ಬಸವ ಜಯಂತ್ಯೋತ್ಸವ ಪೂರ್ವಭಾವಿ ಸಭೆ

ಮುಂದಿನ ತಿಂಗಳು ಏಪ್ರಿಲ್ ೨೪ ರಂದು ಆಚರಿಸಲಾಗುವ ಬಸವ ಜಯಂತಿ ಉತ್ಸವದ ರೂಪುರೇಷೆ, ಯೋಜನೆಗಳ ಕುರಿತಾಗಿ ಪೂರ್ವಭಾವಿ ಸಭೆಯನ್ನು ಇದೇ ದಿನಾಂಕ : ೧೭-೦೩-೨೦೧೨, ಸೋಮವಾರ, ಸಂಜೆ ೭.೦೦ ಗಂಟೆಗೆ, ಕೋಟೆರಸ್ತೆಯ ಶ್ರೀ ಮಹೇಶ್ವರ ದೇವಸ್ಥಾನದಲ್ಲಿ ಕರೆಯಲಾಗಿದೆ. ಎಲ್ಲ ಬಸವಾಭಿಮಾನಿಗಳು ಮತ್ತು ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಈ ಸಭೆಯಲ್ಲಿ ಭಾಗಿಯಾಗಿ, ಬಸವ ಜಯಂತಿ ಕಾರ್ಯಕ್ರಮದ ರೂಪುರೇಷೆಯ ಬಗ್ಗೆ ಚರ್ಚಿಸಲು ಆಗಮಿಸಬೇಕೆಂದು ಬಸವ ಜಯಂತ್ಯೋತ್ಸವ ಸಮಿತಿಯ ಜಿಲ್ಲಾಧ್ಯಕ್ಷರಾದ ಬಸವರಾಜ ಬಳ್ಳೊಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply