fbpx

ಸ್ವ ಸಹಾಯ ಸಂಘಗಳ ಉದ್ಘಾಟನಾ ಸಮಾರಂಭ

  ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ೨೨ ಜಿಲ್ಲೆಗಳಲ್ಲಿ ೨ಲಕ್ಷ ಸ್ವ ಸಹಾಯ ಸಂಘಗಳನ್ನು ರಚಿಸಿದ್ದು ವಾರ್ಷಿಕ ೨೫೦೦ಕೋಟಿ ರೂಪಾಯಿ ವ್ಯವಹಾರವನ್ನು ನಡೆಸುತ್ತಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ (ರಿ)ಯ ಮಾನ್ಯ ನಿರ್ದೇಶಕರಾದ ಶ್ರೀ ಶಿವರಾಯ ಪ್ರಭು ಅವರು ಹೇಳಿದರು, ಅವರು ಡಿ.೨೩ರಂದು ಭಾಗ್ಯನಗರ ವಲಯದ ಕಿನ್ನಾಳ ಗ್ರಾಮದಲ್ಲಿ ಶ್ರೀಶೈಲ ಚಿತ್ರಮಂದಿರದಲ್ಲಿ ಗ್ರಾಮಾಭಿವೃದ್ದಿ ಯೋಜನೆಯ ೯೩ ಸ್ವ-ಸಹಾಯ ಸಂಘಗಳ ೫ ಒಕ್ಕೂಟವನ್ನು  ಉದ್ಘಾಟಿಸಿ ಮಾತನಾಡಿದರು ಮುಖ್ಯ ಅಥಿತಿಯಾಗಿ ಭಾಗವಹಿಸಿದ್ದ ಗಂಗಾವತಿ ತಾಲೂಕಿನ ಶಾಸಕರಾದ ಇಕ್ಬಾಲ್ ಅನ್ಸಾರಿಯ

ವರು ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಸಾಮಾಜಿಕ ಕ್ರಾಂತಿಯನ್ನು ನಡೆಸಿ  ಜನರಲ್ಲಿ ಹೊಸ ಹುಮ್ಮಸ್ಸನ್ನು ಮೂಡಿಸಿದೆ ಎಲ್ಲರೂ ಈ ಯೋಜನೆಯ ಸೌಲಭಗಳನ್ನು ಬಳಸಿಕೊಳ್ಳಿ ಎಂದು ತಿಳಿಸಿದರು. ಅಧ್ಯಕ್ಷೆತೆ ವಹಿಸಿದ್ದ ತಾ.ಪಂ.ಸದಸ್ಯರಾದ ರಮೇಶ ಚೌಡಕಿಯವರು ಗ್ರಾಮಾಭಿವೃದ್ದಿ ಯೋಜನೆಯು ರಾಜ್ಯಾದ್ಯಂತ ವಿಸ್ತರಣೆಯಾಗುವ ಅವಶ್ಯಕತೆಯಿದೆ ಎಂದು ಹೇಳಿದರು, ಇನ್ನೊರ್ವ ಮುಖ್ಯ ಅತಿಥಿಯಾಗಿ ಶ್ರೀಮತಿ ಸಂಧ್ಯಾ ಮಾದಿನೂರು ಕ.ರಾ.ವ.ಪ.ಅ.ಸದಸ್ಯರು ಬೆಂಗಳೂರು ಅವರು ಧರ್ಮಸ್ಥಳ ಯೋಜನೆಯ ಸೌಲಭ್ಯಗಳನ್ನು ಪಡೆದುಕೊಂಡು ಸಬಲೆಯರಾಗಿದ್ದಾರೆ ಎಂದು ತಿಳಿಸಿದರು, ವೇದಿಕೆಯಲ್ಲಿ ತಾಲೂಕ ಯೋಜನಾಧಿಕಾರಿಗಳಾದ ಶ್ರೀ ಧರಣಪ್ಪ ಮುಲ್ಯಾ, ಹಾಗೂ ಹನುಮಂತಪ್ಪ ಚುಕ್ಕನಕಲ್ಲ, ಶ್ರೀಮತಿ ಗೌರಮ್ಮ ಚಂಡೂರು ಉಪಸ್ಥಿತರಿದ್ದರು ಭಾಗ್ಯನಗರ ವಲಯದ ಮೇಲ್ವಿಚಾರಕಾರಾದ ಗಂಗಮ್ಮ ಹೆಚ್ ಕಾರ್ಯಕ್ರಮ ನಿರ್ವಹಿಸಿದರು. ಎಂದು ಪ್ರಕಟಣೆಗೆ ಗಂಗಮ್ಮ ಹೆಚ್ (೮೯೭೦೬೮೪೩೩೪) ತಿಳಿಸಿದ್ದಾರೆ.

Please follow and like us:
error

Leave a Reply

error: Content is protected !!