ಮಾಧ್ಯಮಗಳು ಅಭಿವೃದ್ಧಿ ವಿಷಯಕ್ಕೆ ಆದ್ಯತೆ ನೀಡಲಿ – ಡಾ. ನಾಗಾಂಬಿಕಾದೇವಿ

  : ಅತಿತಂಜಿತ ಸುದ್ದಿಗಳಿಗಿಂತ ಜನರಲ್ಲಿ ಜಾಗೃತಿ ಮೂಡಿಸುವಂತ, ಅಭಿವೃದ್ಧಿ ವಿಷಯಗಳತ್ತ ಮಾಧ್ಯಮಗಳು ಆದ್ಯತೆ ನೀಡಬೇಕು ಎಂದು ವಾರ್ತಾ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ನಾಗಾಂಬಿಕಾದೇವಿ ಅವರು ತಿಳಿಸಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ ಹಾಗೂ ಯಂಗ್ ಕಮ್ಯುನಿಕೇಟರ್ಸ್ ಕ್ಲಬ್ ಸಂಯುಕ್ತವಾಗಿ ವಿಶ್ವ ಬಾನುಲಿ ದಿನಾಚರಣೆ ಅಂಗವಾಗಿ ಇಂದು ಬೆಂಗಳೂರಿನಲ್ಲಿ ಏರ್ಪಡಿಸಿದ್ದ  ಬಾನುಲಿ ಕಾರ್ಯಕ್ರಮ ನಿರ್ಮಾಣ ಕಾರ್ಯಾಗಾರವನ್ನು ದೀಪ ಬೆಳಗಿಸುವ ಮೂಲಕ ಉದ್ಫಾಟಿಸಿ ಮಾತನಾಡಿದ ಅವರು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವ ಏಕೈಕ ಮಾದ್ಯಮ ರೇಡಿಯೋ ಮಾಧ್ಯಮ.
ಮಾಧ್ಯಮಗಳ ಮೂಲಕ ಸಮಾಜದ ಹಾಗೂ ದೇಶದ ಅಭಿವೃದ್ಧಿ ಸಾಧ್ಯವಿದೆ. ಇಂದಿನ ಯುವ ಪೀಳಿಗೆ ಅದರಲ್ಲೂ ಮಾಧ್ಯಮ ವಿಷಯಗಳಲ್ಲಿ ಅಭ್ಯಾಸ ಮಾಡುತ್ತಿರುವವರು ಮಾಧ್ಯಮಗಳ ಬಗ್ಗೆ ಅಳವಾದ ಅಭ್ಯಾಸ ಮಾಡುವುದರ ಜೊತೆಗೆ ತಮ್ಮನ್ನು ಸಂಶೋಧನೆಗಳಲ್ಲಿ ತೊಡಗಿಸಿಕೊಂಡು ವಸ್ತುಸ್ಥಿತಿಯನ್ನು ಸಮಾಜಕ್ಕೆ ತಿಳಿಸಬೇಕು ಎಂದರು.
ಅವಕಾಶ ವಂಚಿತ ಜನರಲ್ಲಿ ಅರಿವು ಮೂಡಿಸುವಂತ ಕೆಲಸಗಳನ್ನು ಮಾಧ್ಯಮಗಳು ಮಾಡಬೇಕಾಗಿದೆ ಎಂದ ಅವರು   ವಾರ್ತಾ ಇಲಾಖೆಗೆ ಆದ್ಯತೆ ನೀಡಿ ಅನುದಾನವನ್ನು ಬಿಡುಗಡೆ ಮಾಡುತ್ತಿದ್ದು,  ಇಲಾಖೆ ಕೂಡ ಸಮರ್ಪಕವಾಗಿ ಕೆಲಸಮಾಡುತ್ತಿದೆ ಎಂದ ಡಾ. ನಾಗಾಂಬಿಕಾದೇವಿ ಅವರು ಇಂದಿನ ಕಾರ್ಯಕ್ರಮ ಸಕಾರಾತ್ಮಕ ಕಾರ್ಯಕ್ರಮವಾಗಿದ್ದು ಯುವಜನಾಂಗ ಮಾಧ್ಯಮ ಕ್ಷೇತ್ರಗಳತ್ತ ಹೆಚ್ಚು ಒಲವು ಹೊಂದಬೇಕಾಗಿದೆ ಎಂದು ತಿಳಿಸಿದರು.
ದೃಶ್ಯ ಹಾಗೂ ಮುದ್ರಣ ಮಾಧ್ಯಮ ಪ್ರಬಲವಾಗಿ ಬೆಳೆಯುತ್ತಿದ್ದರೂ ಶ್ರವಣ ಮಾಧ್ಯಮ ತನ್ನ ಆಸ್ತಿತ್ವವನ್ನು ಉಳಿಸಿಕೊಂಡಿದೆ ಎಂದು  ಆಕಾಶವಾಣಿ ನಿವೃತ್ತ ಕಾರ್ಯಕ್ರಮ ನಿರ್ವಾಹಕರಾದ ಶ್ರೀಮತಿ ನಾಗಮಣಿ ಎಸ್. ರಾವ್ ಅವರು ಆಕಾಶವಾಣಿ ಕಾರ್ಯಕ್ರಮಗಳಲ್ಲಿ ಹೊಣೆಗಾರಿಕೆ ಮತ್ತು ಕಳಕಳಿಯನ್ನು ಕಾಣಬಹುದಾಗಿದೆ ಎಂದರು.
ರೇಡಿಯೋ ಪ್ರತಿಯೊಬ್ಬರ ಜೀವನದಲ್ಲಿ ಅತಿ ಹತ್ತಿರವಾದ ಮಾಧ್ಯಮವಾಗಿದೆ ಎಂದು ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ   ರಾಜೇಂದ್ರಸಿಂಗ್ ಬಾಬು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಆಕಾಶವಾಣಿ ಮನುಕುಲದ ಬೃಹತ್ ಪರಿಣಾಮಕಾರಿ ಶಕ್ತಿ ಚಲನಚಿತ್ರ,  ಟಿ.ವಿ. ಮಾಧ್ಯಮಗಳಷ್ಟೇ ಪ್ರಭಾವಶಾಲಿ ಮಾಧ್ಯಮ ಎಂದು ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ಮಾಧ್ಯಮ ಅಕಾಡೆಮಿ ಅಧ್ಯಕ್ಷ   ಪೊನ್ನಪ್ಪ ಅವರು ಸಮುದಾಯ ಬಾನುಲಿ ಕೇಂದ್ರಗಳು ಹೆಚ್ಚುತ್ತಿರುವುದು ಅದರ ಪ್ರಾಮುಖ್ಯತೆಯನ್ನು ನಮಗೆ ತೋರಿಸುತ್ತದೆ ಎಂದರು.
ರೇಡಿಯೋ ಅತಿವೇಗದಲ್ಲಿ ತಲುಪುತ್ತಿರುವ ಏಕೈಕ ಮಾಧ್ಯಮ.  ಅಂದು ನಾಗಲೋಟದಲ್ಲಿ ಮುನ್ನಡೆಯುತ್ತಿದೆ ಎಂದು ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿಯ ಅಧ್ಯಕ್ಷ  ಡಾ. ಬಿ.ಕೆ. ರವಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ   ಎನ್. ಆರ್. ವಿಶುಕುಮಾರ್,  ಎನ್.ಡಿ. ಜಯರಾಂ, ಡಾ. ಕೆ. ವೇಣುಗೋಪಾಲ್, ಶ್ರೀಮತಿ ಗೀತಾಶಂಕರ್, ಮಾಧ್ಯಮ ಅಕಾಡೆಮಿ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Please follow and like us:
error