fbpx

ಪುಸ್ತಕಗಳು ನನ್ನ ಸ್ನೇಹಿತರು ಭಾಗ -೨ ಆಂದೋಲನಕ್ಕೆ ಚಾಲನೆ.

ಗಂಗಾವತಿ -23- ವಿಮೋಚನಾ ಮಕ್ಕಳ ಅಭಿವೃದ್ದಿ ಯೋಜನೆಯು ಚೈಲ್ಡ್ ಫಂಡ್ ಇಂಡಿಯಾದ ನೆರವಿನೊಂದಿಗೆ ಗಂಗಾವತಿ ತಾಲೂಕಿನ ಹೇಮಗುಡ್ಡ ಗ್ರಾಮದ ದುರ್ಗಾದೇವಿ ದೇವಸ್ಥಾನದ ಆವರಣದಲ್ಲಿ ಯೋಜನೆಯ ಫಲಾನುಭವಿ ಕುಟುಂಬದ ೬ ರಿಂದ ೧೪ ವರ್ಷದ ಮಕ್ಕಳಲ್ಲಿ ಓದುವ ಕೌಶಲ್ಯವನ್ನು ಬೆಳೆಸುವ ಉದ್ದೇಶದಿಂದ   ಈ ವಯೋಮಾನದ  ಮಕ್ಕಳಿಗೆ  ಸೋಲಾರ್ ಲ್ಯಾಟಿನ್ (ದೀಪ)ಗಳನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ದೀಪ ಬೆಳಗುವ ಮೂಲಕ ಲ್ಯಾಟಿನ್‌ಗಳನ್ನು ಫಲಾನುಭವಿ ಮಕ್ಕಳಿಗೆ ವಿತರಿಸಿ ಮಾತನಾಡಿದ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಮಾಜಿ ಶಾಸಕ ಪರಣ್ಣ ಮುನವಳ್ಳಿಯವರು,  ಇಂದಿನ ದಿನಗಳಲ್ಲಿ ಮಳೆಯ ಅಭಾವದಿಂದ ಜಲಾಶಯಗಳಲ್ಲಿ ನೀರಿಲ್ಲದೆ ಜಲವಿದ್ಯುತ್ ಮೂಲಗಳು ತೊಂದರೆಗೀಡಾಗಿವೆ, ಇದರಿಂದಾಗಿ ವಿದ್ಯುತ್ ಅಭಾವ ತಲೆದೊರಿ ಸರಕಾರವು ಲೋಡ್ ಶೆಡ್ಡಿಂಗ್ ಜಾರಿಗೊಳಿಸಿದೆ.   ಪ್ರಸ್ತುತ ಸನ್ನಿವೇಶದಲ್ಲಿ  ಮಕ್ಕಳಿಗೆ ರಾತ್ರಿಯ ಸಮಯದಲ್ಲಿ ಓದಲಿಕ್ಕೆ ಅನುಕೂಲವಾಗಲೆಂದು ವಿಮೋಚನಾ ಸಂಸ್ಥೆ ಚೈಲ್ಡ್ ಫಂಡ್ ಇಂಡಿಯಾದ ನೆರವಿನೊಂದಿಗೆ ಸೋಲಾರ್ ಲ್ಯಾಟಿನ್ (ದೀಪ)ಗಳನ್ನು ವಿತರಿಸುವಂತಹ ಸಮಾಜಮುಖಿ ಕೆಲಸ ಮಾಡುತ್ತಿರುವುದು ಅಭಿನಂದನಾರ್ಹವಾದ ಕಾರ್ಯವಾಗಿದೆ ಎಂದರು. ಈ ಮೊದಲು  ಸಂಸ್ಥೆಯು  ಮಕ್ಕಳಲ್ಲಿ ಓದುವ ಕೌಶಲ್ಯವನ್ನು ಬೆಳೆಸುವ ಉದ್ದೇಶದಿಂದ ಪುಸ್ತಕಗಳು ನನ್ನ ಸ್ನೇಹಿತರು ಎಂಬ ಕಾರ್ಯಕ್ರಮದ ಅಡಿಯಲ್ಲಿ ಪುಸ್ತಕದ ಕಿಟ್‌ಗಳನ್ನು ವಿತರಿಸಿ ಪ್ರಸ್ತುತ ಅದರ ಮುಂದುವರೆದ ಭಾಗವಾಗಿ ಇಂದು ಪುಸ್ತಕದ ಕಿಟ್‌ಗಳನ್ನು ಪಡೆದ ಮಕ್ಕಳಿಗೆ  ಸೋಲಾರ್ ಲ್ಯಾಟಿನ್ (ದೀಪ) ಗಳನ್ನು ವಿತರಿಸುವ ಮೂಲಕ ಪ್ರಸ್ತುತ ಸನ್ನಿವೇಶದಲ್ಲಿ  ಮಕ್ಕಳಿಗೆ ಓದುವ ಕಾರ್ಯದಲ್ಲಿ ನೆರವಾಗುತ್ತಿದೆ. ವಿಧ್ಯಾರ್ಥಿಗಳು ಇವುಗಳನ್ನು  ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡು  ಉತ್ತಮ ಸಾಧನೆ ಮಾಡಿದರೆ ಸಂಸ್ಥೆಯ ಶ್ರಮ ಸಾರ್ಥಕವಾಗಲಿದೆ ಎಂದರು. ೬ ರಿಂದ ೧೪ ವರ್ಷದ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಜಾರಿಯಾದರು ಅನೇಕ ಮಕ್ಕಳು ಹಲವಾರು ಕಾರಣದಿಂದ ಶಾಲೆಯಿಂದ ಹೊರಗುಳಿದಿದ್ದಾರೆ, ಅಂತಹ ಮಕ್ಕಳನ್ನು ಪುನ: ಶೈಕ್ಷಣಿಕ ವಾಹಿನಿಗೆ ಕರೆತರುವ ಜವಾಬ್ದಾರಿ ಎಲ್ಲರ ಮೇಲಿದೆ. ಹಾಗೆಯೇ ಮಕ್ಕಳ ಸರ್ವತೋಮುಖ ಅಭಿವೃದ್ದಿಗಾಗಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು. 
    ಕಾರ್ಯಕ್ರಮದ ಮತ್ತೊಬ್ಬ ಮುಖ್ಯ ಅತಿಥಿಗಳಾದ  ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅದ್ಯಕ್ಷರಾದ ಶೇಖರಗೌಡ ರಾಮತ್ನಾಳ ರವರು ಮಾತನಾಡಿ ಇಂದು ಸರಕಾರದ ಇಲಾಖೆಗಳ ಜೊತೆಗೆ ಇಂತಹ ಸಂಘ ಸಂಸ್ಥೆಗಳು ಮಕ್ಕಳ ಅಭಿವೃದ್ದಿಗೆ ಶ್ರಮಿಸುತ್ತಿವೆ.  ಈ ಭಾಗದ ಮಕ್ಕಳಾದ ನೀವು ತುಂಬಾ ಅದೃಷ್ಟವಂತರು ಏಕೆಂದರೆ ಮಕ್ಕಳನ್ನು ಮೂರು ವಯೋಮಾನದಲ್ಲಿ ವಿಂಗಡಿಸಿ ೦-೫ ವರ್ಷದ ಮಕ್ಕಳಿಗಾಗಿ ಆರೋಗ್ಯಕ್ಕೆ ಸಂಭಂದಿಸಿದ ಕಾರ್ಯಕ್ರಮಗಳು, ೬-೧೪ ವರ್ಷದ ಮಕ್ಕಳಿಗಾಗಿ ಕಡ್ಡಾಯ ಹಾಗೂ ಗುಣಮಟ್ಟದ ಶಿಕ್ಷಣ ಕಾರ್ಯಕ್ರಮಗಳು ಹಾಗೂ ೧೫-೨೪ ವರ್ಷದ ಮಕ್ಕಳಿಗಾಗಿ ಉನ್ನತ ಶಿಕ್ಷಣ, ನೈತಿಕ ಶಿಕ್ಷಣದ ಜೊತೆ ವೃತ್ತಿಪರ ತರಭೇತಿಗಳನ್ನು ಹಮ್ಮಿಕೊಳ್ಳುವ ಮೂಲಕ ವಿಮೋಚನಾ ಸಂಸ್ಥೆ ಮಕ್ಕಳನ್ನು ಉತ್ತಮ ಹಾಗೂ ಜವಾಬ್ದಾರಿಯುತ ಪ್ರಜೆಗಳನ್ನಾಗಿ ರೂಪಿಸುತ್ತಿರುವ ಕಾರ್ಯವನ್ನು  ಶ್ಲಾಘಿಸಿದರು.
