ವಿಧ್ಯಾರ್ಥಿನಿಯರಿಗೆ ಸ್ವರಕ್ಷಣಾ ಕುರಿತು ಕರಾಟೆ ತರಬೇತಿ.

ಕೊಪ್ಪಳ-18- ಇತ್ತೀಚಿಗೆ ತಾಲೂಕಿನ ಹಿರೇಬಗನಾಳ ಮತ್ತು ಕರ್ಕಿಹಳ್ಳಿ ಸರಕಾರಿ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಸ್ವರಕ್ಷಣಾ ಕೌಶಲ್ಯಗಳನ್ನು ಆರ್.ಎಂ.ಎಸ್.ಎ ಯೋಜನೆಯಡಿಯಲ್ಲಿ ಕರಾಟೆ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು.
    ಈ ತರಬೇತಿಯಲ್ಲಿ ಇಂಟರ್ ನ್ಯಾಷನಲ್ ಗುಜುರೋ ಕರಾಟೆ ಸಂಸ್ಥೆಯ ಮುಖ್ಯಸ್ಥರಾದ ವಂಶಿ ಕೃಷ್ಣ ಗೌಳಿಯವರು ತರಬೇತಿಯನ್ನು ನೀಡಿದರು. ಹಿರೇಬಗನಾಳ ಶಾಲೆಯ ಮುಖ್ಯಶಿಕ್ಷಕರಾದ ವೀರಭದ್ರಪ್ಪ ಬಿ. ದೈಹಿಕ ಶಿಕ್ಷಕರಾದ ಮಂಜುನಾಥ ಅಯ್ಯರ್ ಹಾಗೂ ಕರ್ಕಿಹಳ್ಳಿ ಶಾಲೆಯ ಮುಖ್ಯಶಿಕ್ಷಕರಾದ ಸದಾನಂದ ಗೌರಮ್ಮ ಹಾಗೂ ಎರಡು  ಶಾಲೆಯ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
Please follow and like us:
error