ತೋಟಗಾರಿಕೆ ಬೆಳೆ ಹಾನಿ ಪ್ರದೇಶಕ್ಕೆ ಸಂಸದರ ಭೇಟಿ

ಕೊಪ್ಪಳ ತಾಲೂಕಿನಲ್ಲಿ ಕಳೆದ ಭಾನುವಾರದಂದು ಬಿರುಗಾಳಿ ಸಹಿತ ಸುರಿದ ಭಾರಿ ಮಳೆಗೆ ಹಾನಿಗೊಳಗಾದ ತೋಟಗಾರಿಕೆ ಬೆಳೆ ಪ್ರದೇಶಕ್ಕೆ ಸಂಸದ ಸಂಗಣ್ಣ ಕರಡಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

  ಕಳೆದ ಭಾನುವಾರದಂದು ಬಿರುಗಾಳಿ ಸಹಿತ ಸುರಿದ ಭಾರಿ ಮಳೆಗೆ ಕೊಪ್ಪಳ ತಾಲೂಕಿನ ಚುಕ್ಕನಕಲ್, ಮುದ್ದಾಬಳ್ಳಿ, ಗೊಂಡಬಾಳ, ಹ್ಯಾಟಿ, ಹೊಸಳ್ಳಿ ಮತ್ತಿತರೆ ಗ್ರಾಮಗಳ ಸುಮಾರು ೫೦೦ ಎಕರೆ ಪ್ರದೇಶದಲ್ಲಿ ಬೆಳೆದ ತೋಟಗಾರಿಕೆ ಬೆಳೆ ಹಾನಿಯಾಗಿದೆ.  ಬಾಳೆ, ವಿಳೇದ ಎಲೆ ಬಳ್ಳಿ ಮತ್ತಿತರ ಬೆಳೆಗಳಿಗೆ ಅಪಾರ ಹಾನಿಯಾಗಿದೆ.  ನಷ್ಟ ಅನುಭವಿಸಿದ ರೈತರಿಗೆ ಹಾಗೂ ಮನೆ ಹಾನಿ ಅನುಭವಿಸಿದವರಿಗೆ ಸರ್ಕಾರದಿಂದ ಪರಿಹಾರ ಒದಗಿಸಬೇಕಿದೆ ಎಂದು ಸಂಸದ ಸಂಗಣ್ಣ ಕರಡಿ ಅವರು ಹೇಳಿದರು ಎಂದು ಸಂಸದರ ಕಚೇರಿ ಪ್ರಕಟಣೆ ತಿಳಿಸಿದೆ.

Related posts

Leave a Comment