ಸದನದಲ್ಲಿ ಕಾಲ ಹರಣ ಮಾಡದಿರಿ

  ಕೆಲ ದಿನಗಳಿಂದ ಸದನದಲ್ಲಿ ನಡೆಯುತ್ತಿರುವ ಚರ್ಚೆಗಳನ್ನ ಗಮನಿಸಿದ್ರೆ ಯಾಕೊ ಅಯ್ಯೋ ಅನಿಸುತ್ತೆ, ಕೊಪ್ಪಳ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದ ಬಹುಬಾಗಗಳಲ್ಲಿ ಮುಂಗಾರು ಮಳೆ ಕೈ ಕೊಟ್ಟಿರುವದರಿಂದ ರೈತನ ಗೋಳು ಕೆಳೊರಿಲ್ಲವಾಗಿದೆ, ಜನಪ್ರತಿನಿದಿಗಳಂತು ಸದನದಲ್ಲಿ ರೈತರ ಸಮಸ್ಯೆಯ ಬಗ್ಗೆ ಚರ್ಚೆಮಾಡುವುದು ಬಿಟ್ಟು ಇಲ್ಲ ಸಲ್ಲದ ಸಣ್ಣ ಪುಟ್ಟ ವಿಷಯಗಳನ್ನ ರಾಷ್ಟ್ರಮಟ್ಟದ ಸುದ್ದಿ ಎನ್ನುವ ಹಾಗೆ ಬಿಂಬಿಸುತ್ತಿದ್ದಾರೆ. ಮೊನ್ನೆಯಷ್ಟೆ ಕಾಫಿ ಶಾಪ್ ನಲ್ಲಿ ಒಂದು ಪೋಟೊ ಕ್ಲಿಕ್ಕಿಸಿದ್ದ ಎಡಿಜಿ ರವಿಂದ್ರನಾಥ ಪ್ರಕರಣ ಎಲ್ಲರ ಮನೆ ಮಾತಾಗಿ ಹೊಯಿತು, ಈಗ ಮತ್ತೆ ಅದೇ ಹೊಲಿಕೆಯನ್ನ ಹೊಲುವ ಶಾಸಕ ಕಾಶಪ್ಪನವರ ಬಾರ್ ನಲ್ಲಿ ಪೋಲಿಸ ಪೇದೆ ಮೇಲೆ  ಹಲ್ಲೆ ಮಾಡಿದ್ದಾನೆ ಎಂಬ ಸುದ್ದಿ ಸದನದಲ್ಲಿ ಬಾರಿ ದೊಡ್ಡ ಸುದ್ದಿಯಾಗಿ ಕಾಣುತ್ತಿರುವದನ್ನ ನೋಡಿದ್ರೆ ವಿಚಿತ್ರ ಎನಿಸುತ್ತೆ, ಅಲ್ಲ ಸ್ವಾಮಿ ಮತಹಾಕಿ ಕಳಿಸಿರುವದು ರೈತರ ಸಮಸ್ಯೆ ಬಗ್ಗೆ ಮಹಿಳೆಯರ ಮೇಲೆ ಅತ್ಯಾಚಾರ ಗಳು ದಿನೆ ದಿನೆ ಹೆಚ್ಚಾಗುತ್ತಿವೆ ರೈತನ ಬೇಕು ಬೇಡಿಕೆಗಳ ಬಗ್ಗೆ ಚರ್ಚಿಸಿ ಅಂದ್ರೆ.. ಮಹತ್ವ ವಿಲ್ಲದ ವಿಷಯಗಳ ಬಗ್ಗೆ ಸದನದಲ್ಲಿ ಕಾಲ ಹರಣ ಮಾಡುವುದನ್ನ ಗಮನಿಸಿದ್ರೆ ನಾವು ಈಂತಹ ಪ್ರತಿನಿದಿಗಳನ್ನಾ ಜಯಗಳಿಸಿದ್ದು ಅಂತಾ ನಮಗೆ ಮುಜುಗುರವಾಗುತ್ತಿದೆ, ಶಾಸಕ ಹಲ್ಲೆ ಮಾಡಿದ್ದೆ ಆದ್ರೆ ಕಾನೂನಿದೆ, ಕಾನೂನಿ ಪ್ರಕಾರ ತನಿಖೆಯಾಗುತ್ತೆ ಅದಕ್ಕೆ ಸಂಬಂದ ಪಟ್ಟ ಇಲಾಖೆಗಳಿದ್ದಾವೆ, ಹಲ್ಲೆಗೊಳಗಾದವರು ದೂರು ನಿಡಿದ ಮೇಲೆ ಕಾನೂನು ಕ್ರಮ ತೆಗೆದು ಕೊಳ್ಳುವ ಅಧಿಕಾರಿಗಳಿದ್ದಾರೆ ಅದು ಬಿಟ್ಟು ಜನಪ್ರತಿನಿದಿಗಳಿಗೆ ಸದನದಲ್ಲಿ  ಬೆರಾವ ವಿಷಯವಿಲ್ಲದ ಹಾಗೆ ವರ್ತಿಸುತ್ತಿದ್ದಾರೆ. ರಾಜ್ಯದಲ್ಲಿ ಮುಂಗಾರು ಮಳೆಯನ್ನ ನಂಬಿದ್ದ ರೈತ ಇಂದು ದನಕರುಗಳಿಗೆ ಆಹಾರವಿಲ್ಲದೆ ಕುಡಿಯುವದಕ್ಕೆ ನೀರಿಲ್ಲದೆ ಸಾಯುವಂತಾ ಪರಸ್ಥಿತಿ ನಿರ್ಮಾಣವಾಗಿದೆ ಜೊತೆಗೆ ರಾಜ್ಯ ಮತ್ತು ಕೇಂದ್ರ ಸರಕಾರದ ಸೌಲಭ್ಯಗಳು ಧರ ಏರಿಕೆ ಬಿಸಿ ಮತ್ತಷ್ಟು ಗಾಯದ ಮೇಲೆ ಬರೆ ಎಳೆದಂತಾಗಿದೆ. ಸದನದಲ್ಲಿ ಪ್ರತಿಪಕ್ಷದ ನಾಯಕರು ಇಂತಹ ವಿಷಯದ ಬಗ್ಗೆ ಮಾತನಾಡುವುದು ಬಿಟ್ಟು ಕಿತ್ತೊಗಿರೊ ಸಣ್ಣ ಪುಟ್ಟ ವಿಷಯಗಳಿಗೆ ಕಾಲಹರಣ ಮಾಡುವುದು ಸರಿ ಅಲ್ಲ ಆಡಳಿತ ಪಕ್ಷವಾಗಲಿ ಇತರೆ ಪಕ್ಷದ ನಾಯಕರಾಗಲಿ ಸದನದಲ್ಲಿ ಮಹತ್ವದ ವಿಷಯಗಳನ್ನ ಮಾತ್ರ ಚರ್ಚಿಸುವಂತಾಗಲಿ
ಅಲ್ಲಾಬಕ್ಷಿ ಚಳ್ಳಾರಿ
ಸಾ.ಕೊಪ್ಪಳ
(ಮಾಧ್ಯಮ ವಿದ್ಯಾರ್ಥಿ

Related posts

Leave a Comment