ಸ್ವಾಮಿ ವಿವೇಕಾನಂದ ಶಾಲೆಯ ಪಾಲಕರ ಸಭೆ ದಿ. ೦೭-೦೭-೧೩ ರಂದು


ಕೊಪ್ಪಳ, ೦೩ : ನಗರದ ಲಯನ್ಸ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಪಾಲಕರ ಸಭೆಯನ್ನು ಇದೇ ದಿನಾಂಕ : ೦೭-೦೭-೧೩, ರವಿವಾರದಂದು ಮುಂಜಾನೆ ೯.೩೦ ಕ್ಕೆ ಹೊಸಪೇಟೆ ರಸ್ತೆಯಲ್ಲಿರುವ ಶ್ರೀ ಶಿವಶಾಂತ ಮಂಗಲ ಭವನದಲ್ಲಿ ಕರೆಯಲಾಗಿದೆ. ಪಾಲಕರು, ಶಿಕ್ಷಕರು ಮತ್ತು ಲಯನ್ಸ್ ಶಾಲಾ ಆಡಳಿತ ಮಂಡಳಿಯ ಸದಸ್ಯರು ಪಾಲ್ಗೊಳ್ಳುವ ಈ ಜಂಟಿ ಸಭೆಯಲ್ಲಿ, ಶಾಲೆಯ ಎಲ್ಲ ಪಾಲಕರು ಆಗಮಿಸಿ ಪ್ರಚಲಿತ ವಿದ್ಯಮಾನಗಳ ಕುರಿತಾದ ಚರ್ಚೆಯಲ್ಲಿ ಭಾಗವಹಿಸಬೇಕೆಂದು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಲಯನ್ ವಿರೂಪಾಕ್ಷಪ್ಪ ಅಗಡಿ ತಿಳಿಸಿದ್ದಾರೆ.
Please follow and like us:
error