    ನಂತರ ಕಾರ್ಯಕ್ರಮದ ಅತಿಥಿಗಳಾದ  ಕಾರ್ಮಿಕ ನಿರೀಕ್ಷಕರು ಗಂಗಾವತಿ, ಇವರು ಮಾತನಾಡುತ್ತಾ ಮಕ್ಕಳನ್ನು ಶಾಲೆಗೆ ಕಳುಹಿಸಿ ಅವರನ್ನು ಕೆಲಸಕ್ಕೆ ಹಚ್ಚಿದರೆ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು.ಯಾರಾದರೂ  ೬-೧೪ ವರ್ಷದ ಮಕ್ಕಳನ್ನು ದುಡಿಮೆಯ ಉದ್ದೇಶದಿಂದ ಕೆಲಸಕ್ಕೆ ಹಚ್ಚಿದ್ದರೆ ಅಥವಾ ಕೆಲಸಕ್ಕೆ ಇಟ್ಟುಕೊಂಡರೆ ಜೈಲು ಶಿಕ್ಷೆ ಜೊತೆಗೆ ದಂಡವನ್ನು ವಿಧಿಸಲಾಗುವುದು ಎಂದು ಪಾಲಕರಿಗೆ ಎಚ್ಚರಿಕೆ ನೀಡಿದರು.  ನಂತರ ಇಲಾಖೆಯಿಂದ ಕಾರ್ಮಿಕರಿಗಾಗಿ ಇರುವ ಸಹಾಯ ಮತ್ತು ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ ಅವುಗಳನ್ನು ಬಳಸಿಕೊಳ್ಳಲು ಕರೆ ನೀಡಿದರು.
      ಕಾರ್ಯಕ್ರಮದ ಅದ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ನಿರ್ದೇಶಕರಾದ ಶ್ರೀ ಸದಾನಂದ್.ಬಿ. ಪಾಟಿಲ್ ರವರು  ಮಾತನಾಡುತ್ತಾ ಅಂದು  ಚೈಲ್ಡ್ ಫಂಡ್ ಇಂಡಿಯಾ ಸಹಯೋಗದಲ್ಲಿ ಸಂಸ್ಥೆಯು ನೀಡಿದ ಪುಸ್ತಕದ ಕಿಟ್‌ಗಳನ್ನು ಅದೇ ರೀತಿಯಾಗಿ ಕಾರ್ಯಕ್ರಮದ  ಎರಡನೇ ಹಂತದಲ್ಲಿ ರಾತ್ರಿ ಸಮಯದಲ್ಲಿ ಮಕ್ಕಳಿಗೆ ಓದಲಿಕ್ಕೆ ಅನುಕೂಲವಾಗಲೆಂದು ವಿತರಿಸುವ ಸೋಲಾರ್ ಲ್ಯಾಟಿನ್‌ಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡರೆ ನಾವು ಯೋಜಿಸಿದ ಕಾರ್ಯ ಸಫಲತೆ ಕಂಡಂತೆ ಆಗುತ್ತದೆ, ಆದ್ದರಿಂದ ಇವುಗಳ ಸದುಪಯೋಗವನ್ನು ಮಕ್ಕಳು ಪಡೆಯುವಂತೆ ಮಾಡಬೇಕಾದ ಗುರುತರ ಜವಾಬ್ದಾರಿ ಪಾಲಕರ ಮೇಲಿದೆ ಎಂದರು. ಅದೇ ರೀತಿಯಾಗಿ ಪೋಷಕರ ನೆರವಿನೊಂದಿಗೆ ಯೋಜನೆಯ ಫಲಾನುಭವಿ ಮಕ್ಕಳಿಗೆ ಆರೋಗ್ಯ ಮತ್ತು ಗುಣಮಟ್ಟದ ಶಿಕ್ಷಣಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು ಇಲಾಖೆಗಳು ತಮ್ಮ ಸಹಕಾರವನ್ನು ಇದೇ ರೀತಿಯಾಗಿ ಮುಂದುವರೆಸಿಕೊಂಡು ಹೋಗಲು ವಿನಂತಿಸಿದರು.
   ಕಾರ್ಯಕ್ರಮದ ಕುರಿತು ಪ್ರಾಸ್ತವಿಕವಾಗಿ ಮಾತನಾಡಿದ ಯೋಜನಾ ವ್ಯವಸ್ತಾಪಕರಾದ ಡಾ. ಸದಾಶಿವ ಕಾಂಬ್ಳೆ., ಪುಸ್ತಕಗಳು ನನ್ನ ಸ್ನೇಹಿತರು ಎಂಬ ಆಂದೋಲನವು ೨೦೧೪ ರಿಂದ ಪ್ರಾರಂಭವಾಗಿ ದೇಶದ ೧೪ ರಾಜ್ಯಗಳಲ್ಲಿ ಹಾಗೂ  ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಒಟ್ಟು ೪೦.೦೦೦ ಮಕ್ಕಳಿಗೆ ಪುಸ್ತಕಗಳು ನನ್ನ ಸ್ನೇಹಿತರು ಎಂಬ ಕಾರ್ಯಕ್ರಮದ ಅಡಿಯಲ್ಲಿ ಪುಸ್ತಕಗಳ ಕಿಟ್‌ಗಳನ್ನು ವಿತರಿಸಿದ್ದು ಇದರಿಂದಾಗಿ ಸಮುದಾಯದ ಒಟ್ಟು ೧,೧೫,೦೦೦ ಮಕ್ಕಳಿಗೆ ಇದರಿಂದ ಕಲಿಕೆಗೆ ಅನುಕೂಲವಾಗಿದೆಯೆಂದು ತಿಳಿಸಿದರು. ಎರಡನೇ ಹಂತದ ಕಾರ್ಯಕ್ರಮವಾಗಿ ಮಕ್ಕಳಿಗೆ ಸೋಲಾರ್ ಲ್ಯಾಟಿನ್‌ಗಳನ್ನು ವಿತರಿಸುವ ಕಾರ್ಯ ಚೈಲ್ಡ್ ಫಂಡ್ ಇಂಡಿಯಾ ಯೋಜಿಸಿದೆ ಎಂದು ತಿಳಿಸುತ್ತಾ ಮಕ್ಕಳು ಲ್ಯಾಟಿನ್‌ಗಳನ್ನು ಉಪಯೋಗಿಸುವ ಮಾದರಿಯ ವೀಡಿಯೋಗಳನ್ನು ತೋರಿಸಿದರು.
