ಕೃಷಿ ಹಾಗೂ ತೋಟಗಾರಿಕೆ ಆದಾಯ ಉತ್ಪನ್ನ ಚಟುವಟಿಕೆಗಳ ತರಬೇತಿ.

ಕೊಪ್ಪಳ ಫೆ. ೨೪ (ಕರ್ನಾಟಕ ವಾರ್ತೆ) ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಸ್ತ್ರೀ ಶಕ್ತಿ ಮಹಿಳಾ ಸದಸ್ಯರಿಗೆ ಕೃಷಿ ಹಾಗೂ ತೋಟಗಾರಿಕಾ ಆಧಾರಿತ ಸಣ್ಣ ಆದಾಯ ಉತ್ಪನ್ನ ಚಟುವಟಿಕೆಗಳ ತರಬೇತಿಯನ್ನು ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ಇತ್ತೀಚೆಗೆ ಆಯೋಜಿಸಲಾಯಿತು.
      ತರಬೇತಿಯಲ್ಲಿ ವಿಷಯ ತಜ್ಞೆ ಕವಿತಾ ಉಳ್ಳಿಕಾಶಿಯವರು ಕೃಷಿ ಮತ್ತು ತೋಟಗಾರಿಕೆ ಬೆಳೆಯ ಸಂಸ್ಕರಣೆ ಮತ್ತು ಮೌಲ್ಯವರ್ಧನೆಯ ಬಗ್ಗೆ ಮಾಹಿತಿ ನೀಡಿ, ಟೊಮ್ಯಾಟೊ ಮತ್ತು ಮೆಣಸಿನಕಾಯಿ ಉತ್ಪನ್ನಗಳ ಮೌಲ್ಯವರ್ಧನೆಯ ಪ್ರಾತ್ಯಕ್ಷಿಕೆ ಮಾಡಿ ತೋರಿಸಿದರು. ಮೌಲ್ಯವರ್ಧಿತ ಉತ್ಪನ್ನಗಳ ಮಾರುಕಟ್ಟೆ ಮತ್ತು ಉದ್ಯಮಶೀಲತೆಯ ಬಗ್ಗೆ ವಿಷಯ ತಜ್ಞ ಡಾ. ಗಿರೀಶ್ ಮರಡ್ಡಿ ಅವರು ಮಾಹಿತಿ
ನೀಡಿದರು. ಕಾರ್ಯಕ್ರಮದಲ್ಲಿ ೬೦ ಸ್ತ್ರೀ ಶಕ್ತಿ ಮಹಿಳಾ ಸದಸ್ಯರು ಭಾಗವಹಿಸಿ ತರಬೇತಿಯ
ಪ್ರಯೋಜನ ಪಡೆದುಕೊಂಡರು.

Please follow and like us:
error