ಜಿಲ್ಲೆಯಲ್ಲಿ ೪೬ ನಾಮಪತ್ರ ಸಲ್ಲಿಕೆ

ಸ್ಥಳೀಯ ಸಂಸ್ಥೆ ಚುನಾವಣೆ : 
ಕೊಪ್ಪಳ ಫೆ.೨೧ : ನಗರ, ಸ್ಥಳೀಯ ಸಂಸ್ಥೆ ಚುನಾವಣೆಗಾಗಿ ಜಿಲ್ಲೆಯ ನಾಲ್ಕು ತಾಲೂಕಿನ ವಿವಿಧ ಪಕ್ಷಗಳ ಅಭ್ಯರ್ಥಿಗಳು ಇಂದು ನಾಮ ಪತ್ರ ಸಲ್ಲಿಸಿದ್ದು, ಒಟ್ಟು ೪೬ ನಾಮಪತ್ರಗಳು ಸಲ್ಲಿಕೆಯಾಗಿವೆ. 
ಕೊಪ್ಪಳ ನಗರಸಭೆ ಸದಸ್ಯ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ೦೧, ಜನತಾದಳ (ಜಾ) ೦೪, ಸ್ವತಂತ್ರರು ೦೪, ಕೆ.ಜೆ.ಪಿ. ೦೧, ಗಂಗಾವತಿ ನಗರಸಭೆ ಸದಸ್ಯ ಸ್ಥಾನಕ್ಕೆ ಬಿ.ಜೆ.ಪಿ. ೦೧, ಸ್ವತಂತ್ರರು ೦೬, ಕುಷ್ಟಗಿ ಪುರಸಭೆಯಿಂದ ಕಾಂಗ್ರೆಸ್ ೦೯ ಅಭ್ಯರ್ಥಿಗಳು, ಬಿ.ಜೆ.ಪಿ. ೦೪, ಜನತಾದಳ (ಜಾ) ೦೩ ಅಭ್ಯರ್ಥಿಗಳು ಸ್ವತಂತ್ರರು ಪಕ್ಷದಿಂದ ೦೬, ಕೆ.ಜೆ.ಪಿ. ೦೧ ಅಭ್ಯರ್ಥಿ, ಬಿ.ಎಸ್.ಆರ್ ೦೫ ಅಭ್ಯರ್ಥಿಗಳು, ಯಲಬುರ್ಗಾ ಪಟ್ಟಣ ಪಂಚಾಯತಿಯಿಂದ ಸ್ವತಂತ್ರ ಪಕ್ಷದಿಂದ ೦೧ ಅಭ್ಯರ್ಥಿ ಇಂದು ನಾಮಪತ್ರ ಸಲ್ಲಿಸಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ   ತಿಳಿಸಿದ್ದಾರೆ.
Please follow and like us:

Leave a Reply