fbpx

ಹೊಸಕೇರಿ ಸವಳಕ್ಯಾಂಪ್‌ಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯದರ್ಶಿಗಳ ಭೇಟಿ

ಗಂಗಾವತಿ ತಾಲೂಕಿನ ಹೊಸಕೇರಿಗ್ರಾಮ ಪಂಚಾಯತ್ ವ್ಯಾಪ್ತಿಯ ಸವಳಕ್ಯಾಂಪ್‌ನ ಜನರಿಗೆ ಮೂಲಭೂತ ಸೌಕರ್ಯ ಒದಗಿಸಲು ರಾಜ್ಯದ ಮಾನವ ಹಕ್ಕುಗಳ ಸಮಿತಿ ಜಿಲ್ಲಾಧಿಕಾರಿಗಳಿಗೆ ಆದೇಶಿಸಿರುವ ಬಗ್ಗೆ ಪರಿಶೀಲನೆ ಮಾಡಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯದರ್ಶಿಗಳಾದ ಕೃಷ್ಣಾ ಉದುಪುಡಿ, ತಹಸೀಲ್ದಾರರಾದ ವೆಂಕನಗೌಡ, ಜಿಲ್ಲಾ ಪಂಚಾಯತ್ ಎ.ಡಬ್ಲ್ಯೂ.ಇ. ವಿಜಯಕುಮಾರ ಮತ್ತು ತಾಲೂಕ ಪಂಚಾಯತ್‌ನ ಇ.ಓ. ಎಸ್.ಎನ್.ಮಠ ಜೊತೆಗೆ ತಾಲೂಕ ಪಂಚಾಯತ್ ಸದಸ್ಯರಾದ ಬಸವರಾಜ, ಗ್ರಾಮ ಪಂಚಾಯತ್ ಪಿ.ಡಿ.ಓ. ಮತ್ತು ಇನ್ನೀತರ ಸಿಬ್ಬಂದಿಗಳು  ಸವಳಕ್ಯಾಂಪ್‌ನ್ನು ಸಂದರ್ಶಿಸಿ ಅಲ್ಲಿನ ನಿವಾಸಿಗಳಿಂದ ಕುಂದುಕೊರತೆಗಳ ಬಗ್ಗೆ ಅಹವಾಲು ಸ್ವೀಕರಿಸಿದರು. ಇದು ಸವಳಕ್ಯಾಂಪ್‌ನ ಜನರು ಮೂರು ವರ್ಷಗಳಿಂದ ಮಾಡುತ್ತಿರುವ ಹೋರಾಟಕ್ಕೆ ಮೊದಲನೇ ಗೆಲುವಾಗಿದೆ ಎಂದು ಸಿ.ಪಿ.ಐ.ಎಂ.ಎಲ್. ರಾಜ್ಯ ಕಾರ್ಯದರ್ಶಿ  ತಿಳಿಸಿದ್ದಾರೆ.
ಸವಳಕ್ಯಾಂಪ್‌ನ ದಲಿತ ಕೃಷಿ ಕಾರ್ಮಿಕರಿಗೆ ಕ್ಯಾಂಪ್‌ನ ಸುತ್ತಲು ಇರುವ ಭೂಮಾಲೀಕರು ದೌರ್ಜನ್ಯ ಮಾಡುತ್ತಿರುವುದು ಕುರಿತು ಪಿಯುಸಿಎಲ್ ಸಂಘಟನೆ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿತ್ತು . ದೂರಿನನ್ವಯ ಮಾನವಹಕ್ಕುಗಳ ಅಧ್ಯಕ್ಷೀಯ ಮಂಡಳಿಯ ಸದಸ್ಯರಾದ ನ್ಯಾಯಮೂರ್ತಿಗಳಾದ ಹುನಗುಂದರವರು ಸವಳಕ್ಯಾಂಪ್ ವಿಕ್ಷಣೆ ಮಾಡಿ ಜಿಲ್ಲಾಧಿಕಾರಿಗಳಿಗೆ ಅಲ್ಲಿನ ಜನರಿಗೆ ಮೂಲಭೂತ ಸೌಕರ್ಯಗಳನ್ನು ಆರು ವಾರಗಳೊಳಗಾಗಿ ಒದಗಿಸಬೇಕೆಂದು ಆದೇಶಿಸಿದ್ದಾರೆ.
ಸವಳಕ್ಯಾಂಪಿನ ಜನರ ಸ್ಥಿತಿಯನ್ನು ಗಮನಿಸಲು ಮಾನವಹಕ್ಕುಗಳ ಆಯೋಗದ ಆದೇಶದಂತೆ ಕ್ರಮ ಜರುಗಿಸಲು ಕೊಪ್ಪಳ ಜಿಲ್ಲಾಪಂಚಾಯತ್ ಮುಖ್ಯ ಕಾರ್ಯದರ್ಶಿಗಳಾದ ಕೃಷ್ಣಾ ಉದುಪುಡಿರವರು ಸಂಬಂಧಿತ ಎಲ್ಲಾ ಅಧಿಕಾರಿಗಳೊಂದಿಗೆ ಇಂದು ಸವಳಕ್ಯಾಂಪ್‌ಗೆ ಭೇಟಿ ನೀಡಿ ಜನರ ಅಹ್ವಾಲುಗಳನ್ನು ಸ್ವೀಕರಿಸಿ ಶೀಘ್ರದಲ್ಲಿಯೇ ಅಲ್ಲಿನ ಜನರ ಬೇಡಿಕೆಗಳನ್ನು ಈಡೇರಿಸುವದಾಗಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪಿಯುಸಿಎಲ್‌ನ ಜಿಲ್ಲಾಧ್ಯಕ್ಷರಾದ ವಿಠ್ಠಪ್ಪ ಗೋರಂಟ್ಲಿ, ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘದ ಜಿಲ್ಲಾ ಸಂಚಾಲಕಿ ಶಾಂತಕುಮಾರಿ ಎ.ಐ.ಸಿ.ಸಿ.ಟಿ.ಯು.ನ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಪ್ಪ, ಅಖಿಲ ಭಾರತ ಕೃಷಿ ಕಾರ್ಮಿಕ ಸಂಘದ ತಾಲೂಕ ಅಧ್ಯಕ್ಷ ಎಂ.ಯೇಸಪ್ಪ, ರವಿರೆಡ್ಡಿ ಮತ್ತು ಕೆಂಚಪ್ಪ ಹಿರೇಖೇಡಾ ಮತ್ತೀತರ ಕೃಷಿ ಕಾರ್ಮಿಕ ಸಂಘದ ಸದಸ್ಯರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.
Please follow and like us:
error

Leave a Reply

error: Content is protected !!