ದಲಿತ ಸಂಘರ್ಷ ಸಮಿತಿಯಿಂದ ೧೨ ರಂದು ಪ್ರತಿಭಟನಾ ಮೆರವಣಿಗೆ.

ರಾಜ್ಯದ ರೈತರ ಸಂಕಷ್ಟ ಮಿತಿಮೀರುತ್ತಿದೆ.ಅವರು ದಿನನಿತ್ಯ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ರೈತರು ನಮ್ಮ ನಾಡಿಗೇ ಅನ್ನ ನೀಡುವವರು. ಅವರು ಹತ್ತು ಹದಿನೆಂಟು ಸಮಸ್ಯೆಗಳನ್ನು ಎದರಿಸುತ್ತಿದ್ದರೂ, ತಮ್ಮ ಕಾಯಕದಲ್ಲಿ ತೊಡಗಿ ಇಡೀ ರಾಜ್ಯದ ಜನರಿಗೆ ಅನ್ನ ನೀಡುತ್ತಿದ್ದಾರೆ. ಅವರಿಗೆ ಒತ್ತಾಸೆಯಾಗಿ ಕೃಷಿ ಕೂಲಿಕಾರರು ತಮ್ಮ ಬೆವರು ಸುರಿಸಿ, ಕಾಳು-ಕಡಿ ಬೆಳೆದು, ಜನತೆಗೆ ಪೂರೈಸುತ್ತಿದ್ದಾರೆ ಎಂದು ಜಿಲ್ಲಾ ಸಂಚಾಲಕರಾದ ಮರಿಯಪ್ಪ ಕುಂಟೋಜಿ ಇವರು ತಿಳಿಸಿದ್ದಾರೆ.    
Please follow and like us:
error