ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾಗಿ ಎಸ್ ಎಸ್ ಶಿಂಧಾ ಅಧಿಕಾರ ಸ್ವೀಕಾರ

ಕೊಪ್ಪಳ : ಕೊಪ್ಪಳದ  ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾಗಿ ಎಸ್ ಎಸ್ ಶಿಂಧಾ ಅವರು ಅಧಿಕಾರ ಸ್ವೀಕರಿಸಿದರು. 
ಮೂಲತ: ಬಿದರ ಜಿಲ್ಲೆಯ ಔರಾದ(ಬಿ) ತಾಲೂಕಿನ ಮಣಿಗೆಂಪೂರ ದವರಾದ ಇವರು ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲೂಕಿನ ಬೆಳಮಣ್ಣು ಸರಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾಗಿ ಸೇವೆ ಪ್ರಾರಂಬಿಸಿದರು. ನಂತರ ಇದೇ ತಾಲೂಕಿನ ಬೈಲೂರು ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಂಶುಪಾಲರಾಗಿ, ಉಡುಪಿ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳಾಗಿ, ಶಿವಮೂಗ್ಗ ಜಿಲ್ಲೆ ಭದ್ರಾವತಿಯ ರಜತಮಹೋತ್ಸವ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ, ಕಾರ್ಕಳ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ, ಮಡಿಕೇರಿ ಜಿಲ್ಲೆಯ ಪದವಿ ಪೂರ್ವ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾಗಿ, ಉಡುಪಿ ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೆಶಕರಾಗಿ ಈಗ ಕೊಪ್ಪಳ ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೆಶಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.  ಪ್ರಭಾರಿ ಉಪನಿರ್ದೇಶಕರಾಗಿದ್ದ ಶಿವಾನಂದ ಕಡಪಟ್ಟಿಯವರು ನೂತನ ಉಪನಿರ್ದೇಶಕರಾದ ಎಸ್ ಎಸ್ ಶಿಂಧಾ ಅವರಿಗೆ ಅಧಿಕಾರ ಹಸ್ತಾಂತರಿಸಿದರು. 
Please follow and like us:

Leave a Reply