ದಕ್ಷಿಣ ರಾಜ್ಯಗಳ ವಲಯ ಮಟ್ಟದ ವಿಜ್ಞಾನ ಮೇಳಕ್ಕೆ ಆಯ್ಕೆ.

ಕೊಪ್ಪಳ, ಜ.೦೮ (ಕ ವಾ) ಎನ್.ಸಿ.ಇ.ಆರ್.ಟಿ ನವದೆಹಲಿ, ಎನ್.ಸಿ.ಎಸ್.ಎಂ ಕಲ್ಕತ್ತಾ ಮತ್ತು ಡಿ.ಎಸ್.ಇ.ಆರ್.ಟಿ ಬೆಂಗಳೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಚಿಕ್ಕಮಗಳೂರಿನಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿದ್ದ ಕೊಪ್ಪಳ ತಾಲೂಕಿನ ಟಣಕನಕಲ್ ಗ್ರಾಮದ ಆದರ್ಶ ವಿದ್ಯಾಲಯ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದು ದಕ್ಷಿಣ ರಾಜ್ಯಗಳ ವಲಯ ಮಟ್ಟದ ವಿಜ್ಞಾನ ಮೇಳಕ್ಕೆ ಆಯ್ಕೆಗೊಂಡಿದ್ದಾರೆ.ವಿದ್ಯಾಲಯದ ವಿದ್ಯಾರ್ಥಿಗಳಾದ ವಿಶಾಲಾಕ್ಷಿ ಮತ್ತು ಗಗನ.ಡಿ ಇವರು
ಕೈಗಾರಿಕಾ ವಿಷಯದಲ್ಲಿನ ಮಾದರಿಗೆ ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದು ಈ ಸಾಧನೆ
ಮಾಡಿದ್ದಾರೆ. ವಿದ್ಯಾಲಯದ ಶಿಕ್ಷಕಿ ಸುನೀತ ಎನ್.ಕೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ
ನೀಡಿದ್ದರು. ವಿದ್ಯಾರ್ಥಿಗಳ ಸಾಧನೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ್ ಪೂಜಾರ ಹಾಗೂ
ವಿದ್ಯಾಲಯದ ಮುಖ್ಯಗುರುಗಳಾದ ಮಹಾಂತೇಶ ಕೆ ಇವರು ಅಭಿನಂದನೆ ಸಲ್ಲಿಸಿದ್ದಾರೆ ಎಂದು
ತಿಳಿಸಿದೆ.

Please follow and like us:
error