ಡಾ.ಬಿ.ಆರ್ ಅಂಬೇಡ್ಕರ್ ರವರ ಪರಿನಿರ್ವಾಣ ಹೊಂದಿದ ಚಿರಸ್ಮರಣೀಯ ದಿನ


ಕೊಪ್ಪಳ :- ದಿ.೦೬  ರಂದು ಕೊಪ್ಪಳ ಜಿಲ್ಲಾ ಕೆ.ಆರ್.ಡಿ.ಎಸ್.ಎಸ್ ಜಿಲ್ಲಾ ಸಂಚಾಲಕರಾದ  ಶರಣಪ್ಪ ಹೆಚ್. ಲೇಬಗೇರಿ ಇವರು ಯುವಕರನ್ನು ಕುರಿತು ಇಂದಿನ ಯುವಕರು ದೇಶ ಪ್ರೇಮ ರಾಷ್ಟ್ರದ ಅಭಿವೃದ್ದಿಯ ಚಿಂತನೆ ಸಾಮಾಜಿಕ ಸಾಮರಸ್ಯದಂತಹ ದಿನ ದಲಿತರ ಶೋಷಿತ ವರ್ಗದವರ ಏಳಿಗೆಗೆ  ತಮ್ಮ ಸೇವೆಯನ್ನು ಮುಡುಪಾಗಿ ತಮ್ಮ ಜೀವನದ ಸ್ವಲ್ಪ ಸಮಯವನ್ನಾದರು ಮಿಸಲು ಇಡಬೇಕು ಹಾಗೂ ಮಾನವ ಜನಾಂಗದ ಹಕ್ಕುಗಳ ಹೋರಾಟಕ್ಕಾಗಿ ಅವಿರತವಾಗಿ ಶ್ರಮಿಸಬೇಕು ಏಕೆಂದರೆ ಮಹಾನ ವ್ಯಕ್ತಿಗಳ ಸಾಧನೆ ಬದುಕಿ ಬಂದ ದಾರಿ ಹಿನ್ನೋಟ ನೋಡಿದಾಗ ಅವರದೆ ಆದ ದೇಶಕ್ಕೆ ಕೋಡಿಗೆಯನ್ನು ನೀಡಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ರಂತಹ ವ್ಯಕ್ತಿಗಳ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂದು ಯುವಕರಿಗೆ ಕರೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಹಾಗೂ ತಾಲೂಕ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶರಣಪ್ಪ.ಹೆಚ್.ಲೇಬಗೆರಿ ಜಿಲ್ಲಾ ಸಂಚಾಲಕರು ಕೆ.ಆರ್.ಡಿ.ಎಸ್.ಎಸ್ ಲಕ್ಷ್ಮಿ ನಾರಾಯಣ ನಾಗ್ವಾರ ಬಣ ಕೊಪ್ಪಳ, ನಾಗೇಶ.ಹೆಚ್.ಲೇಬಗಿರಿ ಜಿಲ್ಲಾ ಖಜಾಂಚಿ ಕೊಪ್ಪಳ, ಇಮಾಮಸಾಬ.ಹೆಚ್.ದನಕನದೊಡ್ಡಿ, ಚನ್ನಪ್ಪಗೌಡ ಪೋಲಿಸಪಾಟೀಲ ಯರೂರು, ನರಸಪ್ಪ ಚನ್ನದಾಸರ, ರೇಣಪ್ಪ ರಮಿನಹಳ್ಳಿ, ರಾಮಣ್ಣ ಕಾರಬಾರಿ, ನಿಂಗಪ್ಪ ದೊಡ್ಡಮನಿ, ಮಂಜುನಾಥ ಹುಲಗಿ, ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply