ಬರಾಕ ಒಬಾಮ ಭಾರತ ಪ್ರವಾಸ : ವಿರೋಧ : ಸಿಪಿಐಎಂಎಲ್

ಜನವರಿ ೨೬ ರರಂದು ಅಮೆರಿಕ ಅಧ್ಯಕ್ಷರ ಬರಾಕ ಒಬಾಮ ಭಾರತ ಪ್ರವಾಸವನ್ನು ವಿರೋಧಿಸಿ ದೇಶದ ಆರು ಎಡಪಂಥೀಯ ಪಕ್ಷಗಳು ಕರೆಕೊಟ್ಟಿರುವ ಒಬಾಮ ಹಿಂದಕ್ಕೆ ಹೋಗು ಘೋಷಣೆ ವಾಕ್ಯದೊಂದಿಗೆ ಇಂದು ದಿನಾಂಕ ೨೪-೦೧-೨೦೧೫ ರಂದು ಗಂಗಾವತಿಯ ಶ್ರೀ ಕೃಷ್ಣದೇವರಾಯ ವೃತ್ತದಲ್ಲಿ ಒಬಾಮ ಪ್ರತಿಕೃತಿ ದಹಿಸಲಾಯಿತು. ಭಾರತ ಅಮೆರಿಕ ಕಾರ್ಮಿಕ ಕಾನೂನುಗಳ ಒಪ್ಪಂದ, ಔಷಧ ಒಪ್ಪಂದ, ಪರಿಸರ ಕಾನೂನುಗಳಿಗೆ ತಿದ್ದುಪಡಿ, ನ್ಯೂಕ್ಲಿಯರ್ ಕಾನೂನುಗಳನ್ನು ಸಡಿಲಗೊಳಿಸುವಿಕೆ, ಚಿಲ್ಲರೆ ವ್ಯಾಪಾರಿಯಲ್ಲಿ ವಿದೇಶ ನೇರಬಂಡವಾಳ, ಇವೆಲ್ಲವಗಳು ದೇಶದ ಸಾರ್ವಭೌಮತೆಗೆ ಮತ್ತು ಸ್ವಾವಲಂಬನೆಗೆ ಧಕ್ಕೆ ತರುವಂತದ್ದಾಗಿದೆ. ಇದರ ವಿರುದ್ಧವಾಗಿ ದೇಶದ ಎಡಪಕ್ಷಗಳು ಐಕ್ಯಹೋರಾಟಗಳನ್ನು ಮಾಡಲಿವೆ. 
ನಮ್ಮ ದೇಶದ ಎನ್.ಡಿ.ಎ. ಸರ್ಕಾರವು ಕೂಡಾ ಅಮೆರಿಕದ ತಾಳಕ್ಕೆ ತಕ್ಕಂತೆ, ಅಮೆರಿಕ ಸಾಮ್ರಾಜ್ಯಶಾಹಿ ಧೋರಣೆಗೆ ತಲೆಬಾಗಿರುವದು ವಿಪರ‍್ಯಾಸವೇ ಸರಿ. ನಮ್ಮ ದೇಶದ ಸಂವಿಧಾನ ವಿರೋಧಿ ಅಮೆರಿಕದ ಧೋರಣೆಯನ್ನು ಖಂಡಿಸುತ್ತಾ, ಎಡಪಕ್ಷಗಳು ಒಂದಾಗಿ ಅಮೆರಿಕದ ಸಾಮ್ರಾಜ್ಯಶಾಹಿ ಧೋರಣೆಯ ವಿರುದ್ಧ ದೇಶದ ಎಲ್ಲಾ ಎಡಪಕ್ಷಗಳು ಒಂದಾಗಿ ಹೋರಾಟ ಮಾಡಲಿವೆ .
ಈ ಹೋರಾಟದಲ್ಲಿ ಸಿಪಿಐಎಂಎಲ್ ರಾಜ್ಯಕಾರ್ಯದರ್ಶಿ ಭಾರದ್ವಾಜ್, ಎ.ಐ.ಸಿ.ಸಿ.ಟಿ.ಯು. ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಪ್ಪ, ಪ್ರಗತಿಪರ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷರಾದ ಖಾದರಭಾಷಾ, ಅಯ್ಯಾಲಾದ ಅಧ್ಯಕ್ಷರಾದ ಏಸಪ್ಪ, ಹಮಾಲರ ಸಂಘದ ಅಧ್ಯಕ್ಷ ಗಿಡ್ಡ ಹನುಮಂತಪ್ಪ, ಪಕ್ಷದ ಕಾರ್ಯಕರ್ತರುಗಳಾದ ಮಾರೆಪ್ಪ, ದೊಡ್ಡಹನುಮಂತ ಶ್ರೀನಿವಾಸ ಮತ್ತೀತರು ಪಾಲ್ಗೊಂಡಿದ್ದರು.

Leave a Reply