ಜಿಲ್ಲಾ ಸರಕಾರಿ ವಕೀಲರಾಗಿ ಅಸೀಪ್ ಅಲಿ ನೇಮಕ.

ಕೊಪ್ಪಳ-17- ಹಿರಿಯ ವಕೀಲರಾದ ಅಸೀಪ್ ಅಲಿ ಎಸ್. ಇವರನ್ನು ಜಿಲ್ಲಾ ಸರಕಾರಿ ವಕೀಲರನ್ನಾಗಿ ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಮಾಡಿದೆ. ಜಿಲ್ಲಾ ಸರಕಾರಿ ವಕೀಲರಾಗಿದ್ದ ಶರಣಪ್ಪ ಮುದಿಬಸನಗೌಡರ ಅಧಿಕಾರವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ  ಮುಂದಿನ ಮೂರು ವರ್ಷಗಳ ಅವಧಿಗೆ ಜಿಲ್ಲಾ ಸರಕಾರಿ ವಕೀಲ ಹುದ್ದೆಗೆ ನೇಮಕ ಮಾಡಿ ಸರಕಾರದ ಆದೀನ ಕಾರ್‍ಯದರ್ಶಿ ಕಳಸೇಗೌಡ ಆದೇಶ ಹೊರಡಿಸಿದ್ದಾರೆ.
ಅಸೀಪ್ ಅಲಿಯವರನ್ನು  ಜಿಲ್ಲಾ ಸರಕಾರಿ ವಕೀಲರನ್ನಾಗಿ ನೇಮಕ ಮಾಡಿದ್ದಕ್ಕೆ ಅರ್ಜುನಸಾ ಕಾಟವಾ, ಇಬ್ರಾಹಿಂಸಾಬ ಬಿಸರಳ್ಳಿ, ಅಮ್ಜದ್ ಪಟೇಲ್, ವೈಜನಾಥ ದಿವಟರ್,ನಾಗರಾಜ ಬಳ್ಳಾರಿ  ಸೇರಿದಂತೆ ಆಪ್ತರು ಮತ್ತು ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.
Please follow and like us:
error