You are here
Home > Koppal News > ತಂದೆ-ಮಗ ಕಾಣೆ : ಪತ್ತೆಗೆ ಸಹಕರಿಸಲು ಮನವಿ

ತಂದೆ-ಮಗ ಕಾಣೆ : ಪತ್ತೆಗೆ ಸಹಕರಿಸಲು ಮನವಿ

 ಕೊಪ್ಪಳ ತಾಲೂಕಿನ ಹ್ಯಾಟಿ-ಮುಂಡರಗಿ ಗ್ರಾಮದ ವೀರಯ್ಯ ತಂದೆ ಗವಿಸಿದ್ದಯ್ಯ ಕಲ್ಲೂರಮಠ (೬೦) ಹಾಗೂ ಬಸಯ್ಯ ತಂದೆ ವೀರಯ್ಯ ಕಲ್ಲೂರಮಠ (೩೮), ತಂದೆ-ಮಗ ಇಬ್ಬರೂ, ಕಳೆದ ಜೂ. ೨೫ ರಂದು ಕಾಣೆಯಾಗಿದ್ದಾರೆ ಇವರ ಪತ್ತೆಗೆ ಸಹಕರಿಸುವಂತೆ  ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
  ಬಸಯ್ಯ, ಖಾಸಗಿ ವೈದ್ಯನಾಗಿದ್ದು, ಅನಾರೋಗ್ಯ ನಿಮಿತ್ತ ಕೊಪ್ಪಳದಲ್ಲಿ ಇತರೆ ವೈದ್ಯರ ಬಳಿ ಚಿಕಿತ್ಸೆ ಪಡೆಯುವ ಸಲುವಾಗಿ ತಮ್ಮ ತಂದೆ ವೀರಯ್ಯ ಅವರ ಜೊತೆಗೂಡಿ ಕಳೆದ ಜೂ. ೨೫ ರಂದು ಕೊಪ್ಪಳಕ್ಕೆ ತೆರಳುವುದಾಗಿ ಹೇಳಿ ಹೋದವರು, ನಾಪತ್ತೆಯಾಗಿದ್ದಾರೆ ಎಂದು ಬಸಯ್ಯ ಅವರ ಪತ್ನಿ ಕೊಪ್ಪಳದ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಕಾಣೆಯಾದವರ ವಿವರ ಇಂತಿದೆ.  ವೀರಯ್ಯ ಗವಿಸಿದ್ದಯ್ಯ ಕಲ್ಲೂರಮಠ (೬೦) ಸಾ|| ಹ್ಯಾಟಿ-ಮುಂಡರಗಿ, ಜಾ:ಜಂಗಮ, ಕನ್ನಡ ಭಾಷೆ ಮಾತನಾಡುತ್ತಾರೆ. ದುಂಡನೆಯ ಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿರುತ್ತಾನೆ. ಮೈಮೇಲೆ ಬಿಳಿಯ ದೋತರ, ಬಿಳಿಯ ಅಂಗಿ ಧರಿಸಿರುತ್ತಾರೆ.  ಇನ್ನೊಬ್ಬರು, ಬಸಯ್ಯ ತಂದೆ ವೀರಯ್ಯ ಕಲ್ಲೂರಮಠ (೩೮) ಸಾ|| ಹ್ಯಾಟಿ-ಮುಂಡರಗಿ, ಜಾ:ಜಂಗಮ, ವೃತ್ತಿ : ಖಾಸಗಿ ವೈದ್ಯ, ಕನ್ನಡ ಭಾಷೆ ಮಾತನಾಡುತ್ತಾರೆ. ದುಂಡನೆಯ ಮುಖ, ಕೆಂಪು ಮೈಬಣ್ಣ, ಸಾಧಾರಣ ಮೈಕಟ್ಟು, ಬಲಗಡೆ ಬೆನ್ನಿಗೆ ಅಗಲವಾದ ಕಪ್ಪು ಮಚ್ಚೆ ಇರುತ್ತದೆ. ಮೈಮೇಲೆ ಚಾಕಲೇಟ ಬಣ್ಣದ ಉದ್ದನೆಯ ತೋಳಿನ ಶರ್ಟ, ಕಪ್ಪು ನೀಲಿ ಬಣ್ಣದ ಪ್ಯಾಂಟ ಧರಿಸಿರುತ್ತಾನೆ.
ಈ ಚಹರೆಯುಳ್ಳ ವ್ಯಕ್ತಿಗಳ ಯಾವುದೇ ಠಾಣಾ ವ್ಯಾಪ್ತಿಯಲ್ಲಿ ಯಾರಿಗಾದರೂ ಕಂಡಲ್ಲಿ ಈ ಬಗ್ಗೆ ಮಾಹಿತಿ ಸಿಕ್ಕಲ್ಲಿ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ಮೊ.೯೪೮೦೮೦೩೭೪೬, ೦೮೫೩೯-೨೨೧೩೩೩, ಸಿಪಿಐ ಕೊಪ್ಪಳ ಮೊ.೯೪೮೦೮೦೩೭೩೧, ಡಿವೈಎಸ್‌ಪಿ ಕೊಪ್ಪಳ ಮೊ.೯೪೮೦೮೦೩೭೨೦, ೦೮೫೩೯-೨೩೦೩೪೨, ಎಸ್.ಪಿ. ಕಛೇರಿ ಕೊಪ್ಪಳ ೦೮೫೩೯-೨೩೦೧೧೧ ಹಾಗೂ ಕಂಟ್ರೋಲ್ ರೂಂ. ದೂ.೦೮೫೩೯-೨೩೦೧೦೦, ೦೮೫೩೯-೨೩೦೨೨೨ ಈ ದೂರವಾಣಿಗಳಿಗೆ ಸಂಪರ್ಕಿಸುವಂತೆ  ತಿಳಿಸಿದೆ.

Leave a Reply

Top