ಹುಲಿಗೆಮ್ಮ ದೇವಿ ದಸರಾ ಮಹೋತ್ಸವ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ

  : ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ ದಸರಾ ಮಹೋತ್ಸವದ ಅಂಗವಾಗಿ  ಅ.೧೬ ರಿಂದ ೨೩ ರವರೆಗೆ ಪ್ರತಿದಿನ ಸಂಜೆ ೬.೩೦ ಕ್ಕೆ ಶ್ರೀ ಹುಲಿಗೆಮ್ಮ ದೇವಿ ದೇವಾಲಯ ಆವರಣದಲ್ಲಿ ನಗೆಹಬ್ಬ, ಸಿತಾರವಾದನ ಸೇರಿದಂತೆ ಹಲವಾರು  ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. 
ಅ.೧೬ ರಂದು ಲಕ್ಷ್ಮೇಶ್ವರದ ಕೃಷ್ಣ ಕ್ಷತ್ರೀಯ ಇವರಿಂದ ಮಂಗಲವಾದ್ಯ, ಅ.೧೭ ರಂದು ಧಾರವಾಡದ ಆಕಾಶವಾಣಿ ಕಲಾವಿದ ಶಫೀಖಾನ್ ಇವರಿಂದ ಸಿತಾರವಾದನ, ಅ.೧೮ ರಂದು ಗುಲ್ಬರ್ಗಾದ ಮಾಲಾಶ್ರೀ ಕಣವಿ ಹಾಗೂ ಕುಮಾರ ಕಣವಿ ತಂಡದಿಂದ ಭಕ್ತಿಸಂಗೀತ, ಅ.೧೯ ರಂದು ತುಮಕೂರಿನ ಹುಲಿಕಲ್ ನಾಗರಾಜ ಇವರಿಂದ ಕಥಾ ಕೀರ್ತನ (ಲಲಿತಾ ಪಂಚಮಿ), ಅ.೨೦ ರಂದು ಸೊಲ್ಲಾಪುರದ ಆಕಾಶವಾಣಿ ಕಲಾವಿದ ಕೃಷ್ಣೇಂದ್ರ ವಾಡೇಕರ್ ಇವರಿಂದ ದಾಸವಾಣಿ ಮತ್ತು ವಚನ ಸಂಗೀತ, ಅ.೨೧ ರಂದು ರೋಣ ತಾಲೂಕಿನ ಕೊತಬಾಳ ಅರುಣೋದಯ ಕಲಾ ಸಂಘದ ಶಂಕ್ರಣ್ಣ ಸಂಕಣ್ಣವರ್ ಹಾಗೂ ಸಂಗಡಿಗರಿಂದ ವೈವಿಧ್ಯಮಯ ಜಾನಪದ, ಅ.೨೨ ರಂದು ಹುಲಿಗಿ-ಮುನಿರಾಬಾದ್ ಸ್ಥಳೀಯ ಕಲಾವಿದರಿಂದ ನೃತ್ಯ ಮತ್ತು ಸಂಗೀತ ಕಾರ್ಯಕ್ರಮ, ಅ.೨೩ ರಂದು ರಿಚರ್ಡ ಲೂಯಿಸ್ ಹಾಗೂ ಮೈಸೂರು ಆನಂದ ತಂಡದಿಂದ  ಸಂಗೀತಮಯ ನಗೆಹಬ್ಬ ಕಾರ್ಯಕ್ರಮ ಜರುಗಲಿದೆ.
ಪ್ರತಿ ನಿತ್ಯ ಬೆಳಗಿನ ಜಾವ ಶ್ರೀ ಹುಲಿಗೆಮ್ಮ ದೇವಿಯವರ ಸನ್ನಿಧಿಯಲ್ಲಿ ಸುಪ್ರಭಾತ, ಪೂಜೆ, ಮಹಾನೈವೇದ್ಯಗಳು ಜರುಗಲಿವೆ, ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು, ನಾಗಭೂಷಣಂ ಹೊಸಪೇಟೆ ಇವರಿಂದ ಶ್ರೀ ಚಿದಾನಂದಾವಧೂತ ವಿರಚಿತ ಶ್ರೀದೇವಿ ಪುರಾಣ ಪಠಣ ಕಾರ್ಯಕ್ರಮ ಜರುಗಲಿದ್ದು, ಅ.೨೪ ರಂದು ಮಧ್ಯಾಹ್ನ ೩ ಗಂಟೆಯಿಂದ ಶ್ರೀದೇವಿಯವರ ದಶಮಿ ದಿಂಡಿನ ಉತ್ಸವದೊಂದಿಗೆ ಶಮಿ ವೃಕ್ಷಕ್ಕೆ ತೆರಳುವುದು, ಶಮಿ ಪೂಜೆ ತೊಟ್ಟಿಲು ಸೇವೆ ಮಹಾ ಮಂಗಳಾರತಿ ಮಂತ್ರ ಕಾರ್ಯಕ್ರಮ ಮೂಲಕ ದಸರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.

Leave a Reply