      ವಿಮೋಚನಾ ಸಂಘದ ಪರಿಚಯ ಕುರಿತು ಕಾರ್ಯಕ್ರಮ ಸಂಯೋಜಕರಾದ ಶ್ರೀ ಪ್ರಕಾಶ .ಕಡಗದ ರವರು ಮಾತನಾಡುತ್ತಾ ಸಂಸ್ಥೆಯು ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಕಳೆದ  ೩೦ ವರ್ಷಗಳ ಹಿಂದೆ ದೇವದಾಸಿ ಕುಟುಂಬದ ಮಕ್ಕಳ ಅಭಿವೃದ್ದಿಗಾಗಿ ಹುಟ್ಟಿಕೊಂಡ ಸಂಸ್ಥೆಯಾಗಿದೆ. ಪ್ರಸ್ತುತ ಸನ್ನಿವೇಶದಲ್ಲಿ  ಯೋಜನೆಯ ಸಹಾಯ, ಸಹಕಾರ ಪಡೆದ ಮಕ್ಕಳು ಉನ್ನತ ಹುದ್ದೆಗಳನ್ನು ಅಲಂಕರಿಸಿರುವುದು ಸಂಸ್ಥೆಗೆ ಹೆಮ್ಮೆಯ ಸಂಗತಿಯಾಗಿದೆ ಎಂದರು.  ಕೆಲವು ಮಕ್ಕಳು ಸಮಾಜದ ಏಣಿಸ್ಥರದಿಂದಾಗಿ ಅವಕಾಶ ವಂಚಿತರಾಗಿದ್ದು ಅವರು ಸಹ ಸಂಸ್ಥೆಯ ಸಹಾಯದಿಂದ ಉನ್ನತ ವ್ಯಾಸಾಂಗ ಕೈಗೊಂಡು ವಿವಿಧ ಇಲಾಖೆಗಳಲ್ಲಿ ಕಾರ್ಯ  ನಿರ್ವಹಿಸುತ್ತಿದ್ದಾರೆ. ೨೦೧೦ ರಿಂದ ತಾಲೂಕಿ

ನ ೪ ಪಂಚಾಯತಿಯ ೨೨ ಹಳ್ಳಿಗಳನ್ನು ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ೧೫ ಹಳ್ಳಿಗಳಲ್ಲಿ ಯೋಜನೆಯ ಫಲಾನುಭವಿಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಆ ಕುಟುಂಬದ ಮಕ್ಕಳ ಆರೋಗ್ಯ, ಶಿಕ್ಷಣ ಮತ್ತು ವೃತ್ತಿಪರ ತರಭೇತಿಗಳನ್ನು ನೀಡುವ ಮಹತ್ತರ ಕಾರ್ಯ ಮಾಡುತ್ತಿದೆ ಎಂದು ತಿಳಿಸಿದರು.
ಯೋಜನೆಯ ಪೋಷಕತ್ವ ವಿಭಾಗದ ಕಾರ್ಯಕ್ರಮ ಸಂಯೋಜಕರಾದ ಶ್ರೀ ರಾಜಶೇಖರ್ ನಾಯಕ್ ನಿರೂಪಿಸಿದರೆ ಶ್ರೀ ಪ್ರಕಾಶ .ಕಡಗದ ರವರು ಸ್ವಾಗತಿಸಿದರು. ನಂತರ ಶ್ರೀ ವೆಂಕಟೇಶರವರು ವಂದನಾರ್ಪಣೆಯನ್ನು ಸಲ್ಲಿಸಿದರು.
       ಕಾರ್ಯಕ್ರಮದಲ್ಲಿ  ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘ ಕೊಪ್ಪಳ ಸಂಯೋಜಕರಾದ ಬಸವರಾಜ್ ಹಿರೇಗೌಡರ್, ಸಿ.ಡಿ.ಪಿ.ಒ. ಅಬ್ದುಲ್ ರಹೆಮಾನ್, ಮೇಲ್ವಿಚಾರಕಿಯರಾದ ಶ್ರೀಮತಿ  ಲಕ್ಷ್ಮಿಯವರು ಹಾಗೂ ವೀರಣ್ಣ ಕುಂಬಾರ್ ಮತ್ತು ಯೋಜನೆಯ ಸಿಬ್ಬಂದಿಯಾದ ಪರಶುರಾಮ್ ಹನುಮಂತಪ್ಪ,  ಸಂಸ್ಥೆಯ ಸಂಘಟಕರು, ಮತ್ತು ಪ್ರಾಯೋಜನೆಯ ಮಕ್ಕಳು ಮತ್ತು ಪಾಲಕರು ಭಾಗವಹಿಸಿದ್ದರು.

Please follow and like us:
error

Leave a Reply

error: Content is protected !!