ವಿತ್ತೀಯ ಕೊರತೆ ನಿಭಾಯಿಸುವಲ್ಲಿ ಸರ್ಕಾರ ಯಶಸ್ವಿ: ಬಸವರಾಜ ರಾಯರೆಡ್ಡಿ

ರಾಜ್ಯದಲ್ಲಿ ಸಂಪನ್ಮೂಲ ಸಂಗ್ರಹ ಹೆಚ್ಚಳ, 

ಬೆಂಗಳೂರು, ಫೆಬ್ರವರಿ 3  : ರಾಜ್ಯದಲ್ಲಿ ಸಂಪನ್ಮೂಲ ಸಂಗ್ರಹ ಹೆಚ್ಚಳವಾಗಿದೆಯಲ್ಲದೆ, ವಿತ್ತೀಯ ಕೊರತೆಯನ್ನು ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿದೆ ಎಂದು ಆಡಳಿತಾರೂಢಾ ಕಾಂಗ್ರೆಸ್ ಪಕ್ಷದ ಶಾಸಕ   ಬಸವರಾಜ ರಾಯರೆಡ್ಡಿ ಅವರು ರಾಜ್ಯ ವಿಧಾನ ಸಭೆಯಲ್ಲಿ  ಮಂಗಳವಾರ ಸರ್ಕಾರವನ್ನು ಸಮರ್ಥನೆ ಮಾಡಿಕೊಂಡರು.ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಯನ್ನು ಪ್ರಾರಂಭಿಸಿ ಮಾತನಾಡಿದ ಅವರು ವಾಣಿಜ್ಯ ತೆರಿಗೆಯಲ್ಲಿ 42,000 ಕೋಟಿ ರೂ ಸಂಗ್ರಹಿಸುವ ಗುರಿಗೆ ಪ್ರತಿಯಾಗಿ ಪ್ರಸಕ್ತ ಸಾಲಿನಲ್ಲಿ ಶೇಕಡಾ 17 ರಷ್ಟು ಸಂಗ್ರಹಣೆಯಲ್ಲಿ ಹೆಚ್ಚಳವಾಗಿದೆ. ಅದೇ ರೀತಿ ಅಬಕಾರಿಯಲ್ಲಿಯೂ ರಾಜಧನ ಸಂಗ್ರಹಣೆ ಶೇಕಡಾ 9.9 ರಷ್ಟು ಅಧಿಕವಾಗಿದೆ. ಮುದ್ರಾಂಕ ಮತ್ತು ನೋಂದಣೆಯಲ್ಲಿ ಈಗಾಗಲೇ 4,500 ಕೋಟಿ ರೂ ಆದಾಯ ಸ್ವೀಕೃತವಾಗಿದೆ. ಮೋಟಾರು ವಾಹನ ತೆರಿಗೆ  ಸಂಗ್ರಹಣೆಯಲ್ಲಿಯೂ ನಿಗದಿತ ಗುರಿ ಸಾಧಸಲಾಗುವುದು ಎಂದರು.
ಒಟ್ಟಾರೆ ಪ್ರಸಕ್ತ ಸಾಲಿನ ಆಯವ್ಯಯದಲ್ಲಿ 69,890 ಕೋಟಿ ರೂ ಸಂಪನ್ಮೂಲ ಸಂಗ್ರಹದ ಗುರಿ ಇತ್ತು. ಈಗಾಗಲೇ ಸರಾಸರಿ ಶೇಕಡಾ 12.9 ರಷ್ಟು ಗುರಿ ಮೀರಿ ಸಾಧನೆಯಾಗಿದೆ ಎಂದು  ಕೇಂದ್ರ ಮಹಾಲೇಖಪಾಲರ ವರದಿಯ ಅಂಕಿ-ಅಂಶಗಳನ್ನು  ರಾಯರೆಡ್ಡಿ ಅವರು ಉಲ್ಲೇಖಿಸಿದರು.ರಾಷ್ಟ್ರದಲ್ಲಿಯೇ ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ಪ್ರಪ್ರಥಮ ಸ್ಥಾನದಲ್ಲಿದೆ.ಎರಡನೇ ಸ್ಥಾನದಲ್ಲಿ ತಮಿಳುನಾಡು, ಮೂರನೇ ಸ್ಥಾನದಲ್ಲಿ ಮಧ್ಯ ಪ್ರದೇಶ, ನಾಲ್ಕನೇ ಸ್ಥಾನದಲ್ಲಿ ಕೇರಳ, ಅಂತೆಯೇ ಎಂಟನೇ ಸ್ಥಾನದಲ್ಲಿ ಗುಜರಾಜ್ ರಾಜ್ಯ ಇದೆ ಎಂದು   ಬಸವರಾಜ ರಾಯರೆಡ್ಡಿ ಅವರು ಸದನಕ್ಕೆ ಮಾಹಿತಿ ನೀಡಿದರು.
ಆಂತರಿಕ ಉತ್ಪನ್ನ 6,89,200 ಕೋಟಿ ರೂ ಇದ್ದು, ಒಟ್ಟು ಶೇಕಡಾ 12.9 ರಷ್ಟು ಹೆಚ್ಚುವರಿ ಉತ್ಪನ್ನ ಸಂಗ್ರಹವಾಗಿದೆ. ಈ ವರ್ಷದ ಯೋಜನಾ ಯೋಜನಾ ಗಾತ್ರ 65,600 ಕೋಟಿ ರೂ ಇದೆ.
ನವೆಂಬರ್ ಅಂತ್ಯದ ವೇಳೆಗೆ 25,795 ಕೋಟಿ ರೂ ವೆಚ್ಚ ಮಾಡಿ, ಶೇಕಡಾ 44.8 ರಷ್ಟು ಗುರಿ ಸಾಧಿಸಲಾಗಿದೆ. ಕಳೆದ ವರ್ಷ ಯೋಜನಾ ಗಾತ್ರದಲ್ಲಿ ಇದೇ ಅವಧಿಗೆ ಶೇಕಡಾ 40.1 ರಷ್ಟು ವೆಚ್ಚ ಮಾಡಲಾಗಿತ್ತು. ರಾಜ್ಯ ಸರ್ಕಾರ ಕಡು ಬಡವರಿಗೆ ಅಗ್ಗದ ದರದಲ್ಲಿ ಆಹಾರ ಧಾನ್ಯ ನೀಡುತ್ತಿರುವುದರಿಂದ ವಾರ್ಷಿಕವಾಗಿ 5,000 ಕೋಟಿ ರೂ ವೆಚ್ಚ ಮಾಡಲಾಗುತ್ತಿದೆ. ಒಣ ಭೂಮಿ ಪ್ರದೇಶದಲ್ಲಿ ಕೃಷಿ ಅಭಿವೃದ್ಧಿಗೆ 500 ಕೋಟಿ ರೂ ಅನುದಾನವನ್ನು ಮೀಸಲಿರಿಸಲಾಗಿದೆ.ರಾಜ್ಯ ಸರ್ಕಾರ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದ ಅವರು ಪ್ರತಿಪಕ್ಷಗಳು ಸದನದ ಹೊರಗೆ ಮಾಡಿದ ಟೀಕೆ-ಟಿಪ್ಪಣಿಗಳಿಗೆ ಅಂಕಿ-ಅಂಶಗಳನ್ನು ಬಹಿರಂಗಪಡಿಸಿ, ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು.
Please follow and like us:
error