ಅತಿ ವೃಷ್ಟಿ ಪೀಡಿತರಿಗೆ ಹೆಚ್ ಆರ್ ಎಸ್ ನಿರ್ಮಿಸಿದ ಮನೆಗಳ ಹಸ್ತಾಂತರ

ಕೊಪ್ಪಳ : ಅತಿವೃಷ್ಟಿಯಿಂದ ಮನೆಕಳೆದುಕೊಂಡು ನಿರ್ವಸಿತರಾದ ನಾಗರಿಕರಿಗೆ ಹ್ಯುಮ್ಯಾನಿಟಿರಿಯನ್ ರಿಲೀಫ್ ಸೊಸೈಟಿ( ಹೆಚ್ ಆರ್ಎಸ್) ಕೊಪ್ಪಳದಲ್ಲಿ ನಿರ್ಮಿಸಿದ ನಾಲ್ಕುಮನೆಗಳನ್ನು ಹಸ್ತಾಂತರಿಸಲಾಯಿತು.
ನಗರದ ಹಟಗಾರ ಪೇಟೆಯಲ್ಲಿ 4 ಮನೆಗಳನ್ನು ಹಾಗೂ ದುರಸ್ತಿಗೊಳಿಸಿದ 7 ಮನೆಗಳನ್ನು ಅವುಗಳ ಮಾಲಿಕರಿಗೆ ಹೆಚ್ ಆರ್ ಎಸ್ ಕರ್ನಾಟಕ, ಗೋವಾ ಪ್ರಾಂತ್ಯದ ಅಧ್ಯಕ್ಷರಾದ ಅಬ್ದುಲ್ ಜಾನಿಸಾಬ ಹಸ್ತಾಂತರಿಸಿದರು.
ದಾನಿಗಳಿಂದ ಸಂಗ್ರಹಿಸಿದ ಹಣದಿಂದ ಉತ್ತರ ಕರ್ನಾಟಕದ 11 ಜಿಲ್ಲೆಗಳಲ್ಲಿ ಕೈಗೊಂಡ ಆಹಾರ ಪೊಟ್ಟಣ ವಿತರಣೆ,ಹಾಸಿಗೆ, ಹೊದಿಕೆ, ಪಾತ್ರೆಗಳ ವಿತರಣೆ, ಮನೆ ನಿರ್ಮಾಣ, ದುರಸ್ತಿ ಕಾರ್ಯಕ್ರಮಗಳಲ್ಲಿ ವಿಧವೆಯರಿಗೆ, ಅನಾಥರಿಗೆ ಮೊದಲ ಪ್ರಾಶಸ್ತ ನೀಡಲಾಗಿದೆ ಎಂದರು.
ಕಳೆದ 65 ವರ್ಷಗಳಿಂ ದಕಾರ್ಯನಿರ್ವಹಿಸುತ್ತಿರುವ ಹೆಚ್ ಆರ್ ಎಸ್ ಪ್ರಕೃತಿ ವಿಕೋಪದಂತ ದುರ್ಘಟನೆಗಳಲ್ಲಿ ಸಂತ್ರಸ್ತ ಜನತೆಗೆ ಜಾತಿ ಮತ ಭೇದವಿಲ್ಲದೆ ಸಹಾಯ ಮಾಡುತ್ತಿದೆ ಜೊತೆಗೆ ಮಾನವ ನಿರ್ಮಿತ ಗಲಭೆಗಳಲ್ಲಿ ಆಸ್ತಿ ಪಾಸ್ತಿ ಹಾನಿಗೊಂಡ ನಾಗರಿಕರಿಗೆ ಪರಿಹಾರ ಒದಗಿಸಲು ಕೆಲಸ ಮಾಡುತ್ತಿದೆ ಎಂದು ಹೆಚ್ ಆರ್ ಎಸ್ ತಿಳಿಸಿದೆ.
ಅತಿವೃಷ್ಟಿ , ನೆರೆಹಾವಳಿ ಸಂತ್ರಸ್ತ ಪ್ರದೇಶಗಳ 13620 ಮನೆಗಳಿಗೆ ಭೇಟಿ ನೀಡಿ ಸರ್ವೆ ನಡೆಸಿ 18 ಸಾವಿರ ಜನರಿಗೆ ಬಟ್ಟೆ, 3 ಸಾವಿ ಹೊದಿಕೆ, 6 ಸಾವಿರ ಆಹಾರ ಪೊಟ್ಟಣ ವಿತರಣೆ ಮಾಡಿದ್ದು, ಸಂತಸ್ತ ಪ್ರದೇಶಗಳಲ್ಲಿ 27 ಹೆಲ್ತಕ್ಯಾಂಪ್ ನಡೆಸಲಾಗಿದೆ. 12 ಹೊಲಿಗೆ ತರಬೇತಿ ಶಿಬಿರ ನಡೆಸಲಾಗಿದೆ ಎಂದು ಅಬ್ದುಲ್ ಜಾನಿಸಾಬ ಹೇಳಿದರು.
ಹೆಚ್ ಆರ್ ಎಸ್ ಕೈಗೊಳ್ಳಲಿರುವ ಪರಿಹಾಋ ಕಾರ್ಯಗಳಿಗೆ ಅಂದಾಜು 3 ಕೊಟಿ ವೆಚ್ಚವಾಗಲಿದ್ದು ಈವರೆಗೆ 43 ಲಕ್ಷ ಹಣವನ್ನು ದಾನಿಗಳಿಂದ ಸಂಗ್ರಹಹಿಸಿ ಪರಿಹಾರ ಕಾರ್ಯ ಕೈಗೊಳ್ಳಲಾಗಿದೆ. ಇನ್ನುಳಿದ ಪರಿಹಾರ ಕೆಲಸಗಳಿಗೆ ದಾನಿಗಳು ಸಹಾಯ ಮಾಡಲು ಹೆಚ್ ಆರ್ ಎಸ್ ಕೋರಿದೆ

Leave a Reply