You are here
Home > Koppal News > ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮ ಮಾನ್ಯತೆಗಾಗಿ ಜಾಗೃತಿ ಸಭೆ

ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮ ಮಾನ್ಯತೆಗಾಗಿ ಜಾಗೃತಿ ಸಭೆ

 
 ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಸಂವಿಧಾನಾತ್ಮಕ ಮಾನ್ಯತೆಯನ್ನು ಪಡೆಯುವ ಸಲುವಾಗಿ ಕಾನೂನು ಬದ್ಧವಾದ ಆಂದೋಲನವನ್ನು ರೂಪಿಸಲು ಕೊಪ್ಪಳ ಜಿಲ್ಲಾ ಲಿಂಗಾಯತ ಬಂಧುಗಳ ಜನಜಾಗೃತಿ ಸಭೆಯನ್ನು ದಿ. ೬-೧೨-೨೦೧೩ರ ಶುಕ್ರವಾರ ಸಾಯಂಕಾಲ ೪.೦೦ ಗಂಟೆಗೆ ಕೊಪ್ಪಳದ ಕೋಟೆ ರಸ್ತೆಯಲ್ಲಿರುವ ಮಹೇಶ್ವರ ಕಲ್ಯಾಣ ಮಂಟಪದಲ್ಲಿ ಕರೆಯಲಾಗಿದೆ.
 ಈ ಸಭೆಯಲ್ಲಿ ಕರ್ನಾಟಕ ರಾಜ್ಯ ಉಚ್ಛ (ಹೈ-ಕೋರ್ಟ) ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶರಾದ   ಅರಳಿ ನಾಗರಾಜರವರು ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆಯನ್ನು ಪಡೆಯಲು ಕೈಕೊಳ್ಳಬೇಕಾದ ಕಾನೂನುಕ್ರಮಗಳ ಬಗ್ಗೆ ಮಾತನಾಡಲಿದ್ದಾರೆ.
 ಕಾರಣ ಕೊಪ್ಪಳ ಜಿಲ್ಲೆಯ ಎಲ್ಲ ಲಿಂಗಾಯತ (ಒಳಪಂಗಡ ಬೇಧಭಾವವಿಲ್ಲದೆ) ಬಂಧುಗಳು ಭಾಗವಹಿಸಬೇಕೆಂದು ರಾಜೇಶ ಸಸಿಮಠ- ೯೭೪೨೧೯೯೦೫೮ ಹಾಗೂ ಶಿವಕುಮಾರ ಕುಕನೂರ-೯೮೮೬೯೮೭೦೩೩   ತಿಳಿಸಿದ್ದಾರೆ.

Leave a Reply

Top