ಕ್ಷೇತ್ರದ ಅಭಿವೃದ್ಧಿಗೆ ಬಿಎಸ್‌ಆರ್ ಕಾಂಗ್ರೆಸ್ ಬೆಂಬಲಿಸಿ- ನೆಕ್ಕಂಟಿ

ಕೊಪ್ಪಳ, ಏ. ೦೯ : ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬಿ. ಶ್ರೀರಾಮುಲು ನೇತೃತ್ವದ ಬಿಎಸ್‌ಆರ್ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಕೊಪ್ಪಳ ವಿಧಾನ ಸಭೆ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ನೆಕ್ಕಂಟಿ ನಾಗರಾಜ ಹೇಳಿದರು.
    ಅವರು ಮಂಗಳವಾರದಂದು ನಗರದ ೨೦ನೇ ವಾರ್ಡ್‌ನಲ್ಲಿ ಪ್ರಚಾರ ಕೈಗೊಂಡು ರಾಷ್ಟ್ರೀಯ ಪಕ್ಷಗಳಿಂದ ಆಗದ ಕೆಲಸವನ್ನು ಇಂದು ಪ್ರಾದೇಶಿಕ ಪಕ್ಷಗಳು ಯಶಸ್ವಿ ಆಡಳಿತ ನೀಡುತ್ತಾ ಜನಪ್ರಿಯತೆ ಪಡೆದಿವೆ ಹೀಗಾಗಿ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷ ಬಿ.ಶ್ರೀರಾಮುಲು ಅವರು ಕೈಯನ್ನು ಬಲಪಡಿಸುವಂತೆ ಮನವಿ ಮಾಡಿದರು.
    ಈ ಸಂದರ್ಭದಲ್ಲಿ ಮೌಲಾಹುಸೇಸ್ ಮುದಗಲ್ಲ, ಬಾಬುಲ್ ಖಾಜಿ, ಅಮ್ಜದ ಮುಲ್ಲಾ, ಧ್ರುವಸಾ ಕಲಬುರ್ಗಿ, ಷೆಕ್ಷಾವಲಿ, ಹೈದರಲಿ ಖಾದ್ರಿ, ಮರ್ದಾನ, ರಫಿ, ಸರವರ್, ಆಸೀಫ್, ಕಾಶಿಮಅಲಿ, ಜಿಲಾನಸಾಬ, ಸೇರಿದಂತೆ ವಾರ್ಡಿನ ಅನೇಕರು ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ನಗರ ಘಟಕದ ಅಧ್ಯಕ್ಷ ಖಾಜಾಬಾಷಾಲಾಠಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ತೊರೆದು ಬಿಎಸ್‌ಆರ್ ಕಾಂಗ್ರೆಸ್ ಪಕ್ಷಕ್ಕೆ ಸೇರಿದರು.
    ಈ ಸಂದರ್ಭದಲ್ಲಿ ತಾಲೂಕಾ ಅಧ್ಯಕ್ಷ ಪ್ರಭುಗೌಡ ಪಾಟೀಲ್, ಮುಖಂಡರಾದ ಬಿ.ಶ್ರೀನಿವಾಸಲು, ರಾಮಲಿಂಗು. ಪಣಿರಾಜ, ಮಹ್ಮದ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
Please follow and like us:
error

Related posts

Leave a Comment