fbpx

ಸಾಹಸ ಪತ್ರಿಯೊಬ್ಬ ಭಾರತಿಯ ಮಹಿಳೆಯಲ್ಲಿದೆ- ಸಿದ್ದಪ್ಪ ಹಂಚಿನಾಳ.

ನಮ್ಮ ದೇಶದ ಪ್ರತಿಯೋಬ್ಬ ಮಹಿಳೆಯಲ್ಲೂ ಒಬ್ಬಬ್ಬ ಝಾನ್ಸಿರಾಣಿಲಕ್ಷ್ಮೀಬಾಯಿ, ಕಿತ್ತೂರು ರಾಣಿ ಚನ್ನಮ್ಮ, ಒನಕೆಓಬವ್ವ ನಂತಹ ಶೌರ್ಯ ಸಾಹಸ ಪತ್ರಿಯೊಬ್ಬ ಭಾರತಿಯ ಮಹಿಳೆಯಲ್ಲಿದೆ ಮಹಿಳೆ ಅಬಲೆ ಅಲ್ಲ ಸಬಲೆ ಎಂದು ಜಗತ್ತಿಗೆ ಸಾರಿದ ಮಹಿಳೆ ಶ್ರೀಮತಿಇಂದಿರಾಗಾಂಧಿ ಇವರ ಆದರ್ಶವು ಇಂದಿನ ಮಹಿಳೆಯರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಎಂದು ಸುದ್ದಿಮೂಲ ದಿನಪತ್ರಿಕೆಯ  ಪತ್ರಕರ್ತರಾದ ಸಿದ್ದಪ್ಪ ಹಂಚಿನಾಳ ಮಾತನಾಡಿದರು.
ಇವರು ಭಾರತ ಸರಕಾರ ನೆಹರು ಯುವ ಕೇಂದ್ರ ಕೊಪ್ಪಳ ಪ್ರೇರಣಾ ಯುವತಿ ಸಂಘ(ರಿ)ಕೊಪ್ಪಳ,ಯುವಸಾಂಸ್ಕೃತಿಕ ಸೇವಾ ಸಂಘ(ರಿ) ಕೊಪ್ಪಳ,ವಂದೇಮಾತರಂ ಯುವಸಾಂಸ್ಕೃತಿಕ ಸೇವಾ ಸಂಘ(ರಿ)ಕೊಪ್ಪಳ ಇವರಗಳ ಸಂಯುಕ್ತಾಶ್ರಯದಲ್ಲಿ ಕೊಪ್ಪಳ ನಗರದ ಕಲಮ್ ಪಬ್ಲಿಕ್ ಶಾಲೆಯಲ್ಲಿ ರಾಷ್ಟ್ರೀಯ ಕೋಮಿ ಏಕತಾ ದಿವಸ ಮತ್ತು ವಿಶ್ವ ಶೌಚಾಲಯ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಇಂತಹ ಧೀರ ಮಹಿಳೆಯರ ಜೀವನ ಚರಿತ್ರೆಗಳನ್ನು ಓದಿ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಮಹಿಳೆಯ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ಗಮನಿಸಿ ಮತ್ತು ಇಂದಿನ ದಿನಮಾನದಲ್ಲಿ ವಿದ್ಯಾರ್ಥಿನಿಯರು ಮಹಿಳೆಯರು ಸ್ವಯಂ ರಕ್ಷಣೆಗಾಗಿ ಸಾಹಸ ಕಲಿಯಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಕಾರ್ಯಕ್ರಮದ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಕಾನೂನು ಮಹಾವಿದ್ಯಾಲಯದ ಉಪನ್ಯಾಸಕರಾದ ನಾಗಬಸಯ್ಯ ನವರು ನಮ್ಮಲ್ಲಿ ಮಹಿಳೆಯರು ವಿಶೇಷ ಕಾನೂನು ಇದೆ ಆದರೆ ಅದು ಕಾರ್ಯರೂಪಕ್ಕೆ ಬರುತ್ತಿಲ್ಲಾ ಏಕೆಂದರೆ ಅದರ ಮಾಹಿತಿ ಕೊರತೆಯಿಂದ ನಮ್ಮ ದೇಶದ ಸುಮಾರು ಮಹಿಳೆಯರು ಕಾನೂನಿನ ಚೌಕಟ್ಟಿನ ಹೊರಗಡೆಯ ಜೀವನ ನೆಡಸುತ್ತಿದ್ದಾರೆ ಆ ಕಾಲದಲ್ಲಿ  ಮಹಿಳೆಯರು ಇಂ

ತಹ ಮಹಾನ್ ಹುದ್ದೆಗೆ ಏರಲು ಅವರ ಸಹನೆ.ತಾಳ್ಮೆ.ಸಾಹಸ, ಎಂತಹದ್ದು ಎಂಬುವ ಬಗ್ಗೆ ಇಂದಿರಾಗಾಂಧಿಯವರಂತಹ ಧೀರ ಮಹಿಳೆಯಿಂದ ನಮಗೆ ತಿಳಿಯುತ್ತದೆ ಮತ್ತು ಸ್ವತ್ರಂತ್ರ್ಯ ಪಡೆದು ೭೦ ವರ್ಷ ಘಟಿಸುತ್ತಾ ಬಂದರು ಇಂದಿಗೂ ನಾವು ಹಿಂದುಳಿದ ರಾಷ್ಟ್ರದ ಹಣೆಪಟ್ಟಿ ಕಟ್ಟಿಕೊಂಡಿದ್ದೆವೆ ಇಂದಿನ ಪ್ರಧಾನ ಮಂತ್ರಿಯವರು ಹೊರ ರಾಷ್ಟ್ರಕ್ಕೆ ಹೋಗಿ ನಮ್ಮ ದೇಶದ ಜನರಿಗೆ ಆ ರಾಷ್ಟ್ರದಿಂದ ಶೌಚಾಲಯ ಕಟ್ಟಿಸಿಕೊಳ್ಳಿ ಎನ್ನುವಂತಹ ಸ್ಥಿತಿಯಲ್ಲಿ ನಾವು ಇರುವುದು ಎಷ್ಟುಸರಿ? ಇದಕ್ಕೆ ನಮ್ಮ ಅನಕ್ಷರತೆ ಮತ್ತು ಮಾಹಿತಿ ಕೊರತೆ ಎಂದರು ಮುಖ್ಯಅತಿಥಿಗಳಾಗಿ ಓಜನಹಳ್ಳಿ ಕಲಾವಿದರಾದ ಶಿವಮೂರ್ತಿ ಮೇಟಿ ಮತ್ತು ಕುಷ್ಟಗಿಯ ಕಲಾವಿದರಾದ ಚನ್ನಪ್ಪ ಭಾವಿಮನಿ ಶೌಚಾಲಯ ಮತ್ತು ಮಕ್ಕಳ ಜಾಗೃತಿ ಗೀತೆ ಹಾಡುವ ಮುಖಾಂತರ ವಿದ್ಯಾರ್ಥಿನಿಯರಿಗೆ ಅದರ ಪ್ರಾಮುಖ್ಯತೆ ತಿಳಿಸಿದರು ಇನ್ನೂರ್ವ ಅತಿಥಿಗಳಾದ ವಂದೇಮಾತರಂ ಸೇವಾ ಸಂಘದ ಸಂಸ್ಥಾಪನಾ ಅಧ್ಯಕ್ಷರಾದ ರಾಕೇಶ ಕಾಂಬ್ಳೇಕರ, ಶಾಲೆಯ ಶಿಕ್ಷಕರಾದ ಬಸವರಾಜ ಜಾಳಿಹಾಳಿಮಠ, ರಾಷ್ಟ್ರೀಯ ಯುವ ಪಡೆಯಾದ ಮಂಜುಳಾ ಕಿನ್ನಾಳ, ವೇದಿಕೆಮೇಲೆ ಉಪಸ್ಥಿತರಿದ್ದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಲಿಂಮೂದ್ದಿನ್, ವಹಿಸಿದ್ದರು ಪ್ರಸ್ತಾವಿಕವಾಗಿ ರಾಷ್ಟ್ರೀಯ ಯುವ ಪಡೆಯಾದ ದೀಪಾ, ಕಾರ್ಯಕ್ರಮ ನಿರೂಪಣೆ ನಿಜಾಮುದ್ದಿನ್,ಸ್ವಾಗತವನ್ನು ರಾಷ್ಟ್ರೀಯ ಯುವ ಪಡೆಯಾದ ಭಾಗ್ಯಶ್ರೀ. ವಂದನಾರ್ಪಣೆ ರಾಷ್ಟ್ರೀಯ ಯುವ ಪಡೆಯಾದ ವಿಜಯಲಕ್ಷ್ಮೀ. ಮಾಡಿದರೆಂದು ರಾಷ್ಟ್ರೀಯ ಯುವ ಪಡೆಯಾದ ಗವಿಸಿದ್ದಮ್ಮ ಹಿರೇಮಠ ತಿಳಿಸಿದ್ದಾರೆ,

Please follow and like us:
error

Leave a Reply

error: Content is protected !!