ವಿಜ್ಞಾನ ವಸ್ತು ಪ್ರದರ್ಶನ ಮೇಳದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

ಕೊಪ್ಪಳ: ಕರ್ನಾಟಕ ವಿಜ್ಞಾನ ಪರಿಷತ್ತು ಬೆಂಗಳುರು ಹಾಗೂ ಗುಲಬಬುರ್ಗ ವಲಯದ ವಿಜ್ಞಾನ ಪರಿಷತ್ತುಗಳ ಸಹಯೋಗದೊಂದಿಗೆ ಇತ್ತೀಚಿಗೆ ಬೀದರ ಗುರುನಾನಕ್ ದೇವ  ಸೈನ್ಸ ಕಾಲೇಜಿನಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಮೇಳವು ಇತ್ತೀಚಿಗೆ ಆಗಸ್ಟ  ದಿನಾಂಕ ೧೧ ಮತ್ತು ೧೨ ಏರ್ಪಡಿಸಲಾಗಿತ್ತು. ನಗರದ ಶ್ರೀಗವಿಸಿದ್ಧಶ್ವರ ಪದವಿ ಮಹಾವಿದ್ಯಾಲಯದ  ಇಬ್ಬರು ಬಿ.ಎಸ್ಸಿ ವಿದ್ಯಾರ್ಥಿಗಳಾದ ಶಿವಕುಮಾರ ಬಹದ್ದೂರಬಂಡಿ ಹಾಗೂ ಪ್ರಕಾಶ ಬುಲ್ಟಿ ರಾಜ್ಯಮಟ್ಟದ ಈ ವಿಜ್ಞಾನ ಮೇಳದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕೇವಲ ಗಾಳಿಯ ಒತ್ತಡದಿಂದ ರಾಕೆಟ್ ಉಡಾವಣೆ ಮಾಡಿದ ಈ ಪ್ರಯೋಗ ಆಯ್ಕೆದಾರರ ಗಮನ ಸೆಳೆಯಿತು. ಉಭಯರಿಗೆ ಶ್ರೀಗವಿಸಿದ್ಧೇಶ್ವರ ಸ್ವಾಮಿಗಳು, ಕಾರ್ಯದರ್ಶಿಗಳಾದ ಎಸ್. ಮಲ್ಲಿಕಾರ್ಜುನ, ಪ್ರಾಚಾರ್ಯ ಎಸ್.ಎಲ್. ಮಾಲಿಪಾಟೀಲ, ವಿಜ್ಞಾನ ಪ್ರಾಧ್ಯಾಪಕ ಪ್ರೊ.ಎಂ.ಎಸ್.ದಾದ್ಮಿ  ಸಮಸ್ತ ಸಿಬ್ಬಂದಿ ಅಭಿನಂಧಿಸಿದ್ದಾರೆ 
Please follow and like us:
error

Related posts

Leave a Comment