ಕೊಪ್ಪಳದಲ್ಲಿ ಕೃಷಿ ಅಭಿಯಾನ ಕಾರ್ಯಕ್ರಮ.

ಕೊಪ್ಪಳ ಜೂ. ೨೫ – ಕೃಷಿ ಹಾಗೂ ಕೃಷಿ ಸಂಭಂದಿತ ಇಲಾಖೆಗಳ ಸಹಭಾಗಿತ್ವದಲ್ಲಿ ಹಮ್ಮಕೊಳ್ಳಲಾಗಿರುವ ಕೃಷಿ ಅಭಿಯಾನ-೨೦೧೫ ಕಾರ್ಯಕ್ರಮ ಕೊಪ್ಪಳದ ರೈತ ಸಂಪರ್ಕ ಕೇಂದ್ರದ ಆವರಣದಲ್ಲಿ ಏರ್ಪಡಿಸಲಾಯಿತು.ಕೊಪ್ಪಳ ತಾ.ಪಂ. ಅಧ್ಯಕ್ಷೆ ಬಾನು ಚಾಂದ್‌ಸಾಬ್ ಕಾರ್ಯಕ್ರಮದ ಉದ್ಘಾಟನ ನೆರವೇರಿಸಿದರು.  ಸಹಾಯಕ ಕೃಷಿ ನಿರ್ದೇಶಕ ಸಹದೇವ ಯರಗೊಪ್ಪ ಕೃಷಿ ಅಭಿಯಾನದ ಉದ್ದೇಶವನ್ನು ವಿವರಿಸಿದರು.  ಜಂಟಿಕೃಷಿ ನಿರ್ದೇಶಕ ವಿರೇಶ್ ಹುನಗುಂದ ಅವರು ಕೃಷಿ ಇಲಾಖೆ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.  ಕೊಪ್ಪಳ ಕೃಷಿ ವಿಸ್ತರಣಾ ಕೇಂದ್ರದ ವಿಸ್ತರಣಾ ಮುಂದಾಳು ಎಂ.ಬಿ. ಪಾಟೀಲ ಹಾಗೂ  ಯೂಸೂಪ್ ಖಾನ್, ಕೃಷಿ ವಿಜ್ಞಾನಿ ಜ್ಯೋತಿ ಆರ್ ಇವರು ರೈತರಿಗೆ ಸುಧಾರಿತ ಬೇಸಾಯ ಕ್ರಮಗಳು, ಸಸ್ಯ ಸಂರಕ್ಷಣೆ ಕ್ರಮಗಳು ಹಾಗೂ ತೋಟಗಾರಿಕೆ ಬೆಳಗಳ ಬಗ್ಗೆ ತಾಂತ್ರಿಕ ಮಾಹಿತಿ ನೀಡಿದರು. ಕೃಷಿ ಸಂಭಂದಿತ ಇಲಾಖೆಗಳ ಅಧಿಕಾರಿಗಳು, ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಇಲಾಖೆಗಳ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಕೃಷಿ ಅಧಿಕಾರಿ ವಿ.ಹೆಚ್. ಹೂಗಾರ ಉಪಸ್ಥಿತರಿದ್ದರು.

Please follow and like us:
error