ಕಟ್ಟಬೇಕಿದೆ

ಅರೆಬೆಂದ, ಸುಟ್ಟ
ದೇಹದ ಮೇಲೆ
ಮುಲಾಮು ಹಚ್ಚಬೇಕಿದೆ,
ಕೊಳೆತ ವಾಸನೆ ಹೆಚ್ಚಾಗದಂತೆ
ಸೆಂಟು ಹೊಡೆಯಬೇಕಿದೆ
ಒತ್ತರಿಸಿ ಬರುವ
ನೆನಪುಗಳ ಮರೆಯಬೇಕಿದೆ
ನಾಳೆಯ ಹೊಸ ಕನಸುಗಳಿಗಾಗಿ 
ಕಣ್ಣು ತೆರೆಯಬೇಕಿದೆ
ರೆಕ್ಕೆಯಗಲಿಸಿ ಕುಳಿತ ಹದ್ದುಗಳ
ಹೊಡೆದೊಡಿಸಿ,
ಪಾರಿವಾಳಗಳ ಕೂಗಿ,
ಬಿದ್ದ  ಮೀನಾರುಗಳ 
ಇಟ್ಟಿಗೆಯಿಂದಲೇ
ಕಟ್ಟಬೇಕಿದೆ 
ಹೊಸ ಬದುಕು !

Leave a Reply