fbpx

ಅನೇಕ ದೇಶಗಳ ಕಲೆಗಳ ಉಗಮಕ್ಕೆ ಭಾರತಿಯ ಕಲೆಗಳೇ ಪ್ರೇರಕವಾಗಿವೆ;-ಶರಣಪ್ಪ ಉಮಚಗಿ

 ವೈವಿಧ್ಯಮಯ ಕಲಾ ಪ್ರಾಕಾರಗಳನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ಭಾರತ ದೇಶಕ್ಕೆ ಸಲ್ಲುತ್ತದೆ.ಜೊತೆಗೆ ಅನೇಕ ದೇಶಗಳ ಕಲೆಗಳ ಉಗಮಕ್ಕೆ ಭಾರತಿಯ ಕಲೆಗಳೇ ಪ್ರೇರಕವಾಗಿವೆ ಎಂದು ಕೊಪ್ಪಳ ಗವಿಸಿದ್ದೇಶ್ವರ ಕಾಲೇಜಿನ ಉಪನ್ಯಾಸಕರಾದ ಶರಣಪ್ಪ ಉಮಚಗಿ ಹೇಳಿದರು.
   ಇವರು ಯಲಬುರ್ಗಾ ತಾಲ್ಲೂಕಿನ ಮಂಗಳೂರ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಭಾರತ ಸರಕಾರ ನೆಹರು ಯುವ ಕೇಂದ್ರ,ಕೊಪ್ಪಳ ಮಂಗಳೂರಿನ ವಿಶ್ವ ಕ್ರಾಂತಿ ಯುವಕ ಸಂಘ ಮತ್ತು ಕದ್ರಳ್ಳಿ ಗ್ರಾಮದ ವಂದೇಮಾತರಂ ಯುವಕ ಸಂಘ(ರಿ) ಇ

ವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕೊಪ್ಪಳ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಮೇಳದಲ್ಲಿ ಪಾಲ್ಗೊಂಡು ಮಾತನಾಡಿದರು.

ಜನಪದ ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ವಿಶೇಷ ಕೊಡುಗೆ ನೀಡುತ್ತಿರುವ ದೇಶಿಯ ಜನಪದ ಕಲಾವಿದರಿಗೆ ಪ್ರೋತ್ಸಾಹದ ಕೊರತೆಯಿಂದ ಇತ್ತೀಚೆಗೆ ಕಲೆಯನ್ನು ಅಭಿವೃದ್ದಿಗೊಳಿಸಲು ಅವರಿಗೊ ಸಾಧ್ಯವಾಗುತ್ತಿಲ್ಲ. ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿ ದೇಶಿ ಸಂಸ್ಕೃತಿ ನಶಿಸುತ್ತಿದೆ.ಚಲನಚಿತ್ರ ಸಾಹಿತ್ಯವು ಮೂಲ ಸಾಹಿತ್ಯಕ್ಕೆ ಪೆಟ್ಟು ಕೊಡುತಿದೆ ಮತ್ತು ಯುವ ಜನಾಂಗದ ವ್ಯಕ್ತಿತ್ವ ವಿಕಾಸಕ್ಕೆ ಮಾರಕವಾಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. 
     ಕಾರ‍್ಯಕ್ರಮದ ಅಧ್ಯಕ್ಷತೆವಹಿಸಿದ ಕಾಲೇಜಿನ ಪ್ರಾಚಾರ್ಯರಾದ ಪಿ.ಕೆ.ಚತ್ತರಕಿ ಮಾತನಾಡಿ ಗ್ರಾಮೀಣ ಸೊಗಡಿನಲ್ಲಿ ಇರುವ ಕಲಾ ವೆವಿಧ್ಯತೆ ಇನ್ನಾವ ಪ್ರಕಾರದಲ್ಲಿ ಕಾಣಸಿಗದು. ಬದಲಾಗುತ್ತಿರುವ ಸಮಾಜದಲ್ಲಿ ಹೆಚ್ಚಾಗಿ ಆಧುನಿಕತೆಗೆ ಮಾರು ಹೋಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮೀಣರಿಂದ ಈ ಜನಪದ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವುದು ಆಂತರಿಕ ಸಂಗತಿ. ಯುವ ಸಂಘಗಳು ಜಾನಪದ ಕಲಾ ಸಂಘಗಳು ಹೆಚ್ಚೆನ ರೀತಿಯಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡಬೇಕು ಎಂದರು. 
ಗ್ರಾಮ ಪಂಚಾಯತ ಅಧ್ಯಕ್ಷರಾದ ಶಾಂತಾ ಬಸವರಾಜ ಕರ್ಯಕ್ರಮಕ್ಕೆ ಚಾಲನೆ ನೀಡಿದರು ಕಾರ‍್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ವಿಶ್ವ ಕ್ರಾಂತಿ ಯುವಕ ಸಂಘದ ಮಂಗಳೇಶ ಯತ್ನಿಟ್ಟಿ ಉಪಪ್ರಾಚಾರ್ಯರಾದ ಎ.ಎಚ್ ಕುಮಾರ ಉಪನ್ಯಾಸಕರಾದ ಚ್ಚಿಕರಡ್ಡಿ ಯುವ ಸಾಂಸ್ಕೃತಿಕ ಸಂಘದ ಆನಂದ ಹಳ್ಳಿಗುಡ್ಡಿ  ವಂದೇಮಾತರಂ ಸೇವಾ ಸಂಘದಸಂಸ್ಥಾಪನಾಧ್ಯಕ್ಷರಾದ ರಾಕೇಶ ಕಾಂಬ್ಳೇಕರ. ಕಿನ್ನಾಳ ಗ್ರಾಮದ ಯುವ ಸಂಘದ ರಘುನಾಥ ಉಪಸ್ಥಿತರಿದ್ದರು. 
 ಕದ್ರಳ್ಳಿ ಗ್ರಾಮದ ವಂದೇಮಾತರಂ ಯುವಕ ಸಂಘದ ವಿಜಯ ರಜಪುತ ನಿರೂಪಿಸಿದರು. ಸ್ವಾಗತವನ್ನು ಕುಷ್ಟಗಿ ತಾಲೂಕಿನ ರಾಷ್ಟ್ರೀಯ ಯುವ ಪಡೆಯಾದ ಶಂಕ್ರಮ ತಾವರಗೆರಾ ಮಾಡಿದರು. ಪ್ರಾಸ್ತಾಪಿಕವಾಗಿ ಯಲಬುರ್ಗಾ ತಾಲೂಕಿನ ರಾಷ್ಟ್ರೀಯ ಯುವ ಪಡೆಯಾದ ಭೀಮಶಿ ಕುರಿ ಮಾಡಿದರು. ಕೊಪ್ಪಳ ತಾಲೂಕಿನ ರಾಷ್ಟ್ರೀಯ ಯುವ ಪಡೆಯಾದ ರೇಖಾ ಪಾತ್ರದ ವಂದಿಸಿದರು. ಎಂದು ಸಂಘದ ಉಪಾಧ್ಯಕ್ಷರಾದ ಅಮರೇಶ ತಿಳಿಸಿದ್ದಾರೆ.
Please follow and like us:
error

Leave a Reply

error: Content is protected !!