ವೇತನ ನೀಡದ ಕುಷ್ಟಗಿ ತಾ.ಪಂ. ಇ.ಓ. ವಿರುದ್ಧ ಪ್ರತಿಭಟನೆ

 : ಕಳೆದ ೧೦-೧೨ ತಿಂಗಳುಗಳಿಂದ ವೇತನವಿಲ್ಲದೇ ಕಂಗಾಲಾಗಿರುವ ಗ್ರಾಮ ಪಂಚಾಯತ ನೌಕರರ ವೇತನ ನೀಡುವಲ್ಲಿ ಮೀನಾಮೇಷ ಏಣಿಸಿಸುತ್ತಿರುವ ಕುಷ್ಟಗಿ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳ ಕ್ರಮವನ್ನು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ ನೌಕರರ ಸಂಘ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ.
ಈ ಕುರಿತು ಸಮಿತಿಯು ಪತ್ರಿಕಾ ಪ್ರಕಟಣೆ ನೀಡಿ, ಕಳೆದ ಹಲವು ತಿಂಗಳಗಳ ನಿರಂತರ ಹೋರಾಟ ಹಾಗೂ ಇತ್ತಿಚೆಗೆ ಜಿ.ಪಂ.ಗೆ ಪಿಕೇಟಿಂಗ್ ಹಮ್ಮಿಕೊಂಡ ಪರಿಣಾಮ ಜಿಲ್ಲಾಢಳಿತ ಪ್ರತಿಭಟನೆಗೆ ಸ್ಪಂಧಿಸಿ ಸರಕಾರದ ಶಾಸನ ಬದ್ಧ ಗ್ರಾ.ಪಂ. ಸಿಬ್ಬಂದಿಗೆ ನೀಡಬೇಕಾದ ಅನುದಾನವನ್ನು ಬ್ಯಾಂಕ್ ವ್ಯವಹಾರವನ್ನು ಇಲ್ಲಿನ ತಾ,ಪಂ. ಇ.ಓ. ಸ್ಥಗಿತಗೊಳಿಸಿದ್ದಾರೆ. ಸರಕಾರ ವೇತನವನ್ನು ಹಂತ ಹಂತವಾಗಿ ಬಿಡುಗಡೆಗೊಳಿಸಿ ಮಹತ್ವ ಆದೇಶ ನೀಡಿ ವೇತನ ಬಿಡುಗಡೆಗೊಳಿಸುತ್ತಲಿದೆ. ಆದರೆ ಕುಷ್ಟಗಿ ತಾ.ಪಂ. ಇ.ಓ. ವೇತನವನ್ನು ನೌಕರರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡದೇ ವಿನಾಕಾರಣ ತೊಂದರೆ ನೀಡುತ್ತಿರುವುದು ವಿಪರ‍್ಯಾಸ. ಈ ಕುರಿತು ನೌಕರರಿಗೆ ಸರಿಯಾದ ಮಾಹಿತಿ ನೀಡದೇ ಸತಾಹಿಸುತ್ತಿರುವುದು ನೌಕರರನ್ನು ಮುಜುಗರಕ್ಕೀಡುಮಾಡಿದೆ. ಕೂಡಲೇ ನೌಕರರ ವೇತನವನ್ನು ಅವರ ಬ್ಯಾಂಕ್ ಖಾತೆಗೆ ವರ್ಗಾಹಿಸಬೇಕು. ಈಗಾಗಲೇ ಜಿಲ್ಲೆಯ ಬಹುತೇಕ ಗ್ರಾ.ಪಂ. ನೌಕರರ ವೇತನ ಜಿಲ್ಲಾಢಳಿತದ ಆದೇಶದಂತೆ ವೇತನ ಓದಗಿಸಲಾಗಿದೆ. ಆದರೇ ಇಲ್ಲಿ ಮಾತ್ರ ವೇತನ ಸ್ಥಗಿತ ಗೊಳಿಸಿರುವುದಕ್ಕೆ ಕಾರಣ ನೀಡಿ ಪೂರ್ಣ ಮಾಹಿತಿ ನೀಡಬೇಕು ಇಲ್ಲವಾದಲ್ಲಿ ಜಿಲ್ಲಾ ಸಮಿತಿ ತಾಲೂಕ ಪಂಚಾಯತಗೆ ಬೀಗ ಜಡಿದು ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಿದೆ ಎಂದು ಸಮಿತಿ ಜಿಲ್ಲಾ ಸಂಚಾಲಕ ಗೌಸ್‌ಸಾಬ ನದಾಫ್ ಹಾಗೂ ಕುಷ್ಟಗಿ ತಾಲೂಕ ಸಮಿತಿ ಅಧ್ಯಕ್ಷ ತಿಮ್ಮಣ್ಣ ಜಂಟಿ   ಎಚ್ಚರಿಸಿದ್ದಾರೆ. 
Please follow and like us:
error

Related posts

Leave a Comment