ಕೊಪ್ಪಳ ಜಿಲ್ಲಾ ಉತ್ಸವ

ಕೊಪ್ಪಳ ಆ.೨೩:  ಜಿಲ್ಲೆಯಾಗಿ ೧೫ ವರ್ಷ ಸಂದ ಸಂದರ್ಭದಲ್ಲಿ ಪ್ರತಿವರ್ಷದಂತೆ ಈ ವರ್ಷವು ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆಯಿಂದ ಸತತ ೭ನೇ ಬಾರಿಗೆ ಮೂರು ದಿನಗಳ ಕಾಲ ಕೊಪ್ಪಳ ಜಿಲ್ಲಾ ಉತ್ಸವವು ನಗರದ ಸಾಹಿತ್ಯ ಭವನದಲ್ಲಿ ಆ.೨೪, ಆ.೨೫ ಹಾಗೂ ಆ.೨೬ ರಂದು ವಿಜೃಂಭಣೆಯಿಂದ ಜರುಗಲಿದೆ.
ಜಿಲ್ಲಾ ಉತ್ಸವದ ಉದ್ಘಾಟನೆ : ಆ.೨೪ ರಂದು ಬೆಳಿಗ್ಗೆ ೧೨.೦೦ ಗಂಟೆಗೆ ಸಿದ್ದಯ್ಯ ಪುರಾಣಿಕರ ಪ್ರತಿಮೆಗೆ ನಗರಸಭೆ ಮಾಜಿ ಅಧ್ಯಕ್ಷ ಸುರೇಶ ದೇಸಾಯಿ ನಗರಸಭೆ ಮಾಜಿ ಉಪಾಧ್ಯಕ್ಷ ಹಾಗೂ ಹಾಲಿ ಸದಸ್ಯ ಅಮ್ಜದ್ ಪಟೇಲ್, ನಗರಸಭೆ ಸದಸ್ಯರಾದ ಮಹೇಂದ್ರ ಚೋಪ್ರಾ, ಶ್ರೀಮತಿ ಬಸಮ್ಮ ರಾಮಣ್ಣ ಹಳ್ಳಿಗುಡಿ, ಶ್ರೀಮತಿ ವಿಜಯಾ ಸಿದ್ದಲಿಂಗಯ್ಯ ಹಿರೇಮಠ, ಅನಿಕೇತ ಅಗಡಿ ಅವರು ಮಾಲಾರ್ಪಣೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಯಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ವಿಜಯಕುಮಾರ ಕವಲೂರು, ಕರವೇ ಅಧ್ಯಕ್ಷ ವಿಜಯಕುಮಾರ, ಸಿಂಧನೂರು ಕರವೇ ಅಧ್ಯಕ್ಷ ಅಜಿತ್ ಓಸ್ತುವಾಲ್, ವೀರಕನ್ನಡಿಗ ಸಂಘದ ಅಧ್ಯಕ್ಷ ಶಿವಾನಂದ ಹೊದ್ಲೂರು ಅವರು ಆಗಮಿಸಲಿದ್ದಾರೆ. ಅಂದು ಸಂಜೆ ೬.೦೦ ಗಂಟೆಗೆ ಜರುಗುವ ಕಾರ್ಯಕ್ರಮದಲ್ಲಿ ಯಲಬುರ್ಗಾ ಸಂಸ್ಥಾನ ಮಠದ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವನ್ನು ವಹಿಸಲಿದ್ದಾರೆ. ಜಿಲ್ಲಾ ಉತ್ಸವ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ರಾಜ್ಯ ಸಣ್ಣ ನೀರಾವರಿ ಸಚಿವ ಶಿವರಾಜ ಎಸ್.ತಂಗಡಗಿ ಅವರು ನೆರವೇರಿಸಲಿದ್ದಾರೆ. ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಅವರು ಜೆ.ಎಚ್.ಪಟೇಲ್‌ರಿಗೆ ಪುಷ್ಪಾಂಜಲಿ ಅರ್ಪಿಸಲಿದ್ದಾರೆ. ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ಜೆ.ಎಚ್.ಪಟೇಲ್‌ರ ಭಾವಚಿತ್ರ ಅನಾವರಣಗೊಳಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಹಾಲಪ್ಪ ಆಚಾರ ಅವರು ಸಿದ್ದಯ್ಯ ಪುರಾಣಿಕರಿಗೆ ಪುಷ್ಪಾಂಜಲಿ ಅರ್ಪಿಸಲಿದ್ದಾರೆ. ಮಾಜಿ ಶಾಸಕರಾದ ಸಂಗಣ್ಣ ಕರಡಿ, ಪರಣ್ಣ ಮುನವಳ್ಳಿ, ವಿಧಾನ ಪರಿಷತ್ ಮಾಜಿ ಸದಸ್ಯ ಮನೋಹರ ಮಸ್ಕಿ ಅವರು ಕೊಪ್ಪಳ ಉತ್ಸವದ ರಾಜಕೀಯ ಸ್ಪೋಟ ವಿಶೇಷ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ. ಕೊಪ್ಪಳ ಜಿಲ್ಲಾಧಿಕಾರಿ ಕೆ.ಪಿ.ಮೋಹನರಾಜ್ ಅವರು ಕೊಪ್ಪಳ ಐಸಿರಿ ಪುಸ್ತಕ ಬಿಡುಗಡೆಗೊಳಿಸಲಿದ್ದಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಮಾರುತಿರಾವ್ ಸುರ್ವೆ ಅವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿ.ಪಂ.ಅಧ್ಯಕ್ಷ ಟಿ.ಜನಾರ್ಧನ ಹುಲಗಿ, ಮಾಜಿ ಸಚಿವ ವೈಜನಾಥ ಪಾಟೀಲ್, ಜಿ.ಪಂ.ಉಪಾಧ್ಯಕ್ಷೆ ಅನ್ನಪೂರ್ಣಮ್ಮ ಕಂದಕೂರಪ್ಪ, ಕಿರ್ಲೋಸ್ಕರ್ ಫೆರಸ್‌ನ ಎಂ.ಡಿ. ಆರ್.ವಿ.ಗುಮಾಸ್ತೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ ಅಣ್ಣಿಗೇರಿ, ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಸಹಾಯಕ ಆಯುಕ್ತ ಪಿ.ಎಸ್.ಮಂಜುನಾಥ, ಬಿ.ಎಸ್.ಆರ್. ಮುಖಂಡರಾದ ಶ್ರೀಮತಿ ಲಲಿತಾರಾಣಿ ಶ್ರೀರಂಗದೇವರಾಯಲು, ನಗರಸಭೆ ಪೌರಾಯುಕ್ತೆ ಶ್ರೀಮತಿ ಬಿ.ಎಂ.ಅಶ್ವಿನಿ, ಬೆಂಗಳೂರು ಪತ್ರಕರ್ತರ ವೇದಿಕೆಯ ಉಪಾಧ್ಯಕ್ಷ ವಿ.ಎಸ್.ಕೃಷ್ಣ, ಬೆಂಗಳೂರು ದಲಿತ ಪತ್ರಕರ್ತರ ಸಂಘದ ಅಧ್ಯಕ್ಷ ವೈ.ಮಂಜುನಾಥ, ಕಸಾಪ ಜಿಲ್ಲಾಧ್ಯಕ್ಷ ವೀರಣ್ಣ ನಿಂಗೋಜಿ, ಕಸಾಪ ಮಾಜಿ ಅಧ್ಯಕ್ಷ ಶೇಖರಗೌಡ ಮಾಲಿ ಪಾಟೀಲ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮಣ್ಣನವರ, ಜಿಲ್ಲಾ ವಾರ್ತಾಧಿಕಾರಿ ತುಕಾರಾಂ ರಾವ್ ಬಿ.ವಿ, ಹಿರಿಯ ಪರಿಸರ ಅಧಿಕಾರಿ ಆನಂದ, ಕನ್ನಡದ ಕೋಟ್ಯಾಧಿಪತಿ ವಿಜೇತ ಗಂಗಾವತಿಯ ಹುಸೇನಭಾಷಾ, ಬೆಂಗಳೂರಿನ ಅಗ್ನಿ ಅಸ್ತ್ರ ಪತ್ರಿಕೆಯ ಸಂಪಾದಕ ಅಂಜನಪ್ಪ ಅವರು ಆಗಮಿಸಲಿದ್ದಾರೆ. ಅಂದು ರಾತ್ರಿ ೯.೩೦ ಕ್ಕೆ ಕಾಮಿಡಿ ಕಿಲಾಡಿಯ ಹಾಸ್ಯಗಾರ ವೈಶಂಪಾಯನ ಅವರಿಂದ ಹಾಸ್ಯೋತ್ಸವ ಕಾರ್ಯಕ್ರಮ ಜರುಗಲಿದೆ. ಅಲ್ಲದೇ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಚುಟುಕು ಸಾಹಿತ್ಯ ಸಮ್ಮೇಳನ : ಆ.೨೫ ರಂದು ಬೆಳಿಗ್ಗೆ ೧೦.೩೦ ಕ್ಕೆ ೫ನೇ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದ ಉದ್ಘಾಟನೆಯನ್ನು ಚುಟುಕು ಕವಿ ದುಂಡಿರಾಜ್ ಅವರು ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹನುಮಂತಪ್ಪ ಅಂಡಗಿ ಚಿಲವಾಡಗಿ ಅವರು ವಹಿಸಲಿದ್ದಾರೆ. ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಸಾಹಿತಿ ಎಂ.ಎಸ್.ಸವದತ್ತಿ ಅವರು ಆಗಮಿಸಲಿದ್ದಾರೆ. ಅಂದು ಸಂಜೆ ೪.೦೦ ಗಂಟೆಗೆ ಜಿಲ್ಲಾ ಉತ್ಸವದ ಉಪನ್ಯಾಸಗಳು ಮತ್ತು ಜಿಲ್ಲಾ ಉತ್ಸವದ ಕವಿ ಮತ್ತು ಚುಟುಕು ಗೋಷ್ಠಿ ಕಾರ್ಯಕ್ರಮ ಜರುಗಲಿದ್ದು, ಮೀಡಿಯಾ ಕ್ಲಬ್ ಅಧ್ಯಕ್ಷ ಸೋಮರೆಡ್ಡಿ ಅಳವಂಡಿ ಅವರು ಹೈದ್ರಾಬಾದ್ ಕರ್ನಾಟಕಕ್ಕೆ ೩೭೧ (ಜೆ) ನೇ ಕಲಂನ ಜಾರಿಯ ಲಾಭಗಳು ಕುರಿತು, ಹಿರಿಯ ಪತ್ರಕರ್ತ ಶರಣಪ್ಪ ಬಾಚಲಾಪುರ ಅವರು ಕೊಪ್ಪಳ ಜಿಲ್ಲೆಯ ಸಾಂಸ್ಕೃತಿಕ ಪರಂಪರೆ ಕುರಿತು, ಸಾಂಸ್ಕೃತಿಕ ಸಂಘಟಕರಾದ ಮಹೇಶ ಬಾಬು ಸುರ್ವೆ ಅವರು ಜಿಲ್ಲೆಯ ನಿರ್ಲಕ್ಷ್ಯಿತ ಪ್ರವಾಸಿ ತಾಣಗಳು ಕುರಿತು ಹಾಗೂ ಬೆಂಗಳೂರಿನ ಉದಯ ಟಿ.ವಿ.ಯ ವಾರ್ತಾವಾಚಕ ರಾಘವೇಂದ್ರ ಗಂಗಾವತಿ ಅವರು ಕೊಪ್ಪಳ ಜಿಲ್ಲೆಯ ಸಮಸ್ಯೆಗಳು ಮತ್ತು ಪರಿಹಾರ ಕುರಿತು ಉಪನ್ಯಾಸ ನೀಡಲಿದ್ದಾರೆ. ಸಂಜೆ ೬.೦೦ ಗಂಟೆಗೆ ಜಿಲ್ಲಾ ಉತ್ಸವದ ಕೋಪಣ ಸಾಂಸ್ಕೃತಿಕೋತ್ಸವ ಕಾರ್ಯಕ್ರಮ ಜರುಗಲಿದ್ದು, ಅಭಿನವ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಯಲಬುರ್ಗಾ ಶಾಸಕ ಹಾಗೂ ಬಸವರಾಜ ರಾಯರೆಡ್ಡಿ ಅವರು ನೆರವೇರಿಸಲಿದ್ದಾರೆ. ಸಾಂಸ್ಕೃತಿಕೋತ್ಸವದ ಉದ್ಘಾಟನೆಯನ್ನು ಸಂಸದ ಶಿವರಾಮೇಗೌಡ ಅವರು ನೆರವೇರಿಸಲಿದ್ದಾರೆ. ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್ ಅವರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಜೆ.ಪಟೇಲರಿಗೆ ಪುಷ್ಪಾಂಜಲಿ ಹಾಗೂ ನಮನವನ್ನು ಮಾಜಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಹಾಗೂ ಕಸಾಪ ರಾಜ್ಯ ಗೌರವ ಕಾರ್ಯದರ್ಶಿ ಸಂಗಮೇಶ ಬಾದವಾಡಗಿ ಅವರು ಸಲ್ಲಿಸಲಿದ್ದಾರೆ. ಕರವೇ ರಾಜ್ಯ ಕಾರ್ಯಾಧ್ಯಕ್ಷ ಶಿವರಾಮೇಗೌಡ ಅವರು ಕೊಪ್ಪಳ ಉತ್ಸವದ ಮಹೇಶ ಪತ್ರಿಕೆ ವಿಶೇಷ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಜಿ.ಎಸ್.ಗೋನಾಳ ಅವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಿರ್ದೇಶಕರಾದ ಶ್ರೀಮತಿ ಸ್ವಾತಿ ಅಂಬರೀಶ್, ಬೆಂಗಳೂರಿನ ಉದಯ ಟಿ.ವಿ.ಯ ವಾರ್ತಾವಾಚಕ ರಾಘವೇಂದ್ರ ಗಂಗಾವತಿ, ಉದಯ ಟಿ.ವಿ. ಕೊಪ್ಪಳ ಜಿಲ್ಲಾ ವರದಿಗಾರ ನಾಗರಾಜ ಸುಣಗಾರ, ಧಾರವಾಡ ನಿರ್ಮಿತಿ ಕೇಂದ್ರದ ವ್ಯವಸ್ಥಾಪಕ ಸಿ.ವಿ.ಚಂದ್ರಶೇಖರ, ಜೆಡಿಎಸ್ ಮುಖಂಡ ಪ್ರದೀಪಗೌಡ ಮಾಲಿ ಪಾಟೀಲ್, ಹಿರಿಯ ಸಾಹಿತಿಗಳಾದ ಅಲ್ಲಮಪ್ರಭು ಬೆಟ್ಟದೂರ, ವಿಠ್ಠಪ್ಪ ಗೋರಂಟ್ಲಿ, ಹೆಚ್.ಎಸ್.ಪಾಟೀಲ್, ಆಹಾರ-ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಅಶೋಕ ಕಲಗಟಗಿ, ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಶಂಭುಲಿಂಗನಗೌಡ ಪಾಟೀಲ್ ಹಲಗೇರಿ, ಹಿರಿಯ ವಕೀಲರಾದ ಸಂಧ್ಯಾ ಮಾದಿನೂರ, ಪ್ರಥಮ ದರ್ಜೆ ಗುತ್ತಿಗೆದಾರರಾದ ಎಸ್.ಆರ್.ನವಲಿ ಹಿರೇಮಠ, ಬಸವರಾಜ ಪುರದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ, ಅಕ್ಕಿ ಗಿರಣಿ ಮಾಲಿಕರ ಸಂಘದ ಖಜಾಂಚಿ ಕೆ.ಕಾಳಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಭು ಕಿಡದಾಳ, ಬಿಜಾಪುರದ ತೆಂಕಣಗಾಳಿ ಪತ್ರಿಕೆಯ ಸಂಪಾದಕ ಎ.ಜಿ.ಮಲ್ಲಿಕಾರ್ಜುನಮಠ, ರಾಯಚೂರು ಜಿಲ್ಲಾ ಉದಯವಾಣಿ ವರದಿಗಾರ ಭೀಮರಾಯ ಹದ್ದಿನಾಳ, ಧಾರವಾಡದ ಸಂಯುಕ್ತ ಕರ್ನಾಟಕ ಪತ್ರಿಕೆಯ ವರದಿಗಾರ ಆರ್.ಬಿ.ಸುಣಗಾರ, ರಾಯಚೂರು ಉದಯ ಟಿ.ವಿ. ವರದಿಗಾರ ಮಹಾಂತೇಶ ಹಿರೇಮಠ, ಹಾಸನದ ಪ್ರಜಾವಾಣಿ ವರದಿಗಾರ ಜಾವಗಲ್ ವಸಂತಕುಮಾರ್, ಬೆಂಗಳೂರಿನ ಅನಂತ ಶಾರದ ಪತ್ರಿಕೆಯ ಸಂಪಾದಕ ಎಂ.ಅನಂತಕುಮಾರ, ಬೆಂಗಳೂರಿನ ಹಠವಾದಿ ಪತ್ರಿಕೆಯ ಸಂಪಾದಕ ಬೋಜರಾಜ ಬಳ್ಳಾರಿ, ಬಿಜೆಪಿ ವಕ್ತಾರ ಸಂಗಮೇಶ ಡಂಬಳ ಅವರು ಆಗಮಿಸಲಿದ್ದಾರೆ. ಅಂದು ರಾತ್ರಿ ೯.೩೦ ಕ್ಕೆ ಜೀವನಸಾಬ ಬಿನ್ನಾಳ್ ಅವರಿಂದ ಹಾಸ್ಯೋತ್ಸವ ಜರುಗಲಿದೆ. ಅಲ್ಲದೇ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ತಿರುಳ್ಗನ್ನಡ ಸಾಹಿತ್ಯ ಸಮ್ಮೇಳನ : ಆ.೨೬ ರಂದು ಬೆಳಿಗ್ಗೆ ೧೧.೦೦ ಕ್ಕೆ ೫ನೇ ತಿರುಳ್ಗನ್ನಡ ಸಾಹಿತ್ಯ ಸಮ್ಮೇಳನ ಜರುಗಲಿದ್ದು, ಗುಲ್ಬರ್ಗಾದ ಶ್ರೀ ಸರಡಗಿ ಮಹಾಸ್ವಾಮಿಗಳು ಅವರು ಸಾನಿಧ್ಯವಹಿಸಲಿದ್ದಾರೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ವಾರ್ತಾ ಸಚಿವರಾದ ಸಂತೋಷ ಲಾಡ್ ಅವರು ನೆರವೇರಿಸಲಿದ್ದಾರೆ. ಹಿರಿಯ ಸಾಹಿತಿ ಡಾ.ಮಹಾಂತೇಶ ಮಲ್ಲನಗೌಡರ ಅವರು ಸಮ್ಮೇಳನಾಧ್ಯಕ್ಷರ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ನಾಗರಿಕರ ವೇದಿಕೆಯ ಅಧ್ಯಕ್ಷ ಎಂ.ಸಾದಿಕ್ ಅಲಿ ಅವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಬಸವರಾಜ ಹಿಟ್ನಾಳ, ಜಿ.ಪಂ.ಸದಸ್ಯ ಈರಪ್ಪ ಕುಡಗುಂಟಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಿ.ಹೆಚ್.ವೀರಣ್ಣ, ಗುಲ್ಬರ್ಗಾ ಕಸಾಪ ಅಧ್ಯಕ್ಷ ಮಹಿಪಾಲ ರೆಡ್ಡಿ ಮುನ್ನೂರು, ಬೊಮ್ಮನಹಳ್ಳಿ ಸುದ್ದಿ ಸಂಪಾದಕ ನಾಗಯ್ಯಸ್ವಾಮಿ ಬೊಮ್ಮನಹಳ್ಳಿ, ಕರವೇ ಜಿಲ್ಲಾಧ್ಯಕ್ಷ ಬಸನಗೌಡ ಪೊಲೀಸ್ ಪಾಟೀಲ್, ವಾಣಿಜ್ಯೋದ್ಯಮಿ ಶ್ರೀನಿವಾಸ ಗುಪ್ತಾ ಅವರು ಆಗಮಿಸಲಿದ್ದಾರೆ. ಅಂದು ಸಂಜೆ ೬.೦೦ ಗಂಟೆಗೆ ಜಿಲ್ಲಾ ಉತ್ಸವದ ಸಮಾರೋಪ ಸಮಾರಂಭ ಜರುಗಲಿದ್ದು, ಈ ತಿರುಳ್ಗನ್ನಡ ಸಾಹಿತ್ಯ ಸಮ್ಮೇಳನದ ಸಾಂಸ್ಕೃತಿಕ ಸೌರಭದ ದಿವ್ಯ ಸಾನಿಧ್ಯವನ್ನು ಗುಲ್ಬರ್ಗಾದ ನಾಲ್ವಾರ್ ಸಂಸ್ಥಾನ ಮಠದ ಶ್ರೀ ತೋಟೆಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಲಿದ್ದಾರೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್ ಸಚಿವ ಎಚ್.ಕೆ.ಪಾಟೀಲ್ ಅವರು ನೆರವೇರಿಸಲಿದ್ದಾರೆ. ಬಳ್ಳಾರಿ ಜೆಡಿಎಸ್ ಮುಖಂಡ ಸೂರ್ಯನಾರಾಯಣರೆಡ್ಡಿ ಅವರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಸರ್ಕಾರಿ ಅಭಿಯೋಜಕ ಬಿ.ಎಸ್.ಪಾಟೀಲ್ ಅವರು ಉತ್ಸವದ ಕುರಿತು ಮಾತನಾಡಲಿದ್ದಾರೆ. ಹಿರಿಯ ಸಾಹಿತಿ ಡಾ.ಮಹಾಂತೇಶ ಮಲ್ಲನಗೌಡರ ಅವರು ಸಮ್ಮೇಳನಾಧ್ಯಕ್ಷರ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಗರಿಕರ ವೇದಿಕೆಯ ಉಪಾಧ್ಯಕ್ಷ ಸಿದ್ದಪ್ಪ ಹಂಚಿನಾಳ ಅವರು ವಹಿಸಲಿದ್ದಾರೆ. 
ಮುಖ್ಯ ಅತಿಥಿಗಳಾಗಿ ಸಮಾಜ ಸೇವಕ ಅಬ್ದುಲ್ ನಹೀಂ ದಾಗದಾರ, ವಿನೂತನ ಶಿಕ್ಷಣ ಸೇವಾ ಸಂಸ್ಥೆಯ ಅಧ್ಯಕ್ಷ ಸಿದ್ದಲಿಂಗಯ್ಯ ಹಿರೇಮಠ, ಸುದಿನ ಪತ್ರಿಕೆಯ ಸಂಪಾದಕ ಹರೀಶ ಹೆಚ್.ಎಸ್., ಜೆಡಿಎಸ್ ಮುಖಂಡ ಅಂದಪ್ಪ ಮರೇಬಾಳ, ಬಳ್ಳಾರಿಯ ವಕೀಲರಾದ ಶ್ರೀಮತಿ ಪ್ರಭಾವತಿ ರಾಮಚಂದ್ರಯ್ಯ, ಸಾಹಿತಿಗಳಾದ ಶ್ರೀಮತಿ ಸ್ನೇಹಲತಾ, ವಿಮಲಾ ಇನಾಂದಾರ್, ಬಿಜೆಪಿ ಮಹಿಳಾ ಮುಖಂಡರಾದ ಶ್ರೀಮತಿ ಹೇಮಾವತಿ ಚಂದ್ರಪ್ಪ, ಕೊಪ್ಪಳ ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ವಿಜಯಕುಮಾರ ಬೀರಾದಾರ, ತೇಜಸ್ವಿನಿ ನ್ಯೂಸ್‌ನ ಸಂಪಾದಕರಾದ ಜಿ.ನಂದೀಶ್, ಸಯ್ಯದ್ ಚಾರಿಟೇಬಲ್ ಟ್ರಸ್ಟನ್ ಅಧ್ಯಕ್ಷ  ಕೆ.ಎಂ.ಸಯ್ಯದ್, ಜನಪದ ಲೋಕದ ಜಿಲ್ಲಾಧ್ಯಕ್ಷ ಬಸವರಾಜ ಆಕಳವಾಡಿ, ಬಿಸಿಎಂ ಅಧಿಕಾರಿ ಬಿ.ಕಲ್ಲೇಶ, ಓಲೇಕಾರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪಾಂಡುರಂಗ ಓಲೇಕಾರ, ಹಿರಿಯ ವೈದ್ಯರಾದ ಡಾ|| ಕೆ.ಜಿ.ಕುಲಕರ್ಣಿ, ಬಿಇಓ ಬಸವರಾಜಯ್ಯ, ವೈದ್ಯರಾದ ಆರ್.ಎ.ನೆರೆಗಲ್, ಆರ್‌ಟಿಓ ಇಲಾಖೆಯ ಪೊಲೀಸ್ ಪಾಟೀಲ್, ಅಬಕಾರಿ ಇಲಾಖೆಯ ಇನ್ಸಪೆಕ್ಟರ್ ಪಾಟೀಲ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಶ್ರೀಕಂಠಯ್ಯ ಹಿರೇಮಠ, ಬೆಳಗಾವಿ ಪತ್ರಕರ್ತೆ ಶ್ರೀಮತಿ ಪ್ರೇಮಾ ಪ್ರೇಮಾ ಸಾಲಿಮಠ, ಯುವ ಕಾಂಗ್ರೆಸ್ ಮುಖಂಡ ಬಗಾವಾನ್ ಫಹೀಮ್ ಬಾಷಾ, ನಿರ್ಮಿತಿ ಕೇಂದ್ರದ ವ್ಯವಸ್ಥಾಪಕ ಶಶಿಧರ್, ಗುತ್ತಿಗೆದಾರ ಸಂಘದ ಅಧ್ಯಕ್ಷ ಶಂಕರಪ್ಪ ದೊಡ್ಡಮನಿ ಅವರು ಆಗಮಿಸಲಿದ್ದಾರೆ. ಅಂದು ರಾತ್ರಿ ೯.೩೦ ಕ್ಕೆ ಹೊಸಪೇಟೆಯ ಬಸವರಾಜ ಬೆಣ್ಣಿ ಅವರಿಂದ ಹಾಸ್ಯೋತ್ಸವ ಜರುಗಲಿದೆ. ಅಲ್ಲದೇ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುವುದು. ಆ.೨೪ ರಂದು ಇಳಕಲ್‌ನ ಬಸವರಾಜ ಗವಿಮಠ ಅವರಿಂದ ದೃಶ್ಯ ಮಾಧ್ಯಮದಲ್ಲಿ ಚಿತ್ರಕಲಾ ರಚನೆ ಹಾಗೂ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಆ.೨೫ ರಂದು ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಆ.೨೬ ರಂದು ಸಾಮಾನ್ಯ ಜ್ಞಾನ ಪರೀಕ್ಷಾ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಜರುಗಲಿದೆ. ಈ ಕಾರ್ಯಕ್ರಮಕ್ಕೆ ಸರ್ವರೂ ಆಗಮಿಸಿ ಯಶಸ್ವಿಗೊಳಿಸಲು ಉತ್ಸವ ಸಂಚಾಲಕರಾದ ಮಹೇಶಬಾಬು ಸುರ್ವೆ  ವಿನಂತಿಸಿದ್ದಾರೆ.
Please follow and like us:
error

Related posts

Leave a Comment