ಮೇ ೧ ರಂದು ಪ್ರಹ್ಲಾದ್ ಜೋಶಿ ಕೊಪ್ಪಳಕ್ಕೆ

 ಕೊಪ್ಪಳ, ೨೯ : ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿಯವರು ಮೇ ೧ ರಂದು ಕೊಪ್ಪಳಕ್ಕೆ ಆಗಮಿಸಲಿದ್ದಾರೆ. ಅವರು ಬಿ.ಜೆ.ಪಿ. ಪ್ರಚಾರ ಪ್ರಯುಕ್ತ ನಡೆಯುವ ಬಿ.ಜೆ.ಪಿ. ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಲಿದ್ದಾರೆ. ಬೆಳಿಗ್ಗೆ ೧೦ ಗಂಟೆಗೆ, ಗದಗ ರಸ್ತೆಯಲ್ಲಿರುವ ಗೌರಾ ಸಿಮೆಂಟ್ಸ್ ಫ್ಯಾಕ್ಟರಿ ಆವರಣದಲ್ಲಿ ಸಭೆ ನಡೆಯಲಿದ್ದು, ರಾಜ್ಯ ಮಟ್ಟದ ಪದಾಧಿಕಾರಿಗಳು ಮತ್ತು ಕೊಪ್ಪಳ ಜಿಲ್ಲಾ ಎಲ್ಲ ಬಿ.ಜೆ.ಪಿ. ಮುಖಂಡರು ಭಾಗವಹಿಸಲಿದ್ದಾರೆ ಎಂದು ಬಿ.ಜೆ.ಪಿ. ವಕ್ತಾರ ಹಾಲೇಶ ಕಂದಾರಿ ತಿಳಿಸಿದ್ದಾರೆ.

Related posts

Leave a Comment