವೇಶಕ್ಕೆ ತಕ್ಕಂತೆ ಹೆಜ್ಜೆ ಇಡಲಿಲ್ಲ. ತಮ್ಮ ಕಾರ್ಯಶೈಲಿಯನ್ನು ಬದಲಿಸಿಕೊಳ್ಳಲಿಲ್ಲ. ಹೀಗಾಗಿ ಆಪ್‌ನಂಥ ಹೊಸ ಪರ್ಯಾಯಕ್ಕೆ ಜನ ಹಾತೊರೆಯುತ್ತಿದ್ದಾರೆ. 2019ರ ಲೋಕಸಭೆ ಚುನಾವಣೆ ವೇಳೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದ ಕರಾಳ ಮುಖ ಬಯಲಾಗಲಿದೆ. ಇಡೀ ಭಾರತವನ್ನೇ ದೇಶ-ವಿದೇಶದ ಕಾರ್ಪೊರೇಟ್ ಕಂಪೆನಿಗಳಿಗೆ ಮಾರಾಟ ಮಾಡುವ ಮೂಲಕ ಜನರ ತಿರಸ್ಕಾರಕ್ಕೆ ಗುರಿಯಾಗಲಿದೆ. ಆರೆಸ್ಸೆಸ್‌ನ ಹಿಂದೂ ರಾಷ್ಟ್ರ ಎಂಬ ಜನರನ್ನು ಮತ್ತೇರಿಸುವ ಹೆಂಡವೂ ಮೋದಿ ಸರಕಾರವನ್ನು ಕಾಪಾಡಲು ಸಾಧ್ಯವಿಲ್ಲ. ಆಗ ದೇಶಕ್ಕೆ ಪರ್ಯಾಯ ಯಾವುದು?
 ದಿಲ್ಲಿಯಲ್ಲಿ ದೊರೆತ ಅಕಾರವನ್ನು ಸದುಪಯೋಗ ಪಡಿಸಿಕೊಂಡು ಜನತೆಗೆ ನೀಡಿದ 70 ಭರವಸೆಗಳಲ್ಲಿ ಕೆಲವನ್ನಾದರೂ ಆಮ್ ಆದ್ಮಿ ಈಡೇರಿಸಿದರೆ ಅದು ಸೆಕ್ಯುಲರ್ ರಾಜಕಾರಣದ ಪರ್ಯಾಯ ಕೇಂದ್ರವಾಗುವ ನಿರೀಕ್ಷೆಯಿದೆ. ಆಗ ಈಗಿರುವ ಪಕ್ಷ ಗಳ ಬದಲಾಗಿ ಹೊಸ ರಾಜಕೀಯ ಶಕ್ತಿಯೊಂದು ಹೊರಹೊಮ್ಮುವ ಸೂಚನೆಗಳಿವೆ. ಆದರೆ ಆಮ್ ಆದ್ಮಿ ತನ್ನ ನಿಲುವನ್ನು ಈವರೆಗೆ ಸ್ಪಷ್ಟಪಡಿಸಿಲ್ಲ. ಅದು ಎಡವೋ, ಬಲವೋ ಗೊತ್ತಿಲ್ಲ. ಈ ಪ್ರಶ್ನೆಗೆ ಆಪ್ ನಾಯಕರ ಬಳಿ ಉತ್ತರವಿಲ್ಲ.
ಆಮ್ ಆದ್ಮಿ ಪಕ್ಷಕ್ಕೆ ಹಲವು ವಿಚಾರಧಾರೆಗಳ ಹಿನ್ನೆಲೆಯಿದೆ. ಒಂದೆಡೆ ಪ್ರಶಾಂತ ಭೂಷಣ್, ಯೋಗೇಂದ್ರ ಯಾದವ್‌ರಂಥ ಎಡಪಂಥೀಯರಿದ್ದಾರೆ. ಇನ್ನೊಂದೆಡೆ ಕುಮಾರವಿಶ್ವಾಸ ರಂಥ ಬಲಪಂಥೀಯರು ಆಪ್‌ನಲ್ಲಿ ಕ್ರಿಯಾಶೀಲರಾಗಿದ್ದಾರೆ ‘‘ನಿಮ್ಮ ಸಿದ್ಧಾಂತ ಯಾವುದು?’’ ಎಂದು ಕೇಳಿದರೆ ಅರವಿಂದ ಕೇಜ್ರಿವಾಲ್ ಸ್ಪಷ್ಟವಾಗಿ ಏನನ್ನು ಹೇಳುವು ದಿಲ್ಲ. ಹಾಗೆ ಹೇಳುವ ಸ್ಥಿತಿಯಲ್ಲೂ ಅವರಿಲ್ಲ. ರಾಜಕೀಯ ಪರಿಸ್ಥಿತಿಯೂ ಗೊಂದಲಕಾರಿಯಾಗಿದೆ. ಎಡಪಕ್ಷಗಳು ಕೊಂಚ ಕ್ರಿಯಾಶೀಲವಾದರೆ ಈ ಗೊಂದಲ ನಿವಾರಿಸಬಹುದು.
  
 ಉಭಯ ಕಮ್ಯುನಿಸ್ಟ್ ಪಕ್ಷಗಳು ಈ ವರ್ಷ ಪಾಂಡಿಚೇರಿ ಮತ್ತು ವಿಶಾಖಪಟ್ಟಣದಲ್ಲಿ ಮಹಾವೇಶನ ನಡೆಸಿ ತಮ್ಮ ಮುಂದಿನ ರಾಜಕೀಯ ದಿಕ್ಕು ದೆಸೆಗಳನ್ನು ನಿರ್ಧರಿಸಲಿದ್ದಾರೆ. ಈ ಅವೇಶನಗಳ ನಂತರ ಅವುಗಳ ದಾರಿ ಸ್ಪಷ್ಟವಾಗಲಿದೆ. ಈಗಂತೂ ಎಡಪಕ್ಷಗಳೆಲ್ಲ ಒಂದೇ ವೇದಿಕೆಗೆ ಬಂದು ್ಯಾಸಿಸ್ಟ್ ಅಪಾಯ ಎದುರಿಸಲು ಸನ್ನದ್ಧವಾಗಿವೆ. ಜನಸಂಘಟನೆಗಳಲ್ಲಿ ಇಂದಿಗೂ ಕ್ರಿಯಾಶೀಲವಾಗಿರುವ ಕಮ್ಯುನಿಸ್ಟ್ ಪಕ್ಷಗಳನ್ನು ತಳ್ಳಿ ಹಾಕುವುದು ಸುಲಭವಲ್ಲ. ಆಮ್ ಆದ್ಮಿಯ ಉಳಿದ ಸೈದ್ಧಾಂತಿಕ ಗೊಂದಲಗಳೇನೇ ಇರಲಿ ಅದೊಂದು ಜಾತ್ಯತೀತ ಪಕ್ಷವಾಗಿ ಎಲ್ಲ ಜನರ ಪಕ್ಷವಾಗಿ ಹೊಮ್ಮಿರುವುದು ವಾಸ್ತವ ಸತ್ಯ. ಜಾತ್ಯತೀತ ಭಾರತದ ಉಳಿವಿನಲ್ಲಿ ಅಂದರೆ ಹಿಂದೂರಾಷ್ಟ್ರದ ಹುನ್ನಾರದ ವಿರುದ್ಧ ಹೋರಾಟದಲ್ಲಿ ಆಪ್ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂಬುದನ್ನು ತಳ್ಳಿ ಹಾಕಲಾಗುವುದಿಲ್ಲ.
Please follow and like us:
error