ಮಂಗಳಾಪುರದಲ್ಲಿ ಕೆ.ಎಂ.ಸೈಯ್ಯದ್‌ಗೆ ಸನ್ಮಾನ

ಕೊಪ್ಪಳ,ಆ.೨೧: ಮುಸ್ಲಿಂ ಸಮುದಾಯದ ಪವಿತ್ರ ರಂಜಾನ್ ಹಬ್ಬದ ದಿನದಂದು ತಾಲೂಕಿನ ಮಂಗಳಾಪುರ ಗ್ರಾಮದಲ್ಲಿ ಮುಸ್ಲಿಂ ಕಮೀಟಿ ವತಿಯಿಂದ ಸೈಯ್ಯದ್ ಫೌಂಡೇಶನ್ ಅಧ್ಯಕ್ಷ ಹಾಗೂ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಮುಖಂಡ ಕೆ.ಎಂ.ಸೈಯ್ಯದ್‌ಗೆ ಸನ್ಮಾನಿಸಲಾಯಿತು. ನಂತರ ಏರ್ಪಡಿಸಿದ ಸರಳ ಸಾಂಕೇತಿಕ ಕಾರ್ಯಕ್ರಮದಲ್ಲಿ ಸನ್ಮಾನಗೊಂಡ ಬಳಿಕ ಮಾತನಾಡಿದ ಅವರು, ರಂಜಾನ ಮಾಸಾಚರಣೆ ಪೂರ್ಣಗೊಳಿಸಿ ಈದ್ ಆಚರಿಸಿದ ಸಮಾಜ ಬಾಂಧವರು ಇಂತಹ ಹಬ್ಬಗಳು ಭಾವೈಕ್ಯತೆಗೆ ಪ್ರತೀಕವಾಗಿದ್ದು, ಸರ್ವರೊಂದಿಗೆ ಸೌಹಾರ್ದತೆಯುತವಾಗಿ ಬಾಳುವಂತಹ ಸಂದೇಶ ಇಂತಹ ಹಬ್ಬವು ಸಮಾಜಕ್ಕೆ ನೀಡುತ್ತದೆ ಎಂದರು.
ಮುಂಬರುವ ದಿನಗಳಲ್ಲಿ ಗ್ರಾಮದಲ್ಲಿನ ಸರ್ವ ಜನರು ಇದೇ ರೀತಿ ರಾಷ್ಟ್ರೀಯ ಭಾವೈಕ್ಯತೆಯಿಂದ ಜೀವನ ಸಾಗಿಸಿ ಇತರರಿಗೆ ಮಾದರಿಯಾಗಬೇಕು ಎಂದ ಅವರು, ಸರ್ವರಿಗೂ ಹಬ್ಬದ ಶುಭಾಷಯ ಕೋರಿದರು.ಈ ಸಂದರ್ಭದಲ್ಲಿ ಸಾರ್ವಜನಿಕರು ಮುಸ್ಲಿಂ ಸಮಾಜದ ಮುಖಂಡರು ಸೇರಿದಂತೆ ಎಸ್.ಹೆಚ್.ಉಮರಿ, ಅಬ್ದುಲ್ ಶುಕೂರ ಸಾಬ, ಅಸ್ಲಾಂಸಾಬ, ಸೈಯ್ಯದ್ ಫೌಂಡೇಶನ್ ಕಛೇರಿ ಆಪ್ತ ಸಹಾಯಕ ವಾಸೀಮ ಹುಲಿಗೇರಿ, ರಾಜಕೀಯ ಆಪ್ತಕಾರ್ಯದರ್ಶಿ ಮಾರುತಿ ಮಾಗಳದ್, ಯುವ ನಾಯಕ ಸದ್ದಾಂ ಮಖದ್ದೂಮಿಯಾ ಅಲ್ಲದೇ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು 
Please follow and like us:

Related posts

Leave a Comment