ಡಿ.೦೩ ರಿಂದ ೦೮ ರವರೆಗೆ ಕರಿಯಮ್ಮದೇವಿ ಹಾಗೂ ಮಾರುತೇಶ್ವರನ ಕಾರ್ತಿಕೋತ್ಸವ.

ಕೊಪ್ಪಳ-02- ತಾಲೂಕಿನ ಹಿರೇಬಗನಾಳ ಗ್ರಾಮದಲ್ಲಿ ಶ್ರೀ ಕರಿಯಮ್ಮ ದೇವಿ, ಶ್ರೀ ಮಾರುತೇಶ್ವರನ ಕಾರ್ತಿಕೋತ್ಸವ  ಹಾಗೂ ೨೩ನೇ ಶ್ರೀ ಗವಿಸಿದ್ದೇಶ್ವರ ರಥೋತ್ಸವ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಡಿ.೦೩ ರಿಂದ ೦೮ ರವರೆಗೆ ಜರುಗಲಿವೆ. ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳಾದ ಡಿ.೦೩ ರಂದು ಶ್ರೀ ಗವಿಮಠದ ಹತ್ತಿರ ಬಸವ ಪಟ (ಧ್ವಜಾರೋಹಣ) ಜಾತ್ರಾ ಕಾರ್ಯಕ್ರಮ ಪ್ರಾರಂಭ ಹಾಗೂ ಶ್ರೀದೇವಿಯ ಕಂಕಣಧಾರೆ, ಡಿ.೦೪ ರಂದು ಅಭಿಷೇಕ, ಕೊಂಡ ಪೂಜೆ, ಕಾರ್ತಿಕೋತ್ಸವ, ಸಣ್ಣ ರಥೋತ್ಸವ, ಗಂಗಾ ಮಾತೆಯ ದರ್ಶನ, ಬೆಳಗು ಮುಂಜಾನೆ ಶ್ರೀದೇವಿಯ ಪಾಯಸ, ಅಗ್ನಿ, ಡಿ.೦೫ ರಂದು ಶ್ರೀ ಮಾರುತೇಶ್ವರನಿಗೆ ಕುಂಕುಮ ಪೂಜೆ, ಗಿಡ, ಅಗ್ನಿ, ಮುಳ್ಳು ಪಾಲ್ಕಿ, ಮನರಂಜನೆಯ ಅಂಗವಾಗಿ ಡೊಳ್ಳಿನ ವಾದ್ಯ ಅನ್ನಸಂತರ್ಪಣೆ, ಡಿ.೦೬ ರಂದು ಲಿಂ.ಶ್ರೀ ಗವಿಸಿದ್ದೇಶ್ವರ ಸ್ವಾಮಿ ಗದ್ದುಗೆಗೆ ಅಭಿಷೇಕ, ಸಂಜೆ ೫.೩೦ ಕ್ಕೆ ಶ್ರೀ ಗವಿಸಿದ್ದೇಶ್ವರ ರಥೋತ್ಸವ, ಶ್ರೀಗಳಿಂದ ಆಶೀರ್ವಚನ, ಡಿ.೦೭ ರಂದು ಶ್ರೀ ಗವಿಸಿದ್ದೇಶ್ವರ ಮೂರ್ತಿ ಉತ್ಸವ ಹಾಗೂ ಮದ್ದಿನ ಕಾರ್ಯಕ್ರಮ, ಕಡಬಿನ ಕಾಳಗ ಸೇರಿದಂತೆ ಅನೇಕ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಿದವು.
ಕಾರ್ಯಕ್ರಮದಲ್ಲಿ ಕೊಪ್ಪಳ ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು, ಹಿರೇಸಿಂದೋಗಿಯ ಕಪ್ಪತ್ತಮಠದ ಶ್ರೀ ಚಿದಾನಂದ ಸ್ವಾಮಿಗಳು, ಬೆದವಟ್ಟಿ ಹಿರೇಮಠದ ಶ್ರೀ ಶಿವಸಂಗಮೇಶ್ವರ ಶಿವಚಾರ್ಯ ಸ್ವಾಮಿಗಳು, ಮಂಗಳೂರ ಅರಳಲೆ ಹಿರೇಮಠದ ಸಿದ್ದಲಿಂಗ ಶಿವಚಾರ್ಯ ಸ್ವಾಮಿಗಳು, ಹೂವಿನಹಡಗಲಿಯ ಶಾಖಾ ಗವಿಮಠದ ಹಿರೇಶಾಂತವೀರ ಮಹಾಸ್ವಾಮಿಗಳು, ಹೆಬ್ಬಾಳದ ಬೃಹನ್ಮಠ ಶ್ರೀ ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು, ಮೈನಳ್ಳಿ ಹಿರೇಮಠದ ಶ್ರೀ ಸಿದ್ಧೇಶ್ವರ ಶಿವಚಾರ್ಯ ಸ್ವಾಮಿಗಳು, ಬಳಗಾನೂರಿನ ಚಿಕ್ಕೇನಕೊಪ್ಪದ ಚೆನ್ನವೀರ ಶರಣಮಠದ ಶಿವಶಾಂತವೀರ ಶರಣರು, ಹಾಲವರ್ತಿಯ ಕಾಗಿನೆಲೆ ಶಾಖಾಮಠದ ಶ್ರೀ ಜಡೇಶ್ವರ ಸ್ವಾಮಿಗಳು, ಕರ್ಕಿಹಳ್ಳಿಯ ಚಿದಂಬರ ದೇವಸ್ಥಾನದ ಶ್ರೀ ಸುರೇಶ ಗುರೂಜಿ ಪಾಲ್ಗೊಳ್ಳಲಿದ್ದಾರೆ.  ಮುಖ್ಯ ಅತಿಥಿಗಳಾಗಿ ಸಂಸದ ಸಂಗಣ್ಣ ಕರಡಿ, ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ.

Related posts

Leave a Comment