fbpx

ಪರೀಕ್ಷೆಗಳು ವಿದ್ಯಾರ್ಥಿಗಳ ಜ್ಞಾನವನ್ನು ಒರೆಗೆ ಹಚ್ಚುವ ಇರುವ ಅವಕಾಶ – ಡಾ. ಪಿ. ರಾಜಾ

ಕೊಪ್ಪಳ,  ಪರೀಕ್ಷೆಗಳು ವಿದ್ಯಾರ್ಥಿಗಳ ಕೌಶಲವನ್ನು ಒರೆಗೆ ಹಚ್ಚಿ, ಅವರ ಜಾಣ್ಮೆ ಪ್ರದರ್ಶಿಸಲು ಇರುವ ಒಂದು ಸದವಕಾಶ. ವಿದ್ಯಾರ್ಥಿಗಳು ಸದಾ ಕಾಲ ಉನ್ನತ ಮಟ್ಟದ ಕನಸುಗಳನ್ನು ಹೊಂದಿರಬೇಕು. ಜೀವನದ ಒಂದು ತಿರುವು ನನ್ನನ್ನು ಐ.ಪಿ.ಎಸ್. ಮಾಡಲು ಉತ್ತೇಜಿಸಿತು. ನಾನು ಐ.ಪಿ.ಎಸ್. ಅಧಿಕಾರಿಯಾಗಲು ನನ್ನ ಶಿಕ್ಷಕರೇ ಕಾರಣ. ಮಕ್ಕಳು ಶಿಕ್ಷಕರನ್ನು ಗೌರವಿಸಬೇಕು. ಎಲ್ಲ ಪಾಲಕರೂ, ಶಿಕ್ಷಕರೂ ಮಕ್ಕಳಿಗೆ ಒಳ್ಳೆಯದನ್ನೇ ಬಯಸುತ್ತಾರೆ. ಯಾವ ವಿದ್ಯಾರ್ಥಿ ಪಾಲಕರ, ಶಿಕ್ಷಕರ ಮಾತುಗಳನ್ನು ಗೌರವಿಸುತ್ತಾರೋ ಅವರಿಗೆ ಒಳ್ಳೆಯ ಭವಿಷ್ಯ ಕಾದಿದೆ. ಉನ್ನತ ಅಧಿಕಾರಿಯಾಗಲು ಇರುವ ಎಲ್ಲ ಅಡೆ ತಡೆಗಳನ್ನು ಮೀರಿ ಬೆಳೆಯಬೇಕು. ಒಂದು ಕಡು ಹಳ್ಳಿಯಿಂದ ಬಂದತಹ ನಾನು ಮತ್ತು ನನ್ನ ಸ್ನೇಹಿತರು ಕಷ್ಟದಲ್ಲಿ ಬೆಳೆದು ಬಂದಂತವರು. ಆತ್ಮ ವಿಶ್ವಾಸವಿದ್ದರೆ ಜಗತ್ತನ್ನೇ ಗೆಲ್ಲಬಹುದು. ೧೦ ನೇ ತರಗತಿಯ ನಂತರ ಮಕ್ಕಳು ದೃಢಚಿತ್ತತೆಯಿಂದ ವಿದ್ಯಾಭ್ಯಾಸ ಮಾಡಬೇಕು, ಎದುರಾಗಬಹುದಾದ ಅಡ್ಡಿ-ಆತಂಕಗಳನ್ನು ನಿವಾರಿಸಿಕೊಳ್ಳಬೇಕು. ದುಶ್ಚಟಗಳಿಗೆ ಬಲಿಯಾಗದೇ ಜೀವನದ ಉನ್ನತ ಮಟ್ಟದಲ್ಲಿ ಬೆಳೆಯಬೇಕು ಎಂದು ತಮ್ಮ ಜೀವನದ ನಿದರ್ಶನಗಳನ್ನು ನೀಡುತ್ತ ಕೊಪ್ಪಳ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಾದ ಡಾ. ಪಿ. ರಾಜಾ ಮಕ್ಕಳಿಗೆ ಮಾರ್ಗದರ್ಶನ ನೀಡಿದರು. ಅವರಿಂದು ಕೊಪ್ಪಳದ ಲಯನ್ಸ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ. ಮಕ್ಕಳ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ, ಕಾರ್ಯಕ್ರಮ ಉದ್ಘಾಟಿಸಿ ಮಕ್ಕಳೊಂದಿಗೆ ಯು.ಪಿ.ಎಸ್.ಸಿ. ಪರೀಕ್ಷಾ ಕ್ರಮಗಳು, ಪದ್ಧತಿ ಕುರಿತಾಗಿ ಸಂವಾದವನ್ನೂ ನಡೆಸಿ ಮಕ್ಕಳನ್ನು ಆಕರ್ಷಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಲಯನ್ ಬಸವರಾಜ ಬಳ್ಳೊಳ್ಳಿ ಮಾತನಾಡಿ ಡಾ. ಪಿ. ರಾಜಾ ಅವರಂತಹ ದಕ್ಷ ಅಧಿಕಾರಿಗಳು ಬಂದು ಮಕ್ಕಳಿಗೆ ಮಾರ್ಗದರ್ಶನ ನೀಡಿದ್ದು ಮಕ್ಕಳ ಭವಿಷ್ಯಕ್ಕೆ ಒಳ್ಳೆಯದಾಗಲಿದೆ. ಅವರ ಸ್ಫೂರ್ತಿದಾಯಕ ಮಾತುಗಳು ಮಕ್ಕಳ ಮೇಲೆ ಧನಾತ್ಮಕ ಪರಿಣಾಮ ಬೀರುವುದರಲ್ಲಿ ಸಂಶಯವೇ ಇಲ್ಲ. ಕೊಪ್ಪಳಕ್ಕೆ ಇಂತಹ ಯುವ, ದಕ್ಷ ಮತ್ತು ಚಾಣಾಕ್ಷ ಪೋಲೀಸ್ ವರಿಷ್ಠಾಧಿಕಾರಿಗಳು ದೊರಕಿದ್ದು ಸಂತಸದ ವಿಷಯ. ಎಂ.ಬಿ.ಬಿ.ಎಸ್. ಓದಿ, ಐ.ಪಿ.ಎಸ್. ಪಾಸಾಗಿರುವ ಇವರ ಜೀವನದ ನಿದರ್ಶನಗಳು ಎಲ್ಲರಿಗೂ ಮಾದರಿಯಾಗುತ್ತವೆ ಎಂದು ಹೇಳಿದರು.
ಇದಕ್ಕೂ ಮೊದಲು ತಮ್ಮ ಶಾಲಾ ದಿನಗಳನ್ನು ನೆನಪಿಸಿಕೊಂಡು ವಿದ್ಯಾರ್ಥಿಗಳಾದ ಅಮೃತಾ ಕುಲಕರ್ಣಿ, ಕೀರ್ತಿ ಹಿರೇಮಠ, ರಿಶಬ್ ಮೆಹತಾ ಮತ್ತು ಶ್ರೀನಿಧಿ ಕುಲಕರ್ಣಿ ಮಾತನಾಡಿದರು. ಬೀಳ್ಕೊಡುಗೆ ಸಮಾರಂಭದ ಕುರಿತಾಗಿ ಶಾಲಾ ಪ್ರಾಚಾರ್ಯ ಎ. ಧನಂಜಯನ್, ಶಿಕ್ಷಕರಾದ ಶರಣಗೌಡ, ಸಮೀರ ಜೋಶಿ, ಅಶೋಕ ಬಳ್ಳಾರಿ ಮತ್ತು ಮಹೇಶ ಬಳ್ಳಾರಿ ಮಾತನಾಡಿದರು. ಪೋಲೀಸ್ ವರಿಷ್ಠಾಧಿಕಾರಿಗಳ ಪರಿಚಯವನ್ನು ವೀರೇಶ ಕೊಪ್ಪಳ ಮಾಡಿದರು.
ಕಳೆದ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ವಿಷಯವಾರು ಅತಿ ಹೆಚ್ಚು ಪಡೆದ ಮಕ್ಕಳಿಗೆ ಪ್ರಶಸ್ತಿ ವಿತರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಿಗೆ ಲಯನ್ಸ್ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಲಯನ್ ವಿ.ಎಸ್. ಅಗಡಿ, ಲಯನ್ ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ಶ್ರೀನಿವಾಸ ಗುಪ್ತಾ, ಲಯನ್ ಬಸವರಾಜ ಬಳ್ಳೊಳ್ಳಿ, ಲಯನ್ ಪ್ರಭು ಹೆಬ್ಬಾಳ, ಲಯನ್ ಶಾಂತಣ್ಣ ಮುದಗಲ್ ಸನ್ಮಾನಿಸಿದರು. ಲಯನ್ ಜವಾಹರಲಾಲ್ ಜೈನ್, ಲಯನ್ ಅರವಿಂದ ಅಗಡಿ, ಲಯನ್ ಗುರುರಾಜ ಹಲಗೇರಿ, ಲಯನ್ ಪಿ.ಕೆ. ವಾರದ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ನಿರ್ಗಮಿತ ಎಸ್.ಎಸ್.ಎಲ್.ಸಿ. ಮಕ್ಕಳು ಶಾಲೆಗೆ ಒಂದು ಸುಂದರ ಡಯಸ್ ಕೊಡುಗೆಯಾಗಿ ನೀಡಿದರು. ಆರಂಭದಲ್ಲಿ ಚಂದನಾ, ಸುನಿಧಿ ಪ್ರಾರ್ಥಿಸಿದರೆ, ಸಹನಾ ಮಹೇಶ, ಫಾತಿಮಾ, ಸುಧಾ ಜೋಗಿನ ಮತ್ತು ಶ್ವೇತಾ ಚಿನ್ನೂರು ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ರಂಜಿತಾ ಜಹಾಗಿರದಾರ ವಂದಿಸಿದರು.
Please follow and like us:
error

Leave a Reply

error: Content is protected !!