ಕೊಪ್ಪಳ ನಗರವನ್ನು ಬಿಟ್ಟು ಹೋಗುತ್ತಿರುವದು ನೋವಿನ ಸಂಗತಿ- ಪ್ರೊ ಶಿವಪ್ಪ ಶಾಂತಪ್ಪನವರು.

ಕೊಪ್ಪಳ-20- ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ  ಸರ್ಕಾರಿ ಆದೇಶದ ಮೇರೆಗೆ ಪ್ರಾಚಾರ್ಯರಾಗಿ  ಒಂದು ವರ್ಷ ಎರಡು ತಿಂಗಳು ಕಾರ್ಯ ನಿರ್ವಹಿಸಿದ್ದ ಪ್ರೊ ಶಿವಪ್ಪ ಶಾಂತಪ್ಪನವರು ಮೂಲ ಸರ್ಕಾರಿ ಸೈನ್ನ ಕಾಲೇಜ್ ಬೆಂಗಳೂರಿಗೆ ವರ್ಗವಾದುದರಿಂದ ಅವರಿಗೆ  ಕಾಲೇಜಿನ ಅತಿಥಿ ಉಪನ್ಯಾಸಕ ವೃಂದದಿಂದ ಬೀಳ್ಕೊಡುವ ಹಾಗೂ ಸನ್ಮಾನಿಸುವ ಕಾರ್ಯಕ್ರಮವನ್ನು  ಕಾಲೇಜಿನಲ್ಲಿ  ಆಯೋಜಿಸಲಾಗಿತ್ತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿವಪ್ಪ ಶಾಂತಪ್ಪನವರು ಕೊಪ್ಪಳ ಐತಿಹಾಸಿಕ ಮತ್ತು ಸಾಂಸ್ಕೃತಿಕ ನಗರ. ರಾಜ್ಯಮಟ್ಟದಲ್ಲಿ ಹೆಸರನ್ನು ಮಾಡಿರುವಂತಹದ್ದು.  ಇಲ್ಲಿ  ಪ್ರಾಚಾರ್ಯನಾಗಿ ಸೇವೆ ಸಲ್ಲಿಸುವ ಭಾಗ್ಯ ಪಡೆದ ನಾನು ಅದೃಷ್ಟವಂತ.  ಏಕೆಂದರೆ  ಕೆಲವು ಕಾಲೇಜುಗಳಲ್ಲಿ ಉಪನ್ಯಾಸಕರು ಗುಂಪುಗಾರಿಕೆ ಮಾಡುತ್ತಾ ವ್ಯವಸ್ಥೆಯನ್ನು ಹಾಳುಗೆಡುವದರಲ್ಲಿ ತೊಡಗಿರುತ್ತಾರೆ. ಆದರೆ ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿನ ಪೂರ್ಣಕಾಲಿಕ ಹಾಗೂ ಅತಿಥಿ ಉಪನ್ಯಾಸಕರು, ಶಿಕ್ಷಕೇತರ ಬಳಗದಿಂದ ಯಾವುದೇ ಅಡೆತಡೆಗಳಿಲ್ಲ. ಅವರೆಲ್ಲ ತಮ್ಮ ಪಾಲಿನ ಕೆಲಸ ಕಾರ್ಯಗಳನ್ನು ಅತ್ಯುತ್ತಮವಾಗಿ ನಿರ್ವಹಿಸುತ್ತಿದ್ದಾರೆ.  ಹೊರಗಿನ ಜನರಿಂದ  ಹಾಗೂ ಕೆಲವು ವಿದ್ಯಾರ್ಥಿಗಳಿಂದ ಈ ಕಾಲೇಜಿಗೆ ಸಮಸ್ಯೆಗಳು ಬಂದಿವೆ ಹೊರತು  ನಿಜವಾಗಿಯೂ ಸಿಬ್ಬಂದಿ ವರ್ಗದಿಂದ ಬಂದಿರಲಿಲ್ಲ್ಲ. ಆತಿಥ್ಯ ಸತ್ಕಾರ ಮತ್ತು ಶ್ರೀಮಂತ ಸೌಜನ್ಯಕ್ಕೆ ಹೆಸರಾಗಿರುವ ಕೊಪ್ಪಳ ನಗರವನ್ನು ಬಿಟ್ಟು ಹೋಗುತ್ತಿರುವದು ನೋವಿನ ಸಂಗತಿ.  ಮುಂದಿನ ದಿನಮಾನಗಳಲ್ಲಿ ಸರ್ಕಾರ ಪೂರ್ಣಕಾಲಿಕ ಪ್ರಾಚಾರ್ಯರನ್ನು ನೇಮಿಸುವ ಕಾರ್ಯ ಮಾಡಲಿದೆ. ಆ ರೀತಿ ಮತ್ತೆ ನಾನು ನೇಮಕಗೊಂಡಲ್ಲಿ  ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಪುನ: ಬರುತ್ತೇನೆ. ಇಲ್ಲಿನ ಸೇವೆ  ಸಂಪೂರ್ಣ ತೃಪ್ತಿ ತಂದಿದೆ ಎಂದರು. ಇದೇ ಸಂದರ್ಭದಲ್ಲಿ ನೂತನ ಪ್ರಾಚಾರ್ಯರಾಗಿರುವ ಪ್ರೊ ತಿಮ್ಮಾರೆಡ್ಡಿ ಮೇಟಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ವೀರಣ್ಣ ಎಸ್ ಸಜ್ಜನರ್, ಡಾ.ಪ್ರಕಾಶ ಬಳ್ಳಾರಿ, ಎಂ.ಶಿವಣ್ಣ, ಶ್ರೀಮತಿ ಗೀತಾ ಮಾತನಾಡಿದರು. ಅತಿಥಿ ಉಪನ್ಯಾಸಕರಾದ ಡಾ.ತುಕಾರಾಂ ನಾಯ್ಕ, ಜ್ಞಾನೇಶ ಪತ್ತಾರ, ಪ್ರಕಾಶ ಜಡಿ, ಶರಣಪ್ಪ ತಳವಾರ, ಅಶೋಕ ಎಕಲಾಸಪುರ, ಬಸಪ್ಪ ಶಿರಗೇರಿ, ಬಸವರಾಜ ಹುಳುಕಣ್ಣ, ಮನೋಜ್, ದೇವೆಂದ್ರಸ್ವಾಮಿ, ಮಹಮ್ಮದ್ ಗೌಸ್, ಗೋಣಿಬಸಪ್ಪ, ಅನುರಾದ, ಸುಧಾ, ಮಂಗಳಾ, ಪುನೀತಾ, ವೆಂಕಮ್ಮ ಮೊದಲಾದವರು ಉಪಸ್ಥಿತರಿದ್ದರು. ಡಾ.ವೆಂಕನಗೌಡ ನಿರೂಪಿಸಿದರು.

Please follow and like us:
error