ಅಬಾಕಸ್ ಶಿಕ್ಷಣ ಕಲಿಕಾ ತರಬೇತಿ ಶಿಬಿರ.

ಕೊಪ್ಪಳ – 22- ತಾಲೂಕಿನ ಹುಲಗಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಡ ಪಂಗಡ ವಿದ್ಯಾರ್ಥಿಗಳಿಗೆ ಅಬಾಕಸ್ ತರಬೇತಿಯನ್ನು ಜಿಲ್ಲಾ ಪಂಚಾಯತ ಹಾಗೂ ಶ್ರೀ ಸಪ್ತಗಿರಿ ನಗರ ಮತ್ತು ಗ್ರಾಮಾಭಿವೃದ್ಧಿ ಸಂಸ್ಥೆ ಹುನುಗುಂದ ಇವರ  ಆಶ್ರಯದಲ್ಲಿ ಏರ್ಪಡಿಸಲಾಯಿತು.  ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಕರಿಬಸಪ್ಪ ಅವರು ಅಬಾಕಸ್ ಶಿಕ್ಷಣ ಕಲಿಕಾ ಯೋಜನೆಯ ಗುರಿ ಮತ್ತು ಉದ್ದೇಶಗಳನ್ನು ತಿಳಿಸಿದರು ಶಾಲಾ ಉಸ್ತುವಾರಿ ಅಭಿವೃದ್ಧಿ ಸಮಿತಿ  ಅಧ್ಯಕ್ಷರಾದ ಜೀಯಾಸಾಬ ಮಾತನಾಡಿ ಅಬಾಕಸ್ ತರಭೇತಿಯ ವಿದ್ಯಾರ್ಥಿಗಳಿಗೆ ಗಣಿತ ವಿಷಯವನ್ನು ಸರಳವಾಗಿ ಅರಿತು ಕೊಳ್ಳಲು ಉಪಯುಕ್ತವಾಗುವುದರ ಜೊತೆಗೆ ಮಾನಸಿಕ ಸಾಮರ್ಥ್ಯ ಬಲವರ್ಧನೆಗೆ ಸಹಾಯಕವಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ರೇಣಕಮ್ಮ ವಹಿಸಿದ್ದರು. ಮುಖ್ಯಗುರುಗಳಾದ ಕಾಳಪ್ಪ ನಾಯಕ ಸ್ವಾಗತಿಸಿದರು ಶಿವಶಂಕರಯ್ಯ  ವಂದಿಸಿದರು. ಸಂಸ್ಥೆಯ ಸಿಬ್ಬಂದಿಗಳಾದ ಅಂಬುಜಾ, ಲಾಯಪ್ಪ ನಂದ್ಯಾಳ, ವೆಂಕಟೇಶ ಸೇರಿದಂತೆ ಶಾಲೆ ಮಕ್ಕಳು ಭಾಗವಹಿಸಿದ್ದರು.

Please follow and like us:

Related posts

Leave a Comment