ಪ್ರಾಯೋಗಿಕ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಜಾರಿ

 ಪ್ರಸಕ್ತ ಮುಂಗಾರು ಹಂಗಾಮಿಗಾಗಿ ಕೇಂದ್ರ ಸರ್ಕಾರವು ವಿವಿಧ ಕೃಷಿ ವಿಮಾ ಏಜೆನ್ಸಿಗಳ ಮೂಲಕ ಪ್ರಾಯೋಗಿಕವಾಗಿ ಜಿಲ್ಲೆಯಲ್ಲಿ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ಜಾರಿಗೊಳಿಸಿದೆ.
  ಹವಾಮಾನದ ವೈಪರಿತ್ಯಗಳಿಂದಾಗುವ ತೊಂದರೆಗಳನ್ನು ಹೋಗಲಾಡಿಸುವುದು, ಈ ಯೋಜನೆಯ ಉದ್ದೇಶವಾಗಿದ್ದು, ರಾಜ್ಯದ ೧೯ ಜಿಲ್ಲೆಗಳ ೩೩೩ ಹೋಬಗಳಿಗಳಲ್ಲಿ ಯೋಜನೆ ಜಾರಿಗೆ ಬಂದಿದೆ.  ಕೊಪ್ಪಳ ಜಿಲ್ಲೆಯಲ್ಲಿಯೂ ಆಯ್ಕೆಯಾದ ಹೋಬಗಳಿಗಳಲ್ಲಿ ಪ್ರಾಯೋಗಿಕ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಜಾರಿಯಾಗಿದ್ದು, ಬೆಳೆ ಸಾಲ ಪಡೆದ ರೈತರಿಗೆ ಇದು ಕಡ್ಡಾಯ.  ಬೆಳೆ ಸಾಲ ಪಡೆಯದ ರೈತರು ಸ್ವ-ಇಚ್ಛೆ ಆಧಾರದ ಮೇಲೆ ಭಾಗವಹಿಸಬಹುದಾಗಿದೆ.  ಈ ಯೋಜನೆಯಲ್ಲಿ ಪಾಲ್ಗೊಳ್ಳಲು ಬೆಳೆ ಸಾಲ ಪಡೆಯುವ ರೈತರಿಗೆ ಜುಲೈ ೩೧, ಬೆಳೆ ಸಾಲ ಪಡೆಯದ ರೈತರಿಗೆ ಜೂ. ೩೦ ಕೊನೆಯ ದಿನಾಂಕವಾಗಿದೆ.  ಕೊಪ್ಪಳ ಜಿಲ್ಲೆಗೆ ಅಗ್ರಿಕಲ್ಚರ್ ಇನ್ಸೂರೆನ್ಸ್ ಕಂಪನಿ ಆಫ್ ಇಂಡಿಯಾ ಲಿ. ವಿಮಾ ಸಂಸ್ಥೆ, ಹೆಚ್‌ಡಿಎಫ್‌ಸಿ ಎರ್ಗೊ ಜನರಲ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್, ಇಫ್ಕೋ ಟೊಕಿಯೋ ಜನರಲ್ ಇನ್ಸೂರೆನ್ಸ್ ಕಂಪನಿ ಲಿ. ಸಂಸ್ಥೆಗಳು ಈ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿವೆ.  ಬೆಳೆಗಳ ವಿಮಾ ಮೊತ್ತ, ವಿಮಾ ಕಂತಿನ ದರ,  ಹೋಬಳಿಗಳಲ್ಲಿ ಅಧಿಸೂಚಿತ ಬೆಳೆಗಳ ವಿವರವನ್ನು ಆಯಾ ಸಹಕಾರಿ ಬ್ಯಾಂಕ್ ಅಥವಾ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಇಲ್ಲವೆ ಸಮೀಪಕ ರೈತ ಸಂಪರ್ಕ ಕೇಂದ್ರ, ಅಥವಾ ಅಗ್ರಿಕಲ್ಚರ್ ಇನ್ಸೂರೆನ್ಸ್ ಕಂಪನಿ ಆಫ್ ಇಂಡಿಯಾ ಲಿ., ಬೆಂಗಳೂರು ದೂರವಾಣಿ ಸಂ: ೦೮೦- ೨೨೧೧೫೩೯೦ ಕ್ಕೆ ಸಂಪರ್ಕಿಸಬಹುದಾಗಿದೆ.

Related posts

Leave a Comment