ದೃಶ್ಯಕಲಾ ಕಾಲೇಜಿನಲ್ಲಿ ಪ್ರವೇಶಕ್ಕೆ ಅರ್ಜಿ ಆಹ್ವಾನ

 ಮೈಸೂರಿನಲ್ಲಿರುವ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜಿನಲ್ಲಿ ಪ್ರಸಕ್ತ ಸಾಲಿಗೆ ಶೈಕ್ಷಣಿಕ ವರ್ಷಕ್ಕೆ ಪ್ರಥಮ ಎಂ.ಎಫ್.ಎ. ತರಗತಿಗಳ ಪ್ರವೇಶಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
         ಪ್ರಥಮ ಎಂ.ಎಫ್.ಎ. ತರಗತಿಯಲ್ಲಿ ಚಿತ್ರಕಲಾ, ಶಿಲ್ಪಕಲೆ ಹಾಗೂ ಗ್ರಾಫೀಕ್ಸ್ ವಿಭಾಗಗಳಿದ್ದು, ವಿದ್ಯಾರ್ಹತೆ ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಪಡೆದ ಬಿ.ಎಫ್.ಎ. ಅಥವಾ ತತ್ಸಮಾನ ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಪ್ರವೇಶದ ಬಗ್ಗೆ ಅರ್ಜಿ ಮತ್ತು ವಿವರಣ ಪತ್ರಿಕೆಯನ್ನು ಪಡೆಯಲು ರೂ.250/- ಪಾವತಿಸಿ  ಖುದ್ದಾಗಿ ಅಥವಾ ರೂ.275/- ಗಳ ಡಿ.ಡಿ.ಯನ್ನು ಡೀನ್, ಕಾವಾ, ಮೈಸೂರು ಇವರ ಹೆಸರಿನಲ್ಲಿ ಪಡೆದು ಡೀನ್ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು, ಸಿಟಿಐ ಕಟ್ಟಡ ಸಯ್ಯಾಜೀರಾವ್ ರಸ್ತೆ, ಮೈಸೂರು-570001 ಈ ವಿಳಾಸಕ್ಕೆ ಕಳುಹಿಸಿ ಪಡೆಯಬಹುದಾಗಿದೆ. ಸಯ್ಯಾಜಿರಾವ್ ರಸ್ತೆಯಲ್ಲಿ ಸಿಟಿಐ ಕಟ್ಟಡದಲ್ಲಿ  4-07-2014 ರಂದು ಬೆಳಿಗ್ಗೆ 11ಕ್ಕೆ ಆಯಾ ವಿಭಾಗಗಳಲ್ಲಿ ಅರ್ಹತಾ ಪರೀಕ್ಷೆ, ಶುಲ್ಕ ಪಾವತಿಸಲು ಜುಲೈ-10 ಕೊನೆಯ ದಿನವಾಗಿದ್ದು, ಜುಲೈ-14 ರಂದು ತರಗತಿಗಳು ಪ್ರಾರಂಭವಾಗಲಿವೆ. ಅರ್ಜಿ ಸಲ್ಲಿಸಲು ಜೂ.30 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ 0821-2438930/2438931 ನ್ನು ಸಂಪರ್ಕಿಸಬಹುದಾಗಿದೆ  

Leave a Reply