fbpx

ಪ್ರತಿಭೆಗಳನ್ನು ಗುರುತಿಸಿಲು ಪ್ರತಿಭಾಕಾರಂಜಿಯಂತಹ ವೇದಿಕೆಗಳ ಅವಶ್ಯವಿದೆ:ಉಮೇಶ ಪೂಜಾರ

 ಮಕ್ಕಳಲ್ಲ್ಲಿರುವ ಸೂಪ್ತ ಪ್ರತಿಭೆಗಳು ಅರಳಲು ಪ್ರತಿಭಾಕಾರಂಜಿಯಂತಹ ವೇದಿಕೆಗಳ ಅವಶ್ಯವಿದೆ ಎಂದು ಕೊಪ್ಪಳ ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮೇಶ ಪೂಜಾರ ಹೇಳಿದರು.
 ನಗರದ ಬನ್ನಿಕಟ್ಟಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕೊಪ್ಪಳ ಪಶ್ಚಿಮ ಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿಯ ಕಾರ್ಯಕ್ರಮದ ಉದ್ಘಾಟನೆಯನ್ನು ನೇರವೇರಿಸಿ ಮಾತನಾಡುತ್ತ,ಪ್ರತಿಯೊಂದು ಮಗುವಿನಲ್ಲಿ ವಿಭಿನ್ನವಾದ ಪ್ರತಿಭೆಗಳು ಅಡಗಿರುತ್ತವೆ.ಅಂತಹ ಪ್ರತಿಭೆಗಳನ್ನು ಗುರುತಿಸುವುದರ ಮೂಲಕ ಪ್ರತಿಭಾಕಾರಂಜಿಯಂತಹ ಕಾರ್ಯಕ್ರಮವನ್ನು ಹಮ್ಮಕೊಳ್ಳುವುದರಿಂದ ಅವರಲ್ಲಿ ಅಡಗಿರುವ ಸೂಪ್ತವಾದ ಶಕ್ತಿಯನ್ನು ಹೊರಹಾಕುವುದರ ಜೊತೆಗೆ ಮಕ್ಕಳು ಇನ್ನೂ ಹೆಚ್ಚಿನ ಕ್ಷೇತ್ರಗಳಲ್ಲಿ ಭಾಗವಹಿಸಲು ಅನುಕೂಲವಾಗುತ್ತದೆ.ಶಿಕ್ಷಕರಿಗೆ ಅನೇಕ ಒತ್ತಡ ರೀತಿಯ ಕಾರ್ಯಗಳಾದ ಪರೀಕ್ಷೆಗಳು,ಕ್ರಿಢಾಕೂಟಗಳ ಮಧ್ಯೆ ಪ್ರತಿಭಾಕಾರಂಜಿಯಂತಹ ಅನೇಕ ಚಟುವಟಿಕೆಗಳಿಗೆ ಮಕ್ಕಳನ್ನು ಸಿದ್ದಗೊಳಿಸುವ ಜವಾಬ್ದಾರಿಯು ಶಿಕ್ಷಕರ ಮೇಲಿದೆ.ಶಿಕ್ಷಕರು ತಮ್ಮ ಕರ್ತವ್ಯ ಹಾಗೂ ಜವಾಬ್ದಾರಿಗಳನ್ನು ಅರಿತು ಕಾರ್ಯನಿರ್ವಹಿಸಬೇಕಿದೆ ಎಂದು ಹೇಳಿದರು.
     ಕೊಪ್ಪಳ ವಲಯದ ಶಿಕ್ಷಣ ಸಂಯೋಜಕರಾದ ಎಸ್.ಬಿ.ಕುರಿ ಮಾತನಾಡಿ,ಸಮಾಜವು ಸದಾ ಬದಾವಣೆಯನ್ನು ಹೊಂದುತ್ತಿರುತ್ತದೆ.ಇಂತಹ ಬದಲಾವಣೆಗೆ ತಕ್ಕಂತೆ ಶಿಕ್ಷಕರು ಕೂಡಾ ತಮ್ಮ ಪಾಠ ಬೋಧನೆಯಲ್ಲಿ ಹೊಸ-ಹೊಸ ಬೋಧನಾ ತಂತ್ರಗಳನ್ನು ಅಳವಡಿಸಿಕೊಂಡು ಶಿಕ್ಷಣ ಅಭಿವೃದ್ದ್ದಿಗೆ ಪ್ರತಿಯೊಬ್ಬರು ಕೂಡಾ ಶ್ರಮಿಸಬೇಕು ಎಂದು ಹೇಳಿದರು.
ಪಶ್ಚಿಮ ಕ್ಲಸ್ಟರಿನ ಸಿ.ಆರ್.ಪಿ.ಗಳಾದ ವಿಜಯಲಕ್ಷ್ಮೀ ಜಗಳೂರು ಪ್ರಾಸ್ತಾವಿಕವಾಗಿ ಮಾತನಾಡಿ,ತಿರ್ಪುಗಾರರು ಸಮರ್ಪಕವಾದ ರೀತಿಯಲ್ಲಿ ತಿರ್ಪು ನೀಡಬೇಕು ಎಂದು ಹೇಳಿದರು.
   ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬನ್ನಿಕಟ್ಟಿ ಪ್ರೌಢ ಶಾಲೆಯ ಪ್ರಭಾರಿ ಮುಖ್ಯೋಪಾದ್ಯಾಯರಾದ ತಾಹೇರಾಬೇಗಂ ಡಂಬಳ ಅಧ್ಯಕ್ಷತೆಯನ್ನು ವಹಿಸಿದ್ದರು.
  ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಶರಣಪ್ಪ ಗೌರಿಪುರ,ಮುನಿರಾದ ವಲಯದ ಶಿಕ್ಷಣ ಸಂಯೋಜಕರಾದ ಹನುಂತಪ್ಪ ನಾಯಕ,ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ,ಜಿಲ್ಲಾಧ್ಯಕ್ಷರಾದ ಚನ್ನಬಸಪ್ಪ ಬೆಲ್ಲದ,ಎಸ್.ಸಿಹಾಗೂ ಎಸ್.ಟಿ ಪ್ರಾಥಮಿಕ,ಮಾದ್ಯಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಭರಮಪ್ಪ ಕಟ್ಟಿಮನಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ ಚಿಜ್ಜೇರಿ,ಕೊಪ್ಪಳ ತಾಲೂಕ ಪ್ರಥಮಿಕ ಶಾಲಾ ಶಿಕ್ಷಕರ ಪತ್ತಿನ ಸಂಘದ ಅಧ್ಯಕ್ಷರಾದ ಮೈಲಾರಗೌಡ ಹೊಸಮನಿ,ಶಿಕ್ಷಕರಾದ ಮಹಾಂತೇಶ,ಶರಣಗೌಡ ಪಾಟೀಲ,ಶೈಲಜಾ,ಮಂಜುಳಾ.ಎನ್.ಶೋಭಾ,ಗೋಪಾಲರಾವ್,ಮಂಜುಳಾ.ವಿ ಮುಂತಾದವರು ಹಾಜರಿದ್ದರು.
 ಶಿಕ್ಷಕರಾದ ಜಯರಾಜ ಬೂಸದ ಕಾರ್ಯಕ್ರಮವನ್ನು ನಿರೂಪಿಸಿದರು.
ಶಿಕ್ಷಕರಾದ ರಾಮರಡ್ಡೆಪ್ಪ ಸ್ವಾಗತಿಸಿ,ವೀರಯ್ಯಾ ಒಂಟಿಗೋಡಿಮಠ ಎಲ್ಲರಿಗೂ ವಂದಿಸಿದರು.
Please follow and like us:
error

Leave a Reply

error: Content is protected !!