ಕೊಪ್ಪಳ-29 – ಗಿಣಿಗೇರಿ ಗ್ರಾಮದ ಬೇಂದ್ರೆ ಪಬ್ಲಿಕ್ ಸ್ಕೂಲ್ ನಲ್ಲಿ ಇಂದು ಜರುಗಿದ ಮಕ್ಕಳ ಸಂತೆ ಶಾಲೆಯ ಆವರಣದಲ್ಲಿ ಬೆಳಗ್ಗೆಯೇ ಸಂತೆ ವಾತಾವರಣ ನಿರ್ಮಾಣವಾಗಿತ್ತು. ಮಕ್ಕಳು ನೆಲದಲ್ಲಿ ಕುಳಿತು ವ್ಯಾಪಾರ ಆರಂಭಿಸಿಯೇ ಬಿಟ್ಟರು. ಈರುಳ್ಳಿ, ಬೆಳ್ಳುಳ್ಳಿ, ಮೆಣಸಿನಕಾಯಿ, ಟೊಮೆಟೊ, ಆಲೂಗೆಡ್ಡೆ, ಸೊಪ್ಪು ಎಲ್ಲ ಇದೆ ತಗೊಳ್ಳಿ ಅಮ್ಮಾ, ಗವಿಸಿದ್ಧೇಶ್ವರ ತೆಂಗಿನಕಾಯಿ ಜೊತೆ 20, ಸೌತೆಕಾಯಿ …. ತಗೊಳ್ಳಣ್ಣಾ, ಬಿಸಿ ಬಿಸಿ ಬಜ್ಜಿ, ವಡೆ 10 ರೂಪಾಯಿಗೆ ನಾಲ್ಕು… ಬನ್ನಿ ಸಾರ್… , ಹಣ್ಣುಗಳು, ಸೇರಿದಂತೆ ಹಲವು ವಸ್ತು ಗಳನ್ನು ಮಾರಾಟ ಮಾಡಲಾಯಿತು. ಮಕ್ಕಳು ಸಾರ್ವಜನಿಕರಿಗೆ ಮಾರುತ್ತಿದ್ದ ವಸ್ತುಗಳ ವ್ಯಾಪಾರವು ನೈಜ ವ್ಯಾಪಾರಸ್ಥರನ್ನು ನಾಚಿಸುವಂತಿತ್ತು. ‘ತರಕಾರಿ ಚೆನ್ನಾಗಿದೆ’, ‘ಸೊಪ್ಪು ಚೆನ್ನಾಗಿದೆ’, ‘ವ್ಯಾಪಾರ ಮಾಡಿ’ ಎಂಬ ಮಕ್ಕಳ ಕೂಗು ಗಿಣಿಗೇರಿ ಬೇಂದ್ರೆ ಪಬ್ಲಿಕ್ ಸ್ಕೂಲ್ ಮೈದಾನ ಮುಂದೆ ಸಾಮಾನ್ಯ ವಾಗಿತ್ತು. ಮಕ್ಕಳು, ದೊಡ್ಡವರು, ಶಿಕ್ಷಕರು ಎಲ್ಲರೂ ಮಕ್ಕಳು ಮಾರಾಟ ಮಾಡುತ್ತಿದ್ದ ವಿವಿಧ ಸಾಮಗ್ರಿಗಳನ್ನು ಚೌಕಾಸಿ ಮಾಡಿ ಖರೀದಿಸಿ ಸಂತಸಪಟ್ಟರು. ಶಾಲಾ ಶಿಕ್ಷಕ ವೃಂದ ಸಂತೆಯಲ್ಲಿ ಪಾಲ್ಗೊಂಡು ಮಕ್ಕಳಿಗೆ ಸಹಕರಿಸಿದರು. ಸಾರ್ವಜನಿಕರು ಸಂತೆಯಲ್ಲಿ ಖರೀದಿ ಮಾಡಿ ಮಕ್ಕಳ ವ್ಯವಹಾರ ಕೌಶಲವನ್ನು ಪ್ರಶಂಸಿದರು.
Please follow and like us: