You are here
Home > Koppal News > ಸಚಿವ ಡಿ.ಕೆ. ಶಿವಕುಮಾರ ಅನರ್ಹಗೊಳಿಸಲು ಕರ್ನಾಟಕ ರಕ್ಷಣಾ ವೇಧಿಕೆ ಸ್ವಾಭಿಮಾನಿ ಬಣ ಒತ್ತಾಯ

ಸಚಿವ ಡಿ.ಕೆ. ಶಿವಕುಮಾರ ಅನರ್ಹಗೊಳಿಸಲು ಕರ್ನಾಟಕ ರಕ್ಷಣಾ ವೇಧಿಕೆ ಸ್ವಾಭಿಮಾನಿ ಬಣ ಒತ್ತಾಯ

ಕೊಪ್ಪಳ : ದಿನಾಂಕ ೧೪ ರಂದು ನಗರದ ಕರ್ನಾಟಕ ರಕ್ಷಣಾ ವೇಧಿಕೆ ಸ್ವಾಭಿಮಾನಿ ಬಣ ವಿಶ್ವದ ಅತಿದೊಡ್ಡ ಪ್ರಜಾತಾಂತ್ರಿಕ ರಾಷ್ಟವಾದ ಭರತದಲ್ಲಿ ನ್ಯಾಯಾಂಗ ಕಾರ್ಯಾಂಗ, ಈ ಮೂರು ವಿಭಾಗಗಳಿಗಿಂತ ನಾಲ್ಕನೇ ಅಂಗವೆಂದು ಭಾವಿಸಿರುವ ಮಾಧ್ಯಮರಂಗವು ಇತ್ತಿಚೆಗೆ ದೇಶದ ಪ್ರಜೆಗಳಿಂದ ಚುನಾಯುತರಾದ ಜನಪ್ರತಿನಿಧಿನಗಳು  ಪಾರದರ್ಶಕವಾಗಿ ಆಡಳಿತ ಮಾಡುವಂತೆ ಜಾಗೃತಿ ಗೊಳಿಸುತ್ತಾ ಬ್ರಷ್ಟಾಚಾರದ ವಿರುದ್ಧ ಸಮರವನ್ನೇ ಸಾರಿದೆ ಆದರೆ ಕಾಂಗ್ರೇಸ್ ನೇತೃತ್ವದ ರಾಜ್ಯ ಸಕಾರದ ಸಚಿವ ಸಂಪುಟದ ಸಹೋದ್ಯೋಗಿ ಇಂಧನ ಸಚಿವ ಡಿ.ಕೆ.ಶಿವಕುಮಾರ  ಬ್ರಷ್ಟಾಚಾರದ ಆರೋಪ ವಿದ್ದರೂ ತನ್ನ ಪ್ರಭಾವ ಬಳಸಿ ಅಧಿಕಾರ ವಹಿಸಿಕೊಂಡಿರುವುದು ಜಗಜ್ಜಾಹೀರವಾಗಿದೆ
 ಆದರೆ ಇತ್ತೀಚೆಗೆ ಅವರ ಬ್ರಷ್ಟಾಚಾರವನ್ನು ಬಯಲಿಗೆಳೆಯಲು ಮಾಧ್ಯಮ ಪ್ರತಿನಿಧಿಗಳು ಹೋದಾಗ  ಶಿವಕುಮಾರ ಹಾಗೂ ಅವರ ಬೆಂಬಲಿಗರು ಮಹಿಳಾ ವರದಿಗಾರ್ತಿ  ಮೇಲೆ ಅಮಾನವೀಯವಾಗಿ ಹಲ್ಲೆ ಮಾಡಿ ಅಧಿಕಾರ ಬಳಸಿಕೊಂಡು ಪೋಲಿಸರ ಮೇಲೆ ಒತ್ತಡ ಹೇರಿ ಮಾಧ್ಯಮ ವರದಿಗಾರರ ಮೇಲೆಯೇ ಪ್ರಕರಣಗಳನ್ನು ದಾಖಲಿಸಿರುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಇದನ್ನು ಖಂಡಿಸಿ ಇಂದು ನಗರದ ಬಸ್ ನಿಲ್ದಾಣದೆದುರು ಬೆಳಗ್ಗೆ ೧೨.೩೦ ಗಂಟೆಗೆ ಡಿಕೆಶಿ ಪ್ರಿಕೃತಿ ದಹಿಸಿ ಮಾನ್ಯ ತಹಶಿಲ್ದಾರರಿಗೆ ಮನವಿ ಸಲ್ಲಿಸಲಾಯಿತು. 
ವಿಶ್ವಕ್ಕೆ ಮಾದರಿಯಾದ ಪ್ರಜಾಪ್ರಭುತ್ವವನ್ನು ಉಳಿಸುವ ನಿಟ್ಟಿನಲ್ಲಿ ಗೊಂಡಾ ಪ್ರವೃತಿ ಹಾಗೂ ಅಧಿಕಾರ ದರ್ಪದ ಸಚಿವ ಡಿ.ಕೆ.ಶಿ ಅವರನ್ನು ಸಚಿವ ಸ್ಥಾನ ಹಾಗೂ ಶಾಸಕತ್ವವನ್ನು ಅನರ್ಹಗೊಳಿಸಿ ಅವರ ವಿರುದ್ಧ ಸೂಕ್ತ ಕಾನೂನುಕ್ರಮ ಜರುಗಿಸಬೇಕೆಂದು ಸಮಸ್ತ ಸಾರ್ವಜನಿಕರ ಪರವಾಗಿ ಗೌರವ ಪೂರ್ವಕವಾಗಿ ವಿನಂತಿಸಿಕೊಳ್ಳುತ್ತೇವೆ. ಇಲ್ಲವಾದರೆ ರಾಜ್ಯಾದ್ಯಂತ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಎಂದು ರಾಜ್ಯ ಸರಕಾರಕ್ಕೆ ಎಚ್ಚರಿಸಿದ್ದಾರೆ. 

Leave a Reply

Top