ಚಾಚಾ ನೆಹರು: ಹಸಿರು ಕ್ರಾಂತಿ ಔದ್ಯೋಗಿಕರಣದ ಪಿತಾಮಹ -ಕೆ.ಬಸವರಾಜ ಹಿಟ್ನಾಳ

 ಶುಕ್ರವಾರ ಬೆಳಗ್ಗೆ ೧೦.೩೦ಕ್ಕೆ ಜಿಲ್ಲಾ ಕಾಂಗ್ರೇಸ್ ಕಾರ್ಯಾಲಯದಲ್ಲಿ ನಡೆದ ನೆಹರು ಜನ್ಮ ದಿನಾಚಾರಣೆ ಅಂಗವಾಗಿ ಮಾತನಾಡಿದ ಅವರು ಪಂಡಿತ ಜವಹಾರಲಾಲ್ ನೆಹರು ಅವರು ಇಂಗ್ಲೇಂಡ್ ನಿಂದ ಬ್ಯಾರಿಸ್ಟರ್ ಪಧವಿ ಪಡೆದುಕೊಂಡು ಬಂದು ನೇರವಾಗಿ ಸ್ವತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡು ಬ್ರಿಟಿಷರ ದಬ್ಬಾಳಿಕೆಯಿಂದ ದೇಶದ ಸ್ವತಂತ್ರ್ಯಕ್ಕಾಗಿ ದುಡಿದ ಮಹಾನ್ ಸೇನಾನಿ-೧೯೨೦ರಲ್ಲಿ ಅಸಹಕಾರ ಚಳುವಳಿಯಲ್ಲಿ ಪಾಲ್ಗೋಂಡು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ೧೯೪೨ರ ಚಳುವಳಿಯಲ್ಲಿ ಮುಂದಾಳತ್ವ ವಹಿಸಿ ಬ್ರಿಟಿಷರ ಕಪಿ ಮುಷ್ಠಿಯಿಂದ ಭಾರತಕ್ಕೆ ಸ್ವತಂತ್ರ್ಯ ಕೊಡಿಸಿದ ಧೀಮಂತ ನಾಯಕ ೧೯೪೭ರಲ್ಲಿ ರಾಷ್ಟ್ರದ ಮೊದಲ ಪ್ರದಾನಿಯಾಗಿ ಆಯ್ಕೆಯಾದರು. ದೇಶದ ಸರ್ವಾಂಗೀಣ ಅಭಿವೃದ್ದಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದು ಭಾರತ ದೇಶವನ್ನು ಸಂಪತ್ ಬರಿತವನ್ನಾಗಿ ಮಾಡಿದರು. ಬಡ ಕೃಷಿಕರಿಗೆ ಅನುಕೂಲವಾಗುವಂತೆ ಬೃಹತ್ ಡ್ಯಾಂ ಗಳನ್ನು ನಿರ್ಮಾಣಮಾಡಿ ದೇಶದ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಿದರು.   ಯುವಕರಿಗೆ ಉದ್ಯೋಗ ಸೃಷ್ಟಿಸಲು ಹೊಸ ಹೊಸ ಕೈಗಾರಿಕೆಗಳನ್ನು ಸ್ತಾಪನೆ ಮಾಡಿ ದೇಶದ ಅರ್ಥವ್ಯವಸ್ತೆಯನ್ನು ಹೆಚ್ಚಿಸಿದರು. ಆಧುನಿಕ ತಾಂತ್ರಿಕತೆಗೆ ಹೆಚ್ಚಿನ ಮಹತ್ವ ನೀಡಿದ ದಿ|| ಪಂಡಿತ್ ಜವಾಹರಲಾಲ್ ನೆಹರು ಅವರು ದೇಶದಲ್ಲಿ ಹಸಿರು ಕ್ರಾಂತಿ ಹಾಗೂ ಕೈಗಾರಿಕೆ ವಸಾತೂಗಳ ಪಿತಾಮಹ ಆಗಿದ್ದರು. ನೆಹರು ಅವರು ಚಿಕ್ಕ ಮಕ್ಕಳಿಗೆ ಹೆಚ್ಚಿನ ಪ್ರೀತಿ ತೋರುತ್ತಿದ್ದರು. ಆದ ಕಾರಣ ಇವರನ್ನು ಓಲುಮೆಯಿಂದ ದೇಶದ ಜನತೆ ಚಾಚಾ ಎಂದೆ ಕರೆಯುತ್ತಿದ್ದರು.
ನ್ಯಾಯಾವಾದಿಗಳಾದ ಎ.ವಿ.ಕಣವಿಯವರು ಪಚಿಡಿತ್ ಜವಾಹರರು ಒಬ್ಬ ಕವಿಯಾಗಿ ಉತ್ತಮ ವಾಗ್ಮೀಗಳಾಗಿ ದೇಶದ ಅಭಿವೃದ್ದಿಗೆ ಶ್ರಮಿಸಿದ ಮಹಾನ್ ಚೇತನ ಎಂದು ಇವರು ಬರೆದ ಡಿಸ್ಕೋವರಿ ಆಫ್ ಇಂಡಿಯಾ ಪುಸ್ತಕದ ಮೂಲಕ ಪ್ರತಿಯೊಬ್ಬ ಭಾರತೀಯನು ತಿಳಿದುಕೊಳ್ಳಲು ಸಹಕಾರಿಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ  ಅಂದಣ್ಣ ಅಗಡಿ, ಎಸ್.ಬಿ. ನಾಗರಳ್ಳಿ, ಜುಲ್ಲು ಖಾದರಿ, ದಾದಾಪೀರ, ಕೆ.ಎಮ್.ಸಯ್ಯದ್, ಶ್ರೀಮತಿ ಲತಾ ವಿ.ಸಂಡೂರು, ಶ್ರೀಮತಿ ರೇಣುಕಾ ಪೂಜಾರ, ಶಕುಂತಲಾ ಹುಡೇಜಾಲಿ, ಗಾಳೆಪ್ಪ ಪೂಜಾರ, ಕೃಷ್ಣ ಇಟ್ಟಂಗಿ, ಶ್ರೀಮತಿ ಇಂದಿರಾಭಾವಿಕಟ್ಟಿ, ವೈಜನಾದ ದಿವಟರ್, ಕಾಟನ್ ಪಾಷಾ, ನಾಗರಾಜ ಬಳ್ಳಾರಿ, ಶಿವಾನಂದಾ ಹೂದ್ಲೂರು, ಪ್ರಶಾಂತ ರಾಯ್ಕರ, ಮಾನ್ವಿ ಪಾಷಾ, ಅನುಸುಯಮ್ಮ ವಾಲ್ಮೀಕಿ, ನೂರಜಾನ ಬೇಗಂ, ಗವಿಸಿದ್ದಯ್ಯ ಹುಡೇಜಾಲಿ, ಸುಜಾತಾ ಮುಲಿಮನಿ, ನೀಲಮ್ಮ ಇನ್ನೂ ಅನೇಕ ಕಾಂಗ್ರೇಸ್ ಕಾರ್ಯಕರ್ತರು  ಉಪಸ್ಥಿತರಿದ್ದರೆಂದು ಪಕ್ಷದ ವಕ್ತಾರ ಅಕ್ಬರ ಪಾಷಾ ಪಲ್ಟನ ರವರು ತಿಳಿಸಿದ್ದಾರೆ.
       

Leave a Reply