ಸೇವಾ ವಿದ್ಯಾಲಯದಲ್ಲಿ ವಿಶ್ವವಿದ್ಯಾರ್ಥಿಗಳ ದಿನಾಚರಣೆ

ಕಿನ್ನಾಳ: ಕಿನ್ನಾಳ ಗ್ರಾಮದ ಸೇವಾ ವಿದ್ಯಾಲಯದಲ್ಲಿ ಇಂದು ಡಾ.ಎಪಿಜೆ ಅಬ್ದುಲ್ ಕಲಾಂರ್ ಜನ್ಮದಿನ ನಿಮಿತ್ಯ ವಿಶ್ವ ವಿದ್ಯಾರ್ಥಿಗಳ ದಿನಾಚರಣೆಯನ್ನು ಆಚರಿಸಲಾಯಿತು. ಕಾರ‍್ಯಕ್ರಮವನ್ನು ಉದ್ಘಾಟನೆಯನ್ನು ಮಂಗಳೇಶ ಮಂಗಳೂರು ವಕೀಲರು ಮುದ್ಲಾಪೂರ ನೆರವೇರಿಸಿ ಮಾತನಾಡಿದರು.  ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಚನ್ನನಗೌಡ ಮಾಲಿಪಾಟೀಲ್ ದೇವಲಾಪೂರ,ಮಲ್ಲಪ್ಪ ಎತ್ತಿನಮನಿ ಮುದ್ಲಾಪೂರ ಡಾ.ಎಪಿಜೆ  ಅಬ್ದುಲ್ ಕಲಾಂರ ಜೀವನ ಕುರಿತು ಮಾತನಾಡಿದರು. 
ಕಾರ‍್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಸೌಮ್ಯ ಹಿರೇಮಠ ಮತ್ತು ನಂದೀಶ ಎತ್ತಿನಮನಿ ಕಲಾಂರ ಜೀವನ ಚರಿತ್ರೆ ಹಾಗೂ ಮಂಗಳಯಾನದ ಕುರಿತುಮಾತನಾಡಿದರು.  ಶಿಕ್ಷಕರಾದ ಶ್ರೀಕಾಂತ ದೇಶಪಾಂಡೆ, ಮಹ್ಮದ ರಫಿ ಹಿರೇಮನಿ, ದಾವಲಸಾಬ ಬೆಟಗೇರಿ, ಗಾಯತ್ರಿ ಯರಾಶಿ ಡಾ.ಎಪಿಜೆ  ಅಬ್ದುಲ್ ಕಲಾಂರ  ಕುರಿತು ಮಾತನಾಡಿದರು. ಸ್ವಾಗತವನ್ನು ಯಲ್ಲಮ್ಮ  ಪೂಜಾರ,ಪ್ರಾರ್ಥನೆಯನ್ನು ಸೌಮ್ಯ ಮತ್ತು ಸಂಗಡಿಗರು ಮಾಡಿದರೆ ನಿರೂಪಣೆಯನ್ನು ಶ್ರೀದೇವಿ ಯರಾಶಿ ನೆರವೇರಿಸಿದರು. 

Related posts

Leave a Comment