You are here
Home > Koppal News > ದ್ಯಾಮಾಂಬಿಕಾ ದೇವಿ ಜಾತ್ರೆ ಪ್ರಾಣಿಬಲಿ ನಿಷೇಧ.

ದ್ಯಾಮಾಂಬಿಕಾ ದೇವಿ ಜಾತ್ರೆ ಪ್ರಾಣಿಬಲಿ ನಿಷೇಧ.

ಕೊಪ್ಪಳ, ಫೆ.೨೯ (ಕ ವಾ) ಕುಷ್ಟಗಿ ತಾಲೂಕಿನ ಹನಮಸಾಗರ ಠಾಣಾ ವ್ಯಾಪ್ತಿಯ ಕುಂಬಳಾವತಿ ಗ್ರಾಮದ ಶ್ರೀ ದ್ಯಾಮಾಂಬಿಕಾ ದೇವಿ ಜಾತ್ರೆಯಲ್ಲಿ ಯಾವುದೇ ಪ್ರಾಣಿ ಬಲಿ ನೀಡುವಂತಿಲ್ಲ.  ಭಕ್ತಾದಿಗಳು ಸಹಕರಿಸುವಂತೆ ಹನಮಸಾಗರ ಪೊಲೀಸ್ ಠಾಣೆಯ ಆರಕ್ಷಕ ಉಪಪನಿರೀಕ್ಷಕರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಕುಂಬಳಾವತಿ ಗ್ರಾಮದಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಶ್ರೀ ದ್ಯಾಮಾಂಬಿಕಾ ದೇವಿ ಜಾತ್ರೆಯು ಈ ವರ್ಷ ಮಾ.೦೧ ರಿಂದ ೦೬ ರವರೆಗೆ ನಡೆಯಲಿದೆ. ಜಾತ್ರೆ ಸಂದರ್ಭದಲ್ಲಿ ಆಗಮಿಸುವ ಸಾವಿರಾರು ಭಕ್ತರು ದೇವಸ್ಥಾನ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಯಾವುದೇ ಕೋಣ, ಟಗರು, ಕುರಿ, ಕೋಳಿ ಇತ್ಯಾದಿ ಪ್ರಾಣಿಗಳನ್ನು ಬಲಿ ನೀಡದಂತೆ ಹನಮಸಾಗರ ಪೊಲೀಸ್ ಠಾಣೆಯ ಆರಕ್ಷಕ ಉಪಪನಿರೀಕ್ಷಕರು ತಿಳಿಸಿದ್ದಾರೆ.

Leave a Reply

